AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ; ಎಸ್​ಬಿ ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ; ಏಪ್ರಿಲ್ 1ರಿಂದ ಬದಲಾವಣೆಗಳನ್ನು ಗಮನಿಸಿ

New banking rules from April: ಮುಂದಿನ ತಿಂಗಳಿಂದ ಕೆಲ ಬ್ಯಾಂಕಿಂಗ್ ನಿಯಮಗಳು ಬದಲಾವಣೆ ಆಗುತ್ತಿವೆ. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ನಿಗದಿ ಮಾಡಿರುವ ಮಿತಿಗಿಂತ ಹೆಚ್ಚು ಟ್ರಾನ್ಸಾಕ್ಷನ್ ಮಾಡಿದರೆ ವಿಧಿಸಲಾಗುವ ಶುಲ್ಕದಲ್ಲಿ ಏರಿಕೆ ಆಗುತ್ತಿದೆ. ಎಸ್​​ಬಿ ಅಕೌಂಟ್್​ಗಳಲ್ಲಿ ನೀವು ಹೆಚ್ಚು ಹಣ ಇಟ್ಟರೆ ಹೆಚ್ಚು ಬಡ್ಡಿ ಸಿಗುವಂತೆ ನಿಯಮ ಮಾಡಲಾಗುತ್ತಿದೆ. ಕೆಲ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ನಿಯಮವನ್ನು ಪರಿಷ್ಕರಿಸುತ್ತಿವೆ.

ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ; ಎಸ್​ಬಿ ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ; ಏಪ್ರಿಲ್ 1ರಿಂದ ಬದಲಾವಣೆಗಳನ್ನು ಗಮನಿಸಿ
ಎಟಿಎಂ ಕ್ಯಾಷ್ ವಿತ್​​ಡ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 25, 2025 | 4:27 PM

Share

2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿವೆ. ಎಟಿಎಂ ಹಣ ಹಿಂಪಡೆಯಲು ಹೆಚ್ಚುವರಿ ಶುಲ್ಕದಿಂದ (ATM transaction fee) ಹಿಡಿದು ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳವರೆಗೆ ಬದಲಾವಣೆಗಳಾಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಎರಡು ಅಂಶಗಳು ಗಮನಾರ್ಹ ಎನಿಸಿವೆ. ಮೊದಲನೆಯದು ಎಟಿಎಂಗಳಲ್ಲಿ ಕಾರ್ಡ್ ಬಳಸಿ ಹಣ ವಿತ್​​ಡ್ರಾ ಮಾಡಿದಾಗ ವಿಧಿಸಲಾಗುವ ಶುಲ್ಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಹಾಗೆಯೇ, ಕೆಲ ಬ್ಯಾಂಕುಗಳ ಅಕೌಂಟ್​​ಗಳಲ್ಲಿ ಕನಿಷ್ಠ ಹಣ ಎಷ್ಟು ಹೊಂದಿರಬೇಕು ಎನ್ನುವ ನಿಯಮವನ್ನು ಪರಿಷ್ಕರಿಸುತ್ತಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ…

ಎಟಿಎಂ ಕ್ಯಾಷ್ ವಿತ್​​ಡ್ರಾ ಮಾಡಲು ಶುಲ್ಕ

ಬಹುತೇಕ ಎಲ್ಲಾ ಬ್ಯಾಂಕುಗಳು ಇಂಟರ್​​ಚೇಂಜ್ ಶುಲ್ಕಗಳನ್ನು ಹೆಚ್ಚಿಸಿವೆ. ಎಟಿಎಂಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್​​ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ದರವನ್ನು ಹೆಚ್ಚಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ನಿಮ್ಮ ಬ್ಯಾಂಕ್​ನದ್ದಲ್ಲದ ಎಟಿಎಂಗಳಲ್ಲಿ ನೀವು ತಿಂಗಳಿಗೆ 3ರಿಂದ 5 ವಹಿವಾಟುಗಳನ್ನು ಮಾಡಬಹುದು. ಹಣ ವಿತ್​​ಡ್ರಾ ಆಗಬಹುದು ಅಥವಾ ಬೇರೆ ಟ್ರಾನ್ಸಾಕ್ಷನ್ ಕೂಡ ಆಗಿರಬಹುದು. ಈ ನಿಗದಿತ ಮಿತಿಯನ್ನು ಮೀರಿದರೆ ಆಗ ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ಇರುತ್ತದೆ. ಮೇ 1ರಿಂದ ಈ ಶುಲ್ಕದಲ್ಲಿ 1-2 ರೂ ಹೆಚ್ಚಳ ಮಾಡಲಾಗುತ್ತಿದೆ.

ಇದನ್ನೂ ಓದಿ
Image
ಈ ಬ್ಯಾಂಕುಗಳ ಸ್ಪೆಷಲ್ ಎಫ್​​ಡಿ ಪ್ಲಾನ್​ಗಳು ಮಾರ್ಚ್ 31ರವರೆಗೆ
Image
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?
Image
ಏಪ್ರಿಲ್ 1ರಿಂದ ಹೊಸ ಟಿಡಿಎಸ್ ನಿಯಮಗಳು ಜಾರಿಗೆ
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ಇದನ್ನೂ ಓದಿ: ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ

ಕ್ಯಾಷ್ ವಿತ್​ಡ್ರಾ ಮಾಡಿದರೆ ವಿಧಿಸುವ ಶುಲ್ಕವನ್ನು 17 ರೂನಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇದ್ದದ್ದು 7 ರೂ ಆಗುತ್ತದೆ.

ಮಿನಿಮಮ್ ಬ್ಯಾಲನ್ಸ್ ಶುಲ್ಕ

ಎಸ್​​ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಪರಿಷ್ಕರಿಸುತ್ತಿವೆ. ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.

ಸೇವಿಂಗ್ಸ್ ಅಕೌಂಟ್​ಗಳಿಗೆ ಬಡ್ಡಿ

ಸೇವಿಂಗ್ಸ್ ಬ್ಯಾಂಕ್ ಅಕೌಂಟ್​​​ಗಳಲ್ಲಿ ನೀವೆಷ್ಟೇ ಹಣ ಬ್ಯಾಲನ್ಸ್ ಇಟ್ಟಿದ್ದರೂ ಬಡ್ಡಿದರ ಫ್ಲ್ಯಾಟ್ ಇರುತ್ತದೆ. 1,000 ರೂ ಇದ್ದವರಿಗೂ ಶೇ. 4, ಒಂದು ಲಕ್ಷ ಹಣ ಇಟ್ಟವರಿಗೂ ಶೇ. 4 ಬಡ್ಡಿ ಮಾತ್ರವೇ ಸಿಗುತ್ತದೆ. ಆದರೆ, ಈಗ ಬ್ಯಾಂಕುಗಳು ಈ ನಿಯಮ ಬದಲಾವಣೆ ಮಾಡುತ್ತಿವೆ. ಅಕೌಂಟ್​​​ಗಳಲ್ಲಿ ಹೆಚ್ಚು ಹಣ ಇದ್ದರೆ ಹೆಚ್ಚು ಬಡ್ಡಿದರ, ಕಡಿಮೆ ಹಣ ಇದ್ದರೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ

ಕ್ರೆಡಿಟ್ ಕಾರ್ಡ್ ಲಾಭಗಳು

ಎಸ್​​ಬಿಐ, ಐಡಿಎಫ್​​ಸಿ ಫಸ್ಟ್ ಬ್ಯಾಂಕ್ ಇತ್ಯಾದಿ ಪ್ರಮುಖ ಬ್ಯಾಂಕುಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್​​ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ. ಟಿಕೆಟ್ ವೋಚರ್, ರಿನಿವಲ್ ಲಾಭ, ಮೈಲ್​​ಸ್ಟೋನ್ ರಿವಾರ್ಡ್ ಇತ್ಯಾದಿ ಉತ್ತೇಜಕ ಪ್ಲಾನ್​​ಗಳನ್ನು ಕೈಬಿಡಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Tue, 25 March 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ