ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

WhatsApp introduces prepaid mobile recharge service in its platform: ಮೆಟಾ ಸಂಸ್ಥೆಯು ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆಯನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್ ಎರಡರಲ್ಲೂ ಈ ಸೇವೆ ಸಿಗುತ್ತದೆ. ಯಾವುದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಲು ಅವಕಾಶ ಇದೆ. ವಾಟ್ಸಾಪ್​ನಲ್ಲಿ ಈಗಾಗಲೇ ಯುಪಿಐ ಪೇಮೆಂಟ್, ಬಿಲ್ ಪೇಮೆಂಟ್, ಮೆಟ್ರೋ ರೀಚಾರ್ಜ್ ಇತ್ಯಾದಿ ಸೇವೆಗಳು ಲಭ್ಯ ಇವೆ.

ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್
ವಾಪ್ಸಾಪ್
Image Credit source: Shutterstock

Updated on: Apr 23, 2026 | 4:18 PM

ಬೆಂಗಳೂರು, ಏಪ್ರಿಲ್ 23: ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್​ನಲ್ಲಿ ರೀಚಾರ್ಜ್ ಸರ್ವಿಸ್ ಅನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆ ಲಭ್ಯ ಇರಲಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಮೊಬೈಲ್​ಗಳಲ್ಲಿ ಎರಡರಲ್ಲೂ ಇದು ಸಿಗಲಿದೆ. ಆದರೆ, ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ಕೆಲ ವಾರಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಈ ಸೇವೆ ಸಿಗುತ್ತದೆ. ಮೊಬೈಲ್ ರೀಚಾರ್ಜ್ ಸೇವೆ ನೀಡಲು ವಾಟ್ಸಾಪ್​ಗೆ ಪೇಯು (PayU) ನೆರವು ನೀಡುತ್ತಿದೆ.

ವಾಟ್ಸಾಪ್ ಬಳಕೆದಾರರು ತಮ್ಮದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಬಹುದು. ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಯಾರದೇ ಮೊಬೈಲ್ ನಂಬರ್ ಆದರೂ ಕೆಲ ಸರಳ ಕ್ರಮಗಳಲ್ಲಿ ರೀಚಾರ್ಜ್ ಮಾಡಬಹುದು. ಜಿಯೋ, ಏರ್​ಟೆಲ್, ವೊಡಾಫೋನ್ ಐಡಿಯಾದ ಪ್ರೀಪೇಡ್ ನಂಬರ್​ಗಳನ್ನು ರೀಚಾರ್ಜ್ ಮಾಡಬಹುದು. ಇದಕ್ಕೆ ಪೇಮೆಂಟ್ ಕೂಡ ವಾಟ್ಸಾಪ್ ಪ್ಲಾಟ್​ಫಾರ್ಮ್​ನಲ್ಲೇ ಮಾಡಬಹುದು. ಬೇರೆ ಯುಪಿಐ ಆ್ಯಪ್​ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮೆಟಾ ಮತ್ತು ಪೇಯು ಸಂಸ್ಥೆಗಳು ಈ ಮಾಹಿತಿ ಪ್ರಕಟಿಸಿವೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್

ವಾಟ್ಸಾಪ್​ನಲ್ಲಿ ₹ ಐಕಾನ್ ಗಮನಿಸಿ

ವಾಟ್ಸಾಪ್​ನ ಹೋಮ್ ಸ್ಕ್ರೀನ್​ನ ಮೇಲ್ಭಾಗದಲ್ಲಿ ₹ ಚಿಹ್ನೆ ಇರುತ್ತದೆ. ಅದನ್ನು ಒತ್ತಿದರೆ ಪೇಮೆಂಟ್ ಸೇವೆಗಳು ಲಿಸ್ಟ್ ಆಗಿರುವುದನ್ನು ಕಾಣಬಹುದು. ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆ್ಯಪ್​ಗಳಂತೆ ವಾಟ್ಸಾಪ್​ನಲ್ಲೂ ಯುಪಿಐ ಪೇಮೆಂಟ್ ಸರ್ವಿಸ್ ಲಭ್ಯ ಇದ್ದು, ಬ್ಯಾಂಕ್ ಅಕೌಂಟ್​ಗಳನ್ನು ಸೇರಿಸಬಹುದು.

ಯುಪಿಐ ಆ್ಯಪ್​ಗಳಂತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳುಹಿಸಬಹುದು. ಯಾವುದೇ ಮೊಬೈಲ್ ನಂಬರ್​ಗೆ ಹಣ ಕಳುಹಿಸಬಹುದು.

ಇದರ ಜೊತೆಗೆ ಈಗ ಮೊಬೈಲ್ ರೀಚಾರ್ಜ್ ಸೇವೆ ಪರಿಚಯಿಸಲಾಗಿದೆ. ಪೇಯು ಸಂಸ್ಥೆಯು ವಾಟ್ಸಾಪ್​ಗೆ ಸಪೋರ್ಟ್ ನೀಡುತ್ತಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆಯನ್ನು ತಳ್ಳಿ ಹಾಕಿದ ಸರ್ಕಾರ

ವಾಟ್ಸಾಪ್​ನಲ್ಲಿ ಸದ್ಯ ಹಣದ ಟ್ರಾನ್ಸಾಕ್ಷನ್ ಜೊತೆಗೆ ಬಿಲ್ ಪೇಮೆಂಟ್, ಮೆಟ್ರೋ ಟಿಕೆಟ್ ಬುಕಿಂಗ್ ಇತ್ಯಾದಿಯನ್ನು ಮಾಡಬಹುದು. ಅದಕ್ಕೆ ಈಗ ಪ್ರೀಪೇಡ್ ಮೊಬೈಲ್ ರೀಚಾರ್​ಜ್ ಸೇವೆಯೂ ಸೇರ್ಪಡೆಯಾಗಿದೆ. ಸದ್ಯ ಕೆಲ ಬಳಕೆದಾರರಿಗೆ ಅಲಭ್ಯ ಇರಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅದು ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us