ವಿಜಿಎಫ್ ಸ್ಕೀಮ್​ಗೆ ಸಂಪುಟ ಅನುಮೋದನೆ; ಬ್ಯಾಟರಿ ಶಕ್ತಿ ಸಂಗ್ರಹಣೆ ವ್ಯವಸ್ಥೆ ಸಿಗಲಿದೆ ಪುಷ್ಟಿ

|

Updated on: Sep 06, 2023 | 4:51 PM

Union Cabinet Approves VGF Scheme: ದೇಶದಲ್ಲಿ ವಿದ್ಯುತ್ ಸಮಸ್ಯೆ ನೀಗಿಸುವ ಉದ್ದೇಶದಿಂದ ರೂಪಿಸಲಾಗಿರುವ ವಯಬಿಲಿಟಿ ಗ್ಯಾಪ್ ಫಂಡಿಂಗ್ ಸ್ಕೀಮ್​ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂನ ಬಲವರ್ಧಿಸಲು ಸರ್ಕಾರ ವಿಜಿಎಫ್ ಸ್ಕೀಮ್ ರೂಪಿಸಿದೆ. ಇದರಲ್ಲಿ ಬಿಇಎಸ್​ಎಸ್ ತಯಾರಕರಿಗೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಈ ಫಂಡಿಂಗ್​ಗಾಗಿ ಸರ್ಕಾರ 9,400 ಕೋಟಿ ರೂ ಔಟ್​ಲೇ ಇಟ್ಟಿದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮರುಬಳಕೆ ಇಂಧನವನ್ನು ಬಿಇಎಸ್​ಎಸ್​ನಲ್ಲಿ ಹಿಡಿದಿಟ್ಟುಕೊಳ್ಳಬಹುದು.

ವಿಜಿಎಫ್ ಸ್ಕೀಮ್​ಗೆ ಸಂಪುಟ ಅನುಮೋದನೆ; ಬ್ಯಾಟರಿ ಶಕ್ತಿ ಸಂಗ್ರಹಣೆ ವ್ಯವಸ್ಥೆ ಸಿಗಲಿದೆ ಪುಷ್ಟಿ
ಅಮೆರಿಕದಲ್ಲಿ ಜಿಇ ಕಂಪನಿ ಸ್ಥಾಪಿಸಿದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂನ ಚಿತ್ರ ಇದು.
Follow us on

ನವದೆಹಲಿ, ಸೆಪ್ಟೆಂಬರ್ 6: ವಾಯು ಶಕ್ತಿ ಮತ್ತು ಸೌರಶಕ್ತಿಯಿಂದ ತಯಾರಾಗುವ ವಿದ್ಯುತ್ ಅನ್ನು ಹಿಡಿದುಕೊಳ್ಳುವ ಬ್ಯಾಟರಿ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF- Viability Gap Funding) ಸ್ಕೀಮ್ ಅನ್ನು ಕೇಂದ್ರ ರೂಪಿಸಿದೆ. ಈ ಯೋಜನೆಗೆ ಕೇಂದ್ರ ಸಂಪುಟ ಸೆಪ್ಟೆಂಬರ್ 6ರಂದು ಅನುಮೋದನೆ ನೀಡಿದೆ. ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳ (BESS- Battery Enerty Storage System) ಅಭಿವೃದ್ಧಿಗೆ ವಿಜಿಪಿ ಸ್ಕೀಮ್ ಹಣಕಾಸು ನೆರವು ಒದಗಿಸುತ್ತದೆ. 2030-31ರಷ್ಟರಲ್ಲಿ 4,000 ಎಂಡಬ್ಲ್ಯುಎಚ್​ ಸಾಮರ್ಥ್ಯದಷ್ಟು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳ ಅಭಿವೃದ್ಧಿ ಆಗಬೇಕೆಂಬ ಗುರಿಯಿಂದ ವಿಜಿಎಫ್ ಸ್ಕೀಮ್ ತರಲಾಗಿದೆ. ಈ ಸ್ಕೀಮ್​ನಲ್ಲಿ ಶೇ. 40ರಷ್ಟು ಬಂಡವಾಳ ವೆಚ್ಚವನ್ನು (Capital Cost) ಭರಿಸಲಾಗುತ್ತದೆ. ಈ ಸ್ಕೀಮ್ ಜಾರಿಯಾದರೆ ಬ್ಯಾಟರಿ ಸಂಗ್ರಹಣಾ ವ್ಯವಸ್ಥೆಯ ವೆಚ್ಚ ಬಹಳಷ್ಟು ಕಡಿಮೆ ಆಗುತ್ತದೆ.

ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳ ಅಭಿವೃದ್ಧಿಗೆ ರೂಪಿಸಿರುವ ವಯಬಿಲಿಟಿ ಗ್ಯಾಫ್ ಫಂಡಿಂಗ್ ಸ್ಕೀಮ್​ಗೆ ಸರ್ಕಾರ 9,400 ಕೋಟಿ ರೂ ಹಣ ಇರಿಸಿದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮರುಬಳಕೆ ಇಂಧನ ಮೂಲಗಳಿಂದ ವಿದ್ಯುತ್ ಸಂಗ್ರಹಿಸಲು ಸಹಾಯಕವಾಗಲಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಕಡಿಮೆ ಬೆಲೆಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗಲಿದೆ. ಸಂಗ್ರಹಣ ವೆಚ್ಚ ಪ್ರತೀ ಕೆಡಬ್ಲ್ಯುಎಚ್​ಗೆ 5.50ರಿಂದ 6.50 ರೂ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವುದು ವಿಜಿಎಫ್ ಸ್ಕೀಮ್​ನ ಗುರಿಯಾಗಿದೆ. ದೇಶಾದ್ಯಂತ ವಿದ್ಯುತ್ ಬಳಕೆ ಅತಿ ಹೆಚ್ಚು ಇದ್ದ ಅವಧಿಯಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳಿಂದ ವಿದ್ಯುತ್ ಸರಬರಾಜು ಮಾಡಬಹುದು.

ಇದನ್ನೂ ಓದಿ: ಜೆಲುಸಿಲ್ ಮಾದರಿಯ ಡೈಜೀನ್ ಜೆಲ್ ಬಳಸುತ್ತಿದ್ದೀರಾ? ತತ್​ಕ್ಷಣವೇ ನಿಲ್ಲಿಸಿ; ಸರ್ಕಾರದಿಂದ ಹೊರಟ ಈ ಪ್ರಕಟಣೆ ಗಮನಿಸಿ

ಬಿಇಎಸ್​ಎಸ್​ನಲ್ಲಿ ಸಂಗ್ರಹವಾಗುವ ಶೇ. 85ಕ್ಕಿಂತಲೂ ಹೆಚ್ಚು ರಿನಿವಬಲ್ ಎನರ್ಜಿಯನ್ನು ಡಿಸ್ಕಾಂಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಈಗಿರುವ ಎಲೆಕ್ಟ್ರಿಸಿಟಿ ಗ್ರಿಡ್​ಗಳಿಗೆ ರಿನಿವಬಲ್ ಎನರ್ಜಿಯನ್ನು ಸಮ್ಮಿಳಿತಗೊಳಿಸಲಾಗುತ್ತದೆ. ಇನ್​ಫ್ರಾಸ್ಟ್ರಕ್ಚರ್ ಅಪ್​ಗ್ರೇಡ್ ಮಾಡಲು ಬೇಕಾದ ದುಬಾರಿ ವೆಚ್ಚ ಕಡಿಮೆ ಆಗುತ್ತದೆ.

ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳನ್ನು ತಯಾರಿಸುವ ಸಂಸ್ಥೆಗಳಿಗೆ ವಿಜಿಎಫ್ ಗ್ರ್ಯಾಂಟ್ ಕೊಡಲು ಬಿಡ್ಡಿಂಗ್ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳು ಪಾಲ್ಗೊಳ್ಳಬಹುದು. ಬಿಇಎಸ್​ಎಸ್ ಇಕೋಸಿಸ್ಟಂನ ಅಭಿವೃದ್ಧಿಗೆ ವಿಜಿಎಫ್ ಪೂರಕವಾಗಿ ಕೆಲಸ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ