What India Thinks Today: ಭಾರತವನ್ನು ಆರ್ಥಿಕವಾಗಿ ಬದಲಾಯಿಸುವ ಕ್ರಮ ಹೇಗೆ? ಟಿವಿ9 ಜತೆಗೆ ಹಂಚಿಕೊಳ್ಳಲಿರುವ ಅಮುಲ್, ಎಸ್‌ಬಿಐ ಮುಖ್ಯಸ್ಥರು

ಆರ್ಥಿಕತೆಯಲ್ಲಿ ಇತರ ದೇಶಗಳಿಗೆ ಮಾದರಿಯಾಗುತ್ತಿದೆ ಭಾರತ. ಭಾರತದ ಮುಂದೆ ಇರುವ ಆರ್ಥಿಕ ಸವಾಲುಗಳು ಏನು? ಇಷ್ಟು ಅಭಿವೃದ್ಧಿಯ ಯೋಜನೆಗಳೇನು? ಎಂಬ ಪ್ರಶ್ನೆಗಳಿಗೆ ಟಿವಿ9 ನೆಟ್​​​ವರ್ಕ್​​ ನಡೆಸುತ್ತಿರುವ What India Thinks Today ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ. ಫೆ,25ರಿಂದ ಫೆ.27ರವರೆಗೆ ಈ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಆರ್ಥಿಕ ವಿಚಾರವಾವಾಗಿ ಅಮುಲ್ ಎಂಡಿ ಜಾಯೆನ್ ಮೆಹ್ತಾ ಮತ್ತು ಎಸ್‌ಬಿಐ ಮಾಜಿ ಅಧ್ಯಕ್ಷ ಮತ್ತು ಭಾರತ್‌ಪೇ ಪ್ರಸ್ತುತ ಅಧ್ಯಕ್ಷ ರಜನೀಶ್ ಕುಮಾರ್ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ.

What India Thinks Today: ಭಾರತವನ್ನು ಆರ್ಥಿಕವಾಗಿ ಬದಲಾಯಿಸುವ ಕ್ರಮ ಹೇಗೆ? ಟಿವಿ9 ಜತೆಗೆ ಹಂಚಿಕೊಳ್ಳಲಿರುವ ಅಮುಲ್, ಎಸ್‌ಬಿಐ ಮುಖ್ಯಸ್ಥರು
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 24, 2024 | 12:20 PM

ಜಗತ್ತಿನ ಇತರ ದೇಶಗಳು ಆರ್ಥಿಕವಾಗಿ ಹಿಂಜರಿತಗೊಂಡಿದೆ. ಆದರೆ ಭಾರತ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಡಿಜಿಟಲ್ ಫೈನಾನ್ಸ್ ಮತ್ತು ಫಿನ್‌ಟೆಕ್ ವಲಯವು ಭಾರತದ ಈ ಯಶಸ್ಸಿನ ಹಿಂದೆ ದೊಡ್ಡ ಪಾತ್ರವನ್ನು ಹೊಂದಿದೆ. ಇದು ದೇಶದಲ್ಲಿ ಆರ್ಥಿಕತೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಇದರ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ಅಮುಲ್‌ನಂತಹ ಕಂಪನಿಗಳು ಆರ್ಥಿಕತೆಯನ್ನು ಹೆಚ್ಚಿಸಿದ್ದಲ್ಲದೆ ಕೋಟಿಗಟ್ಟಲೆ ಜನರಿಗೆ ಉದ್ಯೋಗವನ್ನೂ ಒದಗಿಸಿವೆ.

ಇಂತಹ ಪರಿಸ್ಥಿತಿಯಲ್ಲಿ, ಈ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಭಾರತದ ಭವಿಷ್ಯದ ಬಗ್ಗೆ ಏನು ಯೋಚಿಸುತ್ತಾರೆ? ಈ ಪ್ರಶ್ನೆಗೆ ಉತ್ತರ ದೇಶದ ನಂಬರ್-1 ಸಂಸ್ಥೆ ಟಿವಿ9 ನೆಟ್​​​ವರ್ಕ್​ ನೀಡಲಿದೆ. ಅಮುಲ್ ಎಂಡಿ ಜಾಯೆನ್ ಮೆಹ್ತಾ ಮತ್ತು ಎಸ್‌ಬಿಐ ಮಾಜಿ ಅಧ್ಯಕ್ಷ ಮತ್ತು ಭಾರತ್‌ಪೇ ಪ್ರಸ್ತುತ ಅಧ್ಯಕ್ಷ ರಜನೀಶ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

What India Thinks Today ಕಾರ್ಯಕ್ರಮದ ಮೂಲಕ ಆರ್ಥಿಕ ಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇದಿಕೆಯಲ್ಲಿ ಮೋದಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಸಿನಿಮಾ ಕ್ಷೇತ್ರದ ಸಾಧಕರು, ವಿಜ್ಞಾನಿಗಳು ಹಾಗೂ ಕ್ರೀಡಾ ಸಾಧಕರು, ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಚರ್ಚಿಸಲಿದ್ದಾರೆ. ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಸಿಎಗಳು, ಸಿಇಒಗಳು ಮತ್ತು ಕಂಪನಿಗಳ ಅಧ್ಯಕ್ಷರು ಸಹ ಈ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಟಿವಿ9ನಲ್ಲಿ ತಮ್ಮ ಜೀವನದ ಸಿಹಿ-ಕಹಿ ಕ್ಷಣಗಳನ್ನು ಹಂಚಿಕೊಳ್ಳಲಿರುವ ನಟಿ ರವೀನಾ ಟಂಡನ್

ಅಮುಲ್ ಎಂಡಿ ಜಯನ್ ಮೆಹ್ತಾ

ಅಮುಲ್ ಬ್ರಾಂಡ್‌ನ ಮೌಲ್ಯ 61 ಸಾವಿರ ಕೋಟಿ ರೂ.ಗಿಂತ ಹೆಚ್ಚಿದ್ದು, ಇದನ್ನು ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಹೊಂದಿದೆ. ಇನ್ನು ಜಯನ್ ಮೆಹ್ತಾ ಕಂಪನಿಯ ಎಂಡಿ ಆಗಿ ಅಧಿಕಾರ ವಹಿಸಿಕೊಂಡಾಗ, ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವು ಕಂಪನಿಯ ಪ್ರಮುಖ ವ್ಯವಹಾರವಾಗಿದೆ. ಜಯನ್ ಮೆಹ್ತಾ 1991ರಲ್ಲಿ ಮೊದಲ ಬಾರಿಗೆ ಅಮುಲ್ ಜೊತೆ ಕೈಜೋಡಿಸಿದರು. ಅವರು ಇಲ್ಲಿ ಬ್ರಾಂಡ್ ಮ್ಯಾನೇಜರ್, ಗ್ರೂಪ್ ಪ್ರಾಡಕ್ಟ್ ಮ್ಯಾನೇಜರ್ ಮತ್ತು ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಏಪ್ರಿಲ್-ಸೆಪ್ಟೆಂಬರ್ 2018 ರಿಂದ ಅಮುಲ್ ಡೈರಿಯ ಎಂಡಿ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾರತ್ ಪೇ ಅಧ್ಯಕ್ಷ ರಜನೀಶ್ ಕುಮಾರ್

ಒಂದು ಕಾಲದಲ್ಲಿ ದೇಶದ ಐದನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದ್ದ ಯೆಸ್ ಬ್ಯಾಂಕ್ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಆ ಸಮಯದಲ್ಲಿ ಅದನ್ನು ಪುನರ್​​ಜೀವಗೊಳಿಸುವ ಜವಾಬ್ದಾರಿಯನ್ನು ಎಸ್‌ಬಿಐನ ರಜನೀಶ್ ಕುಮಾರ್‌ಗೆ ನೀಡಲಾಯಿತು. ಅದಕ್ಕೆ ತಕ್ಕಂತೆ ಒಳ್ಳೆಯ ಬೆಳವಣಿಯನ್ನು ಕಂಡಿದೆ. ಅವರು ಎಸ್‌ಬಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಪ್ರಸ್ತುತ ಅವರು ಭಾರತ್ ಪೇ ಅಧ್ಯಕ್ಷರಾಗಿದ್ದಾರೆ. ರಜನೀಶ್ ಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರಿಗೆ ಸಾಲ, ಯೋಜನೆಯ ಹಣಕಾಸು, ವಿದೇಶಿ ವಿನಿಮಯ ಮತ್ತು ಚಿಲ್ಲರೆ ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸಿದ ಅನುಭವವಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ