ವಿಶ್ವದ ಅತ್ಯಂತ ಶ್ರೀಮಂತ ದೇಶದಲ್ಲಿ ಜನರ ಸರಾಸರಿ ವಾರ್ಷಿಕ ಆದಾಯ 2 ಕೋಟಿ ರೂ; ಇಲ್ಲಿದೆ ಟಾಪ್-10 ಪಟ್ಟಿ

Top-10 countries with highest GDP PPP per capita: ದೇಶದ ಶ್ರೀಮಂತಿಕೆಯನ್ನು ಪಿಪಿಪಿ ಜಿಡಿಪಿ ತಲಾದಾಯದ ಮೂಲಕ ಅಳೆಯಲಾಗುತ್ತದೆ. ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಲೀಕ್ಟನ್​ಸ್ಟೇನ್ ಮೊದಲ ಸ್ಥಾನ ಪಡೆಯುತ್ತದೆ. ವಿಶ್ವದ ನಂಬರ್ ಒನ್ ಆರ್ಥಿಕತೆಯ ಅಮೆರಿಕವು 10ನೇ ಸ್ಥಾನ ಪಡೆಯುತ್ತದೆ. ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ ಬರೋಬ್ಬರಿ 123ನೇ ಸ್ಥಾನದಲ್ಲಿದೆ.

ವಿಶ್ವದ ಅತ್ಯಂತ ಶ್ರೀಮಂತ ದೇಶದಲ್ಲಿ ಜನರ ಸರಾಸರಿ ವಾರ್ಷಿಕ ಆದಾಯ 2 ಕೋಟಿ ರೂ; ಇಲ್ಲಿದೆ ಟಾಪ್-10 ಪಟ್ಟಿ
ಲೀಕ್ಟನ್​ಸ್ಟೀನ್

Updated on: Dec 30, 2025 | 5:26 PM

ನವದೆಹಲಿ, ಡಿಸೆಂಬರ್ 30: ಭಾರತ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ. ಆದರೆ, ಅತೀ ಶ್ರೀಮಂತ ದೇಶಗಳನ್ನು ಒಂದು ಸಾಲಿಗೆ ಜೋಡಿಸಿದರೆ ಭಾರತವು ಶ್ರೀಲಂಕಾಗಿಂತಲೂ ಹಿಂದಕ್ಕೆ ಹೋಗುತ್ತದೆ. ಒಂದು ದೇಶ ಎಷ್ಟು ಶ್ರೀಮಂತಿಕೆ ಹೊಂದಿದೆ ಎಂಬುದನ್ನು ಅದರ ಆರ್ಥಿಕ ಗಾತ್ರ ಮಾತ್ರವಲ್ಲದೆ, ಜನರ ತಲಾದಾಯವನ್ನೂ ಪರಿಗಣಿಸಲಾಗುತ್ತದೆ. ಈ ಜಿಡಿಪಿ ತಲಾದಾಯದಲ್ಲಿ ಚೀನಾ ದೇಶವೇ 74ನೇ ಸ್ಥಾನದಲ್ಲಿರುವುದು ಅಚ್ಚರಿ ಎನಿಸಬಹುದು. ಮಾಲ್ಡೀವ್ಸ್​ನಂತಹ ದೇಶವೇ ಚೀನಾಗಿಂತ ಮೇಲಿದೆ ಎಂದರೆ ಅಚ್ಚರಿ ಎನಿಸಬಹುದು.

ಜಿಡಿಪಿ ಪಿಪಿಪಿ ತಲಾದಾಯದಲ್ಲಿ ಟಾಪ್-10 ದೇಶಗಳ ಪಟ್ಟಿ

  1. ಲೀಕ್ಟನ್​ಸ್ಟೇನ್: 2,01,112 ಡಾಲರ್
  2. ಸಿಂಗಾಪುರ್: 1,56,969 ಡಾಲರ್
  3. ಲುಕ್ಸಂಬರ್ಗ್: 1,52,394 ಡಾಲರ್
  4. ಐರ್ಲೆಂಡ್: 1,47,878 ಡಾಲರ್
  5. ಕತಾರ್: 1,22,283 ಡಾಲರ್
  6. ನಾರ್ವೇ: 1,06,694 ಡಾಲರ್
  7. ಸ್ವಿಟ್ಜರ್​ಲ್ಯಾಂಡ್: 97,659 ಡಾಲರ್
  8. ಬ್ರೂನೇ ದಾರುಸ್ಸಲಂ: 94,472 ಡಾಲರ್
  9. ಗಯಾನ: 94,189 ಡಾಲರ್
  10. ಅಮೆರಿಕ: 89,598 ಡಾಲರ್

ಇದನ್ನೂ ಓದಿ: ಜನವರಿಯಲ್ಲಿ ಹೊಸ ವರ್ಷಾಚರಣೆಯಿಂದ ಗಣರಾಜ್ಯೋತ್ಸವವರೆಗೂ 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕ ಹೊಂದಿದ್ದರೂ, ಲೀಕ್ಟನ್​ಸ್ಟೇನ್ ದೇಶದ ಜಿಡಿಪಿಗಿಂತ 500 ಪಟ್ಟು ಹೆಚ್ಚು ಜಿಡಿಪಿ ಹೊಂದಿದ್ದರೂ ಶ್ರೀಮಂತ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಸುಮಾರು 10 ಬಿಲಿಯನ್ ಡಾಲರ್​ನಷ್ಟೇ ಗಾತ್ರದ ಜಿಡಿಪಿ ಹೊಂದಿರುವ ಲೀಕ್ಟನ್​ಸ್ಟೇನ್ ಶ್ರೀಮಂತಿಕೆಯಲ್ಲಿ ನಂಬರ್ ಒನ್ ಎನಿಸಿದೆ.

ಬಹಳ ಪುಟ್ಟದಾಗಿರುವ, ಮತ್ತು ಸ್ವಿಟ್ಜರ್​ಲ್ಯಾಂಡ್ ಹಾಗೂ ಆಸ್ಟ್ರಿಯಾ ನಡುವೆ ಲ್ಯಾಂಡ್ ಲಾಕ್ ಆದಂತಿರುವ ಲೀಕ್ಟನ್​ಸ್ಟೀನ್ ದೇಶದಲ್ಲಿ ಶ್ರೇಷ್ಠ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಂ ಇದೆ. ಹೈ ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್​ಗೆ ಇದು ಹೆಸರುವಾಸಿ. ಹೈವ್ಯಾಲ್ಯೂ ಉತ್ಪನ್ನಗಳನ್ನು ತಯಾರಿಸುವುದರಿಂದ ಇದಕ್ಕೆ ಶ್ರೀಮಂತಿಕೆಯೂ ಹೆಚ್ಚು. ಹಣಕಾಸು ಸೆಕ್ಟರ್ ಕೂಡ ಈ ಪುಟ್ಟ ದೇಶದಲ್ಲಿ ಬಹಳ ಪ್ರಬಲವಾಗಿದೆ.

ಇದನ್ನೂ ಓದಿ: ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ

ಅಂದಹಾಗೆ, 4 ಟ್ರಿಲಿಯನ್ ಡಾಲರ್ ಜಿಡಿಪಿ ದಾಟಿರುವ ಭಾರತದ ತಲಾದಾಯ 10-12,000 ಡಾಲರ್ ಮಾತ್ರವೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ