ಆ ಪ್ಯಾಕೇಜ್​ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ

|

Updated on: Jun 09, 2024 | 7:04 PM

Elon Musk pay package in Tesla: ಟೆಸ್ಲಾದಲ್ಲಿ ಸಿಇಒ ಆಗಿರುವ ಇಲಾನ್ ಮಸ್ಕ್ 56 ಬಿಲಿಯನ್ ಡಾಲರ್ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಟೆಸ್ಲಾ ಮಂಡಳಿ ಇದಕ್ಕೆ ಅನುಮೋದನೆ ನೀಡಿದೆಯಾದರೂ ಷೇರುದಾರರಿಂದ ಒಪ್ಪಿಗೆ ಬೇಕಿದೆ. ಈ ಪೇ ಪ್ಯಾಕೇಜ್ ನಿರ್ಧಾರದ ಪರವಾಗಿ ಮತ ಹಾಕುವಂತೆ ಷೇರುದಾರರಿಗೆ ಟೆಸ್ಲಾ ಅಧ್ಯಕ್ಷೆ ರಾಬಿನ್ ಡೆನ್​ಹಾಮ್ ಮನವಿ ಮಾಡಿದ್ದಾರೆ. ಒಂದು ವೇಳೆ ನೀವು ವಿರುದ್ಧವಾಗಿ ಮತ ಚಲಾಯಿಸಿದರೆ ಇಲಾನ್ ಮಸ್ಕ್ ಅವರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಆ ಪ್ಯಾಕೇಜ್​ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ
ರಾಬಿನ್ ಡೆನ್​ಹಾಮ್, ಇಲಾನ್ ಮಸ್ಕ್
Follow us on

ವಾಷಿಂಗ್ಟನ್, ಜೂನ್ 9: ಟೆಸ್ಲಾದಲ್ಲಿ ಸಿಇಒ ಆಗಿರುವ ಇಲಾನ್ ಮಸ್ಕ್ ಅವರಿಗೆ 56 ಬಿಲಿಯನ್ ಡಾಲರ್ ಸಂಬಳ ಪ್ಯಾಕೇಜ್​ಗೆ ಬೋರ್ಡ್ ಪ್ರಸ್ತಾಪ ಮಾಡಿದೆ. ಇದಕ್ಕೆ ಷೇರುದಾರರು ಸಮ್ಮತಿಸದಿದ್ದರೆ ಇಲಾನ್ ಮಸ್ಕ್ ಅವರು ಟೆಸ್ಲಾ ಬಿಟ್ಟು ಹೋಗುವ ಸಾಧ್ಯತೆ ಇದೆ. ಇದರ ಸುಳಿವನ್ನು ಟೆಸ್ಲಾ ಛೇರ್ಮನ್ ಆಗಿರುವ ರಾಬಿನ್ ಡೆನ್​ಹಾಮ್ (Robyn Denholm) ನೀಡಿದ್ದಾರೆ. ಜೂನ್ 13ರಂದು ಷೆರುದಾರರ ಸಭೆ ಇದ್ದು ಅದರಲ್ಲಿ ಇಲಾನ್ ಮಸ್ಕ್ (Tesla CEO Elon Musk) ಅವರ ಪೇ ಪ್ಯಾಕೇಜ್ ಪ್ರಸ್ತಾಪದ ಪರ ನಿರ್ಣಯ ಮಂಡನೆಯಾಗಲಿದೆ. ಅದಕ್ಕೆ ಷೇರುದಾರರ ವೋಟಿಂಗ್ ನಡೆಯಲಿದೆ. ಈ ಮತದಾನದಲ್ಲಿ ಷೇರುದಾರರು ನಿರ್ಣಯದ ವಿರುದ್ಧವಾಗಿ ಹೆಚ್ಚು ಮತ ಚಲಾಯಿಸಿದರೆ ಇಲಾನ್ ಮಸ್ಕ್ ಅವರನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸಂದೇಶವನ್ನು ಟೆಸ್ಲಾ ಅಧ್ಯಕ್ಷೆ ತಿಳಿಸಿದ್ದಾರೆ.

‘ಇಲಾನ್ ಮಸ್ಕ್ ಮಾಮೂಲಿಯ ಸಿಇಒ ಅಲ್ಲ. ಟೆಸ್ಲಾ ಮಾಮೂಲಿಯ ಕಂಪನಿ ಅಲ್ಲ. ಸಿಇಒಗಳಿಗೆ ಮಾಮೂಲಿಯಾಗಿ ನೀಡುವಂತಹ ಪೇ ಪ್ಯಾಕೇಜ್ ಅನ್ನು ನೀಡಿದರೆ ಟೆಸ್ಲಾಗೆ ಉಪಯೋಗವಿಲ್ಲ. ಇಲಾನ್ ಅವರಂಥವರಿಗೆ ಉತ್ಸಾಹ ತುಂಬಿಸಲು ಬೇರೇನಾದರೂ ಮಾಡಬೇಕಾಗುತ್ತದೆ’ ಎಂದು ರಾಬಿನ್ ಡೆನ್​ಹಾಮ್ ಅವರು ಷೇರುದಾರರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ

ಇಲಾನ್ ಮಸ್ಕ್​ರಂಥವರು ಟೆಸ್ಲಾಗೆ ಬೇಕು…

ಇಲಾನ್ ಮಸ್ಕ್ ಬಳಿ ಹೊಸ ಐಡಿಯಾಗಳಿಗೆ ಕೊರತೆ ಇಲ್ಲ. ಅವರು ಎಲ್ಲಿ ಬೇಕಾದರೂ ಹೋಗಿ ಪರಿವರ್ತನೆ ತರಬಲ್ಲವರು. ಅವರ ಐಡಿಯಾಗಳು, ಶಕ್ತಿ ಟೆಸ್ಲಾಗೆ ಮತ್ತು ನಮಗೆ ಬೇಕು. ನಮ್ಮ ಮಾಲೀಕರಾದ ನಿಮಗೆ ಅವರಿಂದ ಅನುಕೂಲವಾಗುತ್ತದೆ. ಆದರೆ, ಅದಕ್ಕೆ ಬದಲಾಗಿ ನಿಮ್ಮಿಂದ ಅವರಿಗೆ ಗೌರವ ಸಿಗಬೇಕು ಎಂದು ಟೆಸ್ಲಾ ಛೇರ್​ವುಮನ್ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರು ಟೆಸ್ಲಾ ಮಾತ್ರವಲ್ಲ, ಎಕ್ಸ್, ಸ್ಪೇಸ್​ಎಕ್ಸ್, ನ್ಯೂರಾಲಿಂಕ್, ಎಕ್​​ಎಐ, ಬೋರಿಂಗ್ ಕಂಪನಿಗಳನ್ನೂ ನಡೆಸುತ್ತಿದ್ದಾರೆ. ಅವರು ಟೆಸ್ಲಾ ಕಂಪನಿಗೆ ಅವರು ಹೆಚ್ಚಿನ ಗಮನ ಕೊಡುತ್ತಾರಾ ಎಂಬುದು ಕೆಲ ಟೆಸ್ಲಾ ಹೂಡಿಕೆದಾರರಿಗೆ ಇರುವ ಅನುಮಾನವಾಗಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯ ಬಂಪರ್ ಫಲ ಪಡೆದ ಚಂದ್ರಬಾಬು ನಾಯ್ಡು ಪತ್ನಿ; ಐದು ದಿನದಲ್ಲಿ 584 ಕೋಟಿ ರೂ ಸಂಪತ್ತು ಹೆಚ್ಚಿಸಿಕೊಂಡ ಭುವನೇಶ್ವರಿ

ಇನ್ನೊಂದೆಡೆ ಇಲಾನ್ ಮಸ್ಕ್ ಅವರು ತಾವು ಬೇಡಿಕೆ ಇಟ್ಟಿರುವ ಸಂಬಳದ ಪ್ಯಾಕೇಜ್​ಗೆ ಅನುಮೋದನೆ ಸಿಗಲಿಲ್ಲವೆಂದರೆ ಟೆಸ್ಲಾ ಕಂಪನಿಯನ್ನೇ ಎರಡಾಗಿ ಹೋಳುವ ಮಾಡುವ ಸನ್ನಾಹದಲ್ಲಿದ್ದಾರೆ. ಟೆಸ್ಲಾದ ಎಐ ರಿಸರ್ಚ್ ವಿಭಾಗವನ್ನು ಕಂಪನಿಯಿಂದ ಪ್ರತ್ಯೇಕಿಸುವುದು ಅವರ ಇರಾದೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ