ಯುಪಿಐ ವಹಿವಾಟು: ಏಪ್ರಿಲ್ 1ರಿಂದ ಮೊಬೈಲ್ ವೆರಿಫಿಕೇಶನ್​​ಗೆ ಹೊಸ ನಿಯಮಗಳು; ಹಣ ಪಾವತಿ ಕ್ಷಮತೆ ಹೆಚ್ಚಿಸಲು ಎನ್​​​ಪಿಸಿಐ ಕ್ರಮ

|

Updated on: Mar 26, 2025 | 2:02 PM

UPI mobile number verification: ಬ್ಯಾಂಕುಗಳು, ಪಿಎಸ್​​ಪಿಗಳು, ಥರ್ಡ್ ಪಾರ್ಟಿ ಯುಪಿಐ ಪ್ಲಾಟ್​​ಫಾರ್ಮ್​​ಗಳು ಏಪ್ರಿಲ್ 1ರಿಂದ ಹೊಸ ಮೊಬೈಲ್ ವೆರಿಫಿಕೇಶನ್ ನಿಯಮಗಳನ್ನು ಪಾಲಿಸಬೇಕು. ಎನ್​​​ಪಿಸಿಐ ಈ ನಿಯಮ ರೂಪಿಸಿದೆ. ಅದರ ಪ್ರಕಾರ ಪ್​ರತೀ ವಾರವೂ ಈ ಸಂಸ್ಥೆಗಳು ಗ್ರಾಹಕರ ಮೊಬೈಲ್ ನಂಬರ್ ಪರಿಶೀಲಿಸಿ ಅದನ್ನು ಪ್ರತ್ಯೇಕ ಡಾಟಾಬೇಸ್​​​ನಲ್ಲಿ ಅಪ್​​ಡೇಟ್ ಮಾಡಬೇಕಾಗುತ್ತದೆ.

ಯುಪಿಐ ವಹಿವಾಟು: ಏಪ್ರಿಲ್ 1ರಿಂದ ಮೊಬೈಲ್ ವೆರಿಫಿಕೇಶನ್​​ಗೆ ಹೊಸ ನಿಯಮಗಳು; ಹಣ ಪಾವತಿ ಕ್ಷಮತೆ ಹೆಚ್ಚಿಸಲು ಎನ್​​​ಪಿಸಿಐ ಕ್ರಮ
ಯುಪಿಐ ಸರ್ವಿಸ್
Follow us on

ನವದೆಹಲಿ, ಮಾರ್ಚ್ 26: ಮೊಬೈಲ್ ನಂಬರ್ ಬದಲಾವಣೆ ಮಾಡುವುದರಿಂದ ಯುಪಿಐ ಪಾವತಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಎನ್​​ಪಿಸಿಐ ಹೊಸ ನಿಯಮಗಳನ್ನು ರೂಪಿಸಿದೆ. ಅಂಕಿಗಳಿರುವ ಯುಪಿಐ ಐಡಿಗಳನ್ನು ಬಳಸುವ ವಿಚಾರದಲ್ಲಿ ಯುಪಿಐ ಪೇಮೆಂಟ್ ಆ್ಯಪ್​​ಗಳು, ಥರ್ಡ್ ಪಾರ್ಟಿ ಯುಪಿಐ ಪ್ಲಾಟ್​​ಫಾರ್ಮ್​​ಗಳಿಗೆ ಅದು ಕೆಲ ನಿರ್ದೇಶನಗಳನ್ನು ನೀಡಿದೆ. ಯುಪಿಐ ಸರ್ವಿಸ್ ನೀಡುತ್ತಿರುವ ಎಲ್ಲಾ ಸಂಸ್ಥೆಗಳೂ (UPI service providers) ಕೂಡ ಮಾರ್ಚ್ 31ರಷ್ಟರಲ್ಲಿ ಈ ಹೊಸ ನಿಯಮಗಳಿಗೆ ಸಂಬದ್ಧವಾಗಿರಬೇಕು. ಏಪ್ರಿಲ್ 1ರಿಂದ ಹೊಸ ನಿಯಮಗಳ ಪಾಲನೆಯಾಗಬೇಕು.

ನಿಯಮಿತವಾಗಿ ಮೊಬೈಲ್ ನಂಬರ್ ಪರಿಶೀಲನೆಯಾಗಬೇಕು

ಬ್ಯಾಂಕುಗಳು, ಪೇಮೆಂಟ್ ಸರ್ವಿಸ್ ನೀಡುಗರು ಮೊಬೈಲ್ ನಂಬರ್ ರಿವೋಕೇಶನ್ ಪಟ್ಟಿ ಅಥವಾ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್​​ಫಾರ್ಮ್ ಅನ್ನು ಬಳಸಿ, ಪ್ರತೀ ವಾರವೂ ಡಾಟಾಬೇಸ್ ಅಪ್​​​ಡೇಟ್ ಮಾಡಬೇಕು. ಮೊಬೈಲ್ ನಂಬರ್ ನಿಷ್ಕ್ರಿಯಗೊಂಡಿದ್ದರೆ, ಆ ನಂಬರ್ ಅನ್ನು ಡಾಟಾಬೇಸ್​​ನಲ್ಲಿ ಅಪ್​ಡೇಟ್ ಮಾಡಬೇಕು.

ಅಂಕಿಗಳ ಯುಪಿಐ ಐಡಿ ಅಪ್​​ಡೇಟ್ ಮಾಡಲು ಅನುಮತಿ

ಯುಪಿಐ ಬಳಕೆದಾರರಿಗೆ ನ್ಯೂಮರಿಕ್ ಯುಪಿಐ ಐಡಿಗಳನ್ನು ನೀಡುವ ಮುನ್ನ ಅಥವಾ ಅಪ್​​ಡೇಟ್ ಮಾಡುವ ಮುನ್ನ ಅವರಿಂದ ಅನುಮತಿ ಪಡೆಯಬೇಕು ಎನ್ನುವ ನಿಯಮವನ್ನು ಮಾಡಲಾಗಿದೆ. ಸಾಮಾನ್ಯವಾಗಿ ಯುಪಿಐ ಬಳಕೆದಾರರಿಗೆ ಡೀಫಾಲ್ಟ್ ಆಗಿ ಈ ಫೀಚರ್ ಇರುವುದಿಲ್ಲ. ಅವರಿಗೆ ಈ ಫೀಚರ್ ಬೇಕೆಂದರೆ ಆಪ್ಟ್ ಇನ್ ಆಗಬೇಕು. ಆಗ ಮಾತ್ರ ನ್ಯೂಮರಿಕ್ ಐಡಿಯನ್ನು ನೀಡಬಹುದು.

ಇದನ್ನೂ ಓದಿ
ಮೊದಲ ಮೇಡ್ ಇನ್ ಇಂಡಿಯಾ ಎಂಆರ್​​ಐ ಸ್ಕ್ಯಾನರ್
ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕದಲ್ಲಿ ಹೆಚ್ಚಳ
ವಿದೇಶೀ ಹೂಡಿಕೆದಾರರಿಗೆ ನಿಯಮ ಸಡಿಲಿಸಿದ ಸೆಬಿ
ಸಣ್ಣ ಮೊತ್ತದ ಯುಪಿಐ ಪಾವತಿಗೆ ಇನ್ಸೆಂಟಿವ್; ಸಂಪುಟ ಅನುಮೋದನೆ

ಇದನ್ನೂ ಓದಿ: ಸರ್ಕಾರದಿಂದ ಎಸ್​​ಯುಸಿ ದರ ಮನ್ನಾ ಸಾಧ್ಯತೆ; ಏರ್​​ಟೆಲ್, ಜಿಯೋ, ವೊಡಾಫೋನ್​​ಗೆ ಸಾವಿರಾರು ಕೋಟಿ ರೂ ಉಳಿತಾಯ

ಮೊಬೈಲ್ ನಂಬರ್ ಹೇಗೆ ನಿಷ್ಕ್ರಿಯಗೊಳ್ಳುತ್ತದೆ? ಯುಪಿಐನಲ್ಲಿ ಏನು ಸಮಸ್ಯೆಯಾಗುತ್ತೆ?

ನಿಮ್ಮ ಮೊಬೈಲ್ ನಂಬರ್ ಬಳಸಿ ನೀವು ಮೂರು ತಿಂಗಳ ಕಾಲ ಯಾವುದೇ ಕರೆ ಅಥವಾ ಮೆಸೇಜ್ ಮಾಡದೇ ಇದ್ದರೆ, ಅಥವಾ ಡಾಟಾ ಬಳಕೆ ಮಾಡದೇ ಇದ್ದರೆ, ಆಗ ಅದನ್ನು ಸೇವೆಯಿಂದ ಡಿಸ್​​ಕನೆಕ್ಟ್ ಮಾಡಲಾಗುತ್ತದೆ. ಬಳಿಕ ಸ್ವಲ್ಪ ಸಮಯದ ನಂತರ ಆ ಮೊಬೈಲ್ ನಂಬರ್ ಅನ್ನು ಬೇರೊಬ್ಬರಿಗೆ ನೀಡಬಹುದು.

ನಿಷ್ಕ್ರಿಯಗೊಂಡ ಆ ಮೊಬೈಲ್ ನಂಬರ್ ಅನ್ನು ಬ್ಯಾಂಕ್ ಮತ್ತು ಯುಪಿಐ ಆ್ಯಪ್​ಗಳಲ್ಲಿ ಬಳಸುತ್ತಿದ್ದರೆ ಆಗ ಸಮಸ್ಯೆಯಾಗಬಹುದು. ಆ ನಂಬರ್ ಪಡೆದ ಹೊಸ ಗ್ರಾಹಕರಿಗೆ ನಿಮ್ಮ ಯುಪಿಐ ಸರ್ವಿಸ್ ಸಿಗಬಹುದು. ಅಂದರೆ, ನಿಮಗೆ ಕಳುಹಿಸಲು ಉದ್ದೇಶಿಸಿದ್ದ ಹಣವು ಆ ಹೊಸ ಬಳಕೆದಾರರಿಗೆ ಹೋಗಿಬಿಡಬಹುದು.

ಇದನ್ನೂ ಓದಿ: ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ; ಎಸ್​ಬಿ ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ; ಏಪ್ರಿಲ್ 1ರಿಂದ ಬದಲಾವಣೆಗಳನ್ನು ಗಮನಿಸಿ

ಹೀಗಾಗಿ, ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯಗೊಂಡಿದ್ದರೆ, ಅಥವಾ ಬೇರೆ ನಂಬರ್​​ಗೆ ಬದಲಾಯಿಸಿಕೊಂಡಿದ್ದರೆ ಆಗ ಅದನ್ನು ಬ್ಯಾಂಕ್​​ನಲ್ಲಿ ಅಪ್​ಡೇಟ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಯುಪಿಐ ಸರ್ವಿಸ್ ಸಿಗುವುದಿಲ್ಲ. ನೀವು ಅಪ್​ಡೇಟ್ ಮಾಡಿದ ಮೊಬೈಲ್ ನಂಬರ್ ಅನ್ನು ಬ್ಯಾಂಕ್ ಮತ್ತು ಯುಪಿಐ ಆ್ಯಪ್​​ಗಳು ಪ್ರತ್ಯೇಕ ಡಾಟಾಬೇಸ್​​ನಲ್ಲಿ ಅಪ್​​ಡೇಟ್ ಮಾಡುತ್ತವೆ. ಈ ಕೆಲಸ ಇನ್ಮುಂದೆ ಪ್ರತೀ ವಾರವೂ ಆಗಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ