ಬೀದಿನಾಯಿ ಉಪಟಳದಿಂದ ವಾಘ್ ಬಕ್ರಿ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಸಾವು

Wagh Bakri Director Parag Desai Death: ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್​ನಲ್ಲಿ ಮೃತಪಟ್ಟಿದ್ದಾರೆ. ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಎಡವಿ ಬಿದ್ದು ತಲೆಗೆ ಪೆಟ್ಟುಬಿದ್ದು, ಮಿದುಳಿಗೆ ಹಾನಿಯಾಗಿತ್ತು. ಒಂದು ವಾರ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದ ಬಳಿಕ ಭಾನುವಾರ ಅವರು ಇಹಲೋಹ ತ್ಯಜಿಸಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರ ನಡೆದಿದೆ.

ಬೀದಿನಾಯಿ ಉಪಟಳದಿಂದ ವಾಘ್ ಬಕ್ರಿ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಸಾವು
ಪರಾಗ್ ದೇಸಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2023 | 12:08 PM

ಅಹ್ಮದಾಬಾದ್, ಅಕ್ಟೋಬರ್ 23: ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಕಾರ್ಯವಾಹಕ ನಿರ್ದೇಶಕ ಪರಾಗ್ ದೇಸಾಯಿ (Parag Desai) ದುರ್ಮರಣ ಅಪ್ಪಿರುವ ಸುದ್ದಿ ಬೆಳಕಿಗೆ ಬಂದಿದೆ. ಟೈಮ್​ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಅಹ್ಮದಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರದಂದು (ಅ. 22) ಪರಾಗ್ ನಿಧನರಾಗಿದ್ದಾರೆ. ಈ ಬಗ್ಗೆ ವಾಘ್ ಬಕ್ರಿ ಗ್ರೂಪ್ ಸಂಸ್ಥೆಯಿಂದ (Wagh Bakri Tea Group) ಅಧಿಕೃತ ಪ್ರಕಟಣೆ ಬಂದಿಲ್ಲ.

ಅಹ್ಮದಾಬಾದ್ ಮಿರರ್ ವರದಿ ಪ್ರಕಾರ, ಪರಾಗ್ ದೇಸಾಯಿ ನಿಧನಕ್ಕೆ ಬೀದಿ ನಾಯಿಗಳು ಕಾರಣ ಎನ್ನಲಾಗಿದೆ. ಪರಾಗ್ ದೇಸಾಯಿ ಅಕ್ಟೋಬರ್ 15ರಂದು ತಮ್ಮ ಮನೆ ಬಳಿ ನಡೆದುಹೋಗುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಅವುಗಳಿಂದ ತಪ್ಪಿಸಿಕೊಂಡು ಓಡುವಾಗ ಎಡವಿ ಬಿದ್ದು ಅವರ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಝೈಡಸ್ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ಮಾಡಲಾಯಿತು. ಏಳು ದಿನಗಳ ಕಾಲ ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ವಾರದ ಕಾಲ ಜೀವನ್ಮರಣ ಹೋರಾಟ ಕಂಡ ಬಳಿಕ ಅವರು ಸಾವಿಗೆ ಶರಣಾಗಿದ್ದಾರೆ.

ಪರಾಗ್ ದೇಸಾಯಿ ಅವರಿಗೆ 49 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ವಿದಿಶಾ ಮತ್ತು ಪುತ್ರಿ ಪರಿಶಾ ಅವರನ್ನು ಅಗಲಿದ್ದಾರೆ. ಇಂದು (ಅ. 23) ಬೆಳಗ್ಗೆ 9 ಗಂಟೆಗೆ ಅಹ್ಮದಾಬಾದ್​ನಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಇದನ್ನೂ ಓದಿ: ಚೀನಾದಲ್ಲಿ ಫಾಕ್ಸ್​ಕಾನ್ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಶೋಧ

ವಾಘ್ ಬಕ್ರಿ ಮಾರುಕಟ್ಟೆ ವಿಸ್ತಾರದ ಹಿಂದಿನ ಶಕ್ತಿ ಪರಾಗ್…

ವಾಘ್ ಬಕ್ರಿ ಟೀ ಗ್ರೂಪ್​ನ ಎಂಡಿ ರಸೇಶ್ ದೇಸಾಯಿ ಅವರ ಮಗ ಪರಾಗ್ ದೇಸಾಯಿ ಅವರು ಸಂಸ್ಥೆಯ ಸೇಲ್ಸ್, ಮಾರ್ಕೆಟಿಂಗ್ ಮತ್ತು ರಫ್ತು ವಿಭಾಗದ ನಾಯಕತ್ವ ವಹಿಸಿದ್ದರು. 30ಕ್ಕೂ ಹೆಚ್ಚು ವರ್ಷ ಉದ್ದಿಮೆ ಅನುಭವ ಹೊಂದಿದ್ದ ಅವರ ಶ್ರಮದಿಂದಾಗಿ ವಾಘ್ ಬಕ್ರಿ ದೇಶಾದ್ಯಂತ ಮಾರುಕಟ್ಟೆ ಪಡೆದಿದೆ. ಅಮೆರಿಕದ ಲಾಂಗ್ ಐಲ್ಯಾಂಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಮಾಡಿದ್ದ ಪರಾಗ್, ಕೇವಲ ಸೇಲ್ಸ್ ಮಾತ್ರವಲ್ಲ, ಟೀ ಟೇಸ್ಟಿಂಗ್ ವಿದ್ಯೆಯಲ್ಲೂ ಪರಿಣಿತಿ ಹೊಂದಿದ್ದವರಾಗಿದ್ದರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ