ಏನಿದು e-RUPI ವೋಚರ್? ಇದರ ಅನುಕೂಲಗಳೇನು? ಯಾವ ಬ್ಯಾಂಕ್​ಗಳಲ್ಲಿ ಸಿಗುತ್ತವೆ?

| Updated By: Srinivas Mata

Updated on: Aug 02, 2021 | 11:09 AM

ಇ-ರುಪಿ ಅಂದರೆ ಏನು? ಇದನ್ನು ಯಾವ ಉದ್ದೇಶಕ್ಕೆ ಬಳಸಬಹುದು? ಇದರ ಅನುಕೂಲಗಳೇನು, ಎಲ್ಲೆಲ್ಲಿ ದೊರೆಯುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಏನಿದು e-RUPI ವೋಚರ್? ಇದರ ಅನುಕೂಲಗಳೇನು? ಯಾವ ಬ್ಯಾಂಕ್​ಗಳಲ್ಲಿ ಸಿಗುತ್ತವೆ?
ಇ-ರುಪಿಗೆ ಇಂದಿನಿಂದ ಚಾಲನೆ
Follow us on

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸದಾದ ಕ್ಯಾಶ್​ಲೆಸ್​ ಪೇಮೆಂಟ್ ಸಲ್ಯೂಷನ್​ಗೆ ಚಾಲನೆ ನೀಡಲಿದ್ದಾರೆ. ಇದು ಇ-ವೋಚರ್​ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವು ಫೈನಾನ್ಷಿಯಲ್ ಸರ್ವೀಸಸ್ ಇಲಾಖೆ, ಆರೋಗ್ಯ ಸಚಿವಾಲಯ ಹಾಗು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದೆ.

e-RUPI ವೋಚರ್ ಬಳಕೆ ಮಾಡುವುದು ಹೇಗೆ?
ಈ ವೋಚರ್​ಗಳು ಇ-ಗಿಫ್ಟ್​ ಕಾರ್ಡ್​ಗಳಿದ್ದಂತೆ. ಪ್ರೀಪೇಯ್ಡ್​ ಆಗಿರುತ್ತವೆ. ಕಾರ್ಡ್​ನ ಕೋಡ್​ ಅನ್ನು ಒಂದೋ ಎಸ್ಸೆಮ್ಮೆಸ್ ಮೂಲಕ ಹಂಚಿಕೊಳ್ಳಬಹುಉ ಅಥವಾ ಒಆರ್​ ಕೋಡ್ ಹಂಚಿಕೊಳ್ಳಬಹುದು. ಈ ವೋಚರ್​ಗಳು ವ್ಯಕ್ತಿ ಮತ್ತು ಉದ್ದೇಶ ನಿರ್ದಿಷ್ಟವಾದಂಥವು. ಉದಾಹರಣೆಗೆ, ನೀವು ಕೊವಿಡ್-19 ಲಸಿಕೆಗಾಗಿ ಇ-ರುಪಿ- ವೋಚರ್ ಹೊಂದಿದ್ದರೆ, ಅದನ್ನು ಲಸಿಕೆಗಾಗಿ ಮಾತ್ರ ರಿಡೀಮ್ ಮಾಡಿಕೊಳ್ಳಬೇಕು.

ಇತರ ಆನ್​ಲೈನ್​ ಅಪ್ಲಿಕೇಷನ್​​ಗಿಂತ ಇ-ರುಪಿ ಹೇಗೆ ಭಿನ್ನ?
ಇ-ರುಪಿ ಎಂಬುದು ಯಾವುದೇ ಪ್ಲಾಟ್​ಫಾರ್ಮ್​ ಅಲ್ಲ. ಇದು ನಿರ್ದಿಷ್ಟ ಸೇವೆಗಾಗಿ ಮಾಡಿರುವಂಥ ವೋಚರ್. ಇ-ರುಪಿ ವೋಚರ್​ಗಳು ನಿರ್ದಿಷ್ಟ ಉದ್ದೇಶವನ್ನು ಒಳಗೊಂಡಿರುವಂಥದ್ದು. ಮತ್ತು ಜತೆಗೆ ಒಬ್ಬ ವ್ಯಕ್ತಿಯ ಬಳಿ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ಪೇಮೆಂಟ್ ಆ್ಯಪ್ ಅಥವಾ ಸ್ಮಾರ್ಟ್​ಫೋನ್ ಇಲ್ಲದಿದ್ದರೂ ಈ ವೋಚರ್​​ಗಳ ಅನುಕೂಲಗಳನ್ನು ಪಡೆದುಕೊಳ್ಳಬಹುದು.

ಈ ವೋಚರ್​ಗಳನ್ನು ಆರೋಗ್ಯಕ್ಕೆ ಸಂಬಂಧಿಸಿದ ಪಾವತಿಗಳಿಗಾಗಿಯೇ ಬಹುತೇಕ ಉಪಯೋಗಿಸಲಾಗುತ್ತದೆ. ಕಾರ್ಪೊರೇಟ್​ಗಳು ತಮ್ಮ ಸಿಬ್ಬಂದಿಗೆ ಇದನ್ನು ವಿತರಿಸಬಹುದು. ಕೇಂದ್ರ ಸರ್ಕಾರ ಈ ಹಿಂದೆ ಹೇಳಿದ ಪ್ರಕಾರ, ಲಸಿಕೆ ಇ-ವೋಚರ್​ ಅನ್ನು ತರುವುದಾಗಿ ತಿಳಿಸಿತ್ತು. ಆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಇ-ವೋಚರ್ ಖರೀದಿಸಬಹುದು ಮತ್ತು ಇತತರಿಗೆ ಉಡುಗೊರೆಯಾಗಿ ನೀಡಬಹುದು, ಇನ್ನೊಂದು ವಿಚಾರ, ಯಾರು ಈ ವೋಚರ್​ಗಳನ್ನು ಖರೀದಿಸಿ, ವಿತರಿಸುತ್ತಾರೋ ಅವರು, ಈ ವೋಚರ್ ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಟ್ರ್ಯಾಕ್ ಮಾಡಬಹುದು. ಇನ್ನು ಫಲಾನುಭವಿಗಳು ತಮ್ಮ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿಲ್ಲ.

ರಿಡೀಮ್ ಮಾಡಿಕೊಳ್ಳುವುದು ಹೇಗೆ?
ರಿಡೀಮ್​ ಮಾಡುವುದಕ್ಕೆ ಕಾರ್ಡ್ ಅಥವಾ ವೋಚರ್​ನ ಹಾರ್ಡ್​ ಕಾಪಿ ಬೇಕಾಗಲ್ಲ. ಸಂದೇಶದ ಮೂಲಕ ಪಡೆಯುವ ಕ್ಯೂಆರ್ ಕೋಡ್ ಸಾಕು.

ಯಾವ ಬ್ಯಾಂಕ್​ಗಳಲ್ಲಿ ಇ-ರುಪಿ ದೊರೆಯಲಿದೆ?
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಎಂಟು ಬ್ಯಾಂಕ್​​ಗಳಲ್ಲಿ ಈಗಾಗಲೇ ದೊರೆಯುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ, ಆಕ್ಸಿಸ್, ಪಂಜಾಬ್​ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳಲ್ಲಿ ಲಭ್ಯ ಇದೆ.

ಇದನ್ನೂ ಓದಿ: e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ

(What Is E- RUPI And How It Works Where Will Get It Here Is An Explainer)