IRCTC-Swiggy Tie-up: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀಆರ್ಡರ್ಡ್ ಫೂಡ್ ಡೆಲಿವರಿ

Delivery of pre-ordered meals: ಐಆರ್​ಸಿಟಿಸಿಯ ಇಕೆಟರಿಂಗ್ ಪೋರ್ಟಲ್​ನಲ್ಲಿ ಗ್ರಾಹಕರು ಮಾಡುವ ಪ್ರೀ ಆರ್ಡರ್ ಆಹಾರವನ್ನು ತಲುಪಿಸಲು ಸ್ವಿಗ್ಗಿ ಜೊತೆ ಐಆರ್​ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಆರಂಭಿಕ ಹಂತವಾಗಿ ಬೆಂಗಳೂರು, ವಿಜಯವಾಡ, ವಿಶಾಖಪಟ್ಟಣ ಮತ್ತು ಭುವನೇಶ್ವರದಲ್ಲಿ ಈ ಸೇವೆ ಆರಂಭವಾಗಲಿದೆ. ಆದರೆ, ಯಾವತ್ತು ಎಂದು ನಿರ್ದಿಷ್ಟಪಡಿಸಲಾಗಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಫೆ. 23ರಂದು ಷೇರು ಮಾರುಕಟ್ಟೆಯಲ್ಲಿ ಐಆರ್​ಸಿಟಿಸಿ ಷೇರು ಮೌಲ್ಯ ಶೇ. 3ರಷ್ಟು ಏರಿದೆ.

IRCTC-Swiggy Tie-up: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀಆರ್ಡರ್ಡ್ ಫೂಡ್ ಡೆಲಿವರಿ
ರೈಲ್ವೆ ನಿಲ್ದಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2024 | 6:46 PM

ನವದೆಹಲಿ, ಫೆಬ್ರುವರಿ 23: ಐಆರ್​ಸಿಟಿಸಿಯ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರು ಮುಂಗಡವಾಗಿ ಬುಕ್ ಮಾಡಲಾದ ಆಹಾರವನ್ನು ತಲುಪಿಸಲು ಸ್ವಿಗ್ಗಿ ಜೊತೆ ಐಆರ್​ಸಿಟಿಸಿ (IRCTC Swiggy tie up) ಕೈಜೋಡಿಸಿದೆ. ಸದ್ಯದ ಮಟ್ಟಿಗೆ ಬೆಂಗಳೂರು ಸೇರಿದಂತೆ ಕೆಲವೇ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗುತ್ತದೆ. ಯಾವಾ ಈ ಸೇವೆ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಪ್ರೀ ಆರ್ಡರ್ಡ್ ಫೂಡ್ (pre ordered meals) ಡೆಲಿವರಿಗೆ ಸ್ವಿಗ್ಗಿ ಜೊತೆ ಕೈ ಜೋಡಿಸಿರುವ ವಿಚಾರವನ್ನು ಐಆರ್​ಸಿಟಿಸಿ ತನ್ನ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ಮಾಹಿತಿ ನೀಡಿದೆ.

‘ಐಆರ್​ಸಿಟಿಸಿ ಇ-ಕೆಟರಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಬುಕ್ ಮಾಡಲಾದ ಆಹಾರದ ಪೂರೈಕೆ ಮತ್ತು ಡೆಲಿವರಿಗಾಗಿ ಬಂಡಲ್ ಟೆಕ್ನಾಲಜೀಸ್ ಪ್ರೈ ಲಿ (ಸ್ವಿಗ್ಗಿ ಫೂಡ್ಸ್) ಜೊತೆ ಐಆರ್​ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಈ ಸೇವೆ ಆರಂಭಿಸಲಾಗುತ್ತದೆ…’ ಎಂದು ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಐಆರ್​ಸಿಟಿಸಿ ಹೇಳಿದೆ.

ಸ್ವಿಗ್ಗಿಯಿಂದ ಆಹಾರ ಪೂರೈಕೆಯಾಗಲಿರುವ ನಾಲ್ಕು ನಿಲ್ದಾಣಗಳು

  • ಬೆಂಗಳೂರು
  • ವಿಜಯವಾಡ
  • ವಿಶಾಖಪಟ್ಟಣ
  • ಭುಬನೇಶ್ವರ

ಆದರೆ, ಯಾವಾಗ ಈ ಸೇವೆ ಆರಂಭವಾಗುತ್ತದೆ ಎಂದು ಐಆರ್​ಸಿಟಿಸಿ ಸ್ಪಷ್ಟಪಡಿಸಿಲ್ಲ, ಅಥವಾ ನಿರ್ದಿಷ್ಟ ಪಡಿಸಿಲ್ಲ.

ಇದನ್ನೂ ಓದಿ: ಸಂಸ್ಥೆ ನಡೆಸಲು ಇವರು ಅನರ್ಹರು: ಬೈಜುಸ್ ಮಾಲೀಕರ ವಿರುದ್ಧ ಷೇರುದಾರರ ದೂರು; ಫೋರೆನ್ಸಿಕ್ ಆಡಿಟಿಂಗ್​ಗೆ ಮನವಿ

ಐಆರ್​ಸಿಟಿಸಿ ಷೇರುಬೆಲೆ ಹೆಚ್ಚಳ

ಐಆರ್​ಸಿಟಿಸಿ ಸ್ವಿಗ್ಗಿ ಜೊತೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ನಿನ್ನೆ ಗುರುವಾರ ಕೇಳಿಬಂದಿತ್ತು. ಇವತ್ತು ಬೆಳಗ್ಗೆ ಷೇರುಮಾರುಕಟ್ಟೆಯಲ್ಲಿ ಐಆರ್​ಸಿಟಿಸಿ ಷೇರುಗಳಿಗೆ ಉತ್ತಮ ಬೇಡಿಕೆ ಹುಟ್ಟಿತ್ತು. ಒಂದೇ ದಿನ ಶೇ. 2.92ರಷ್ಟು ಅಥವಾ 27 ರೂನಷ್ಟು ಏರಿಕೆ ಕಂಡಿದೆ. ಕಳೆದ ಎರಡು ವಾರದಿಂದ ಇಳಿಯುತ್ತಿದ್ದ ಇದರ ಷೇರು ಮತ್ತೆ ಏರಿಕೆಯ ಹಾದಿಗೆ ಬಂದಿದೆ.

2023ರ ಅಕ್ಟೋಬರ್ ತಿಂಗಳಲ್ಲಿ 659 ರೂ ಇದ್ದ ಐಆರ್​ಸಿಟಿಸಿ ಬೆಲೆ ಇದೀಗ 963 ರೂ ಮುಟ್ಟಿದೆ. ನಾಲ್ಕು ತಿಂಗಳಲ್ಲಿ ಶೇ. 45ಕ್ಕಿಂತಲೂ ಹೆಚ್ಚು ಬೆಲೆ ಪಡೆದಿದೆ.

ಲಕ್ಷದ್ವೀಪದಲ್ಲಿ ಸ್ವಿಗ್ಗಿ; ಸೈಕಲ್​ನಲ್ಲಿ ಡೆಲಿವರಿ

ಭಾರತದ ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಎನಿಸಿರುವ ಸ್ವಿಗ್ಗಿ ಇತ್ತೀಚೆಗೆ ಲಕ್ಷದ್ವೀಪದಲ್ಲೂ ತನ್ನ ಕಾರ್ಯಾಚರಣೆ ವಿಸ್ತರಿಸಿದೆ. ಅಗಟ್ಟಿ ದ್ವೀಪದಲ್ಲಿ ಸ್ವಿಗ್ಗಿ ಸೇವೆ ಲಭ್ಯ ಇದೆ. ಲಕ್ಷದ್ವೀಪದಲ್ಲಿ ಆನ್​ಲೈನ್ ಫೂಡ್ ಡೆಲಿವರಿ ಸೇವೆ ಆರಂಭಿಸಿದ ದಾಖಲೆ ಸ್ವಿಗ್ಗಿಯದ್ದಾಗಿದೆ. ಅಗಾಟ್ಟಿ ದ್ವೀಪದ ಎಎಫ್​ಸಿ ಫ್ರೈಡ್ ಚಿಕನ್, ಸಿಟಿ ಹೋಟೆಲ್, ಮುಬಾರಕ್ ಹೋಟೆಲ್​ಗಳ ಜೊತೆ ಸ್ವಿಗ್ಗಿ ಟಯಪ್ ಮಾಡಿಕೊಂಡಿದೆ.

ಇದನ್ನೂ ಓದಿ: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ

ಕುತೂಹಲವೆಂದರೆ ಸ್ವಿಗ್ಗಿಯ ಡೆಲಿವರಿ ಬಾಯ್​ಗಳು ಲಕ್ಷದ್ವೀಪದಲ್ಲಿ ವಾಹನ ಬಳಸುವುದಿಲ್ಲ. ಸೈಕಲ್ ಮೂಲಕ ಆಹಾರ ತಲುಪಿಸುತ್ತಾರೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿದೆ. ಅಲ್ಲದೇ ಲಕ್ಷದ್ವೀಪದಲ್ಲಿ ಪ್ರದೇಶ ವ್ಯಾಪ್ತಿ ದೊಡ್ಡದಿಲ್ಲದಿರುವುದರಿಂದ ಆಹಾರ ಸರಬರಾಜಿಗೆ ಸೈಕಲ್ ಬಳಕೆ ಸಾವಶ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ