Paytm: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು

RBI restrictions on Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ವಿಧಿಸಿದ್ದು, ಅದರ ಹಲವು ಬಳಕೆದಾರರು ಇನ್ನೂ ಗೊಂದಲದಲ್ಲಿದ್ದಾರೆ. ಫೆಬ್ರುವರಿ 29ರ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ಬ್ಯಾಂಕಿಂಗ್ ಸರ್ವಿಸ್ ನೀಡುವಂತಿಲ್ಲ. ಪೇಟಿಎಂ ಯುಪಿಐ ಬಳಕೆಯಲ್ಲಿ ವ್ಯಾಲಟ್ ಸೇವೆ ಇದ್ದು ಆ ವ್ಯಾಲಟ್​​ಗೆ ಫೆ. 29ರ ಬಳಿಕ ಹೊಸ ಡೆಪಾಸಿಟ್ ಹಾಕಲಾಗುವುದಿಲ್ಲ.

Paytm: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2024 | 4:00 PM

ಪೇಟಿಎಂ ವಿಚಾರದಲ್ಲಿ ಹಲವರಿಗೆ ಗೊಂದಲಗಳು ಇನ್ನೂ ಉಳಿದಿವೆ. ಆರ್​ಬಿಐ ನಿರ್ಬಂಧ ಹಾಕಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ (PPBL- Paytm Payments Bank Ltd) ಮಾತ್ರ. ಫೆಬ್ರುವರಿ 29ರ ಬಳಿಕ ಪೇಮೆಂಟ್ಸ್ ಬ್ಯಾಂಕ್ ಹೊಸ ಡೆಪಾಸಿಟ್​ಗಳನ್ನು ಪಡೆಯುವಂತಿಲ್ಲ. ಹಾಗೂ ಬ್ಯಾಂಕಿಂಗ್ ಸರ್ವಿಸ್ ನೀಡುವಂತಿಲ್ಲ. ಪೇಟಿಎಂ ಸಂಸ್ಥೆ ತನ್ನ ಪೇಮೆಂಟ್ಸ್ ಬ್ಯಾಂಕ್​ನಲ್ಲಿರುವ ನೋಡಲ್ ಅಕೌಂಟ್​ಗಳನ್ನು ಫೆ. 29ರೊಳಗೆ ಬೇರೆ ಬ್ಯಾಂಕ್​ಗೆ ವರ್ಗಾಯಿಸಬೇಕು. ಇವು ಆರ್​ಬಿಐ ನೀಡಿದ ನಿರ್ದೇಶನ. ಆದರೆ, ಹೆಚ್ಚು ಗೊಂದಲವಾಗುತ್ತಿರುವುದು ಪೇಟಿಎಂ ಆ್ಯಪ್ ಬಗ್ಗೆ. ಪೇಟಿಎಂ ತನ್ನ ಹಲವು ಸೇವೆಗಳಿಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಸರ್ವಿಸ್ ಬಳಸುತ್ತದೆ. ಹೀಗಾಗಿ, ಒಂದಷ್ಟು ಗೊಂದಲಗಳು ಮನೆ ಮಾಡಿವೆ.

ಪೇಟಿಎಂ ಸರ್ವಿಸ್ ಉಪಯೋಗಿಸುವ ಬಹಳಷ್ಟು ವರ್ತಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಈಗ ಈ ವರ್ತಕರ ಖಾತೆಗಳನ್ನು ಫೆ. 29ರೊಳಗೆ ಬೇರೆ ಬ್ಯಾಂಕುಗಳಿಗೆ ವರ್ಗಾಯಿಸುವುದು ಪೇಟಿಎಂ ಮುಂದಿರುವ ಬಹುದೊಡ್ಡ ಸವಾಲು. ಲಕ್ಷಾಂತರ ಖಾತೆಗಳನ್ನು ಈ ಅಲ್ಪಸಮಯದಲ್ಲಿ ಇಷ್ಟು ಖಾತೆಗಳನ್ನು ಕೆವೈಸಿ ಸಮೇತ ಪಡೆಯುವುದು ಯಾವುದೇ ಬ್ಯಾಂಕಿದಾದರೂ ಕ್ಲಿಷ್ಟದ ಕೆಲಸ. ಅಂತೆಯೇ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಗಳನ್ನು ಪಡೆಯಲು ಯಾವ ಬ್ಯಾಂಕು ಕೂಡ ಆಸಕ್ತಿ ತೋರುತ್ತಿಲ್ಲ.

ಇದನ್ನೂ ಓದಿ: ಕೆವೈಸಿ ಅಪ್​ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್​ಬಿಐ ಸಲಹೆ, ಸೂಚನೆಗಳಿವು

ಪೇಟಿಎಂ ವ್ಯಾಲಟ್​ಗೆ ಏನು ತೊಂದರೆ?

ಪೇಟಿಎಂನಲ್ಲಿ ಬಹಳ ಉಪಯೋಗಕ್ಕೆ ಬರುವ ಪೇಮೆಂಟ್ ಅವಕಾಶದಲ್ಲಿ ವ್ಯಾಲಟ್ ಒಂದು. ಪೇಟಿಎಂ ಗ್ರಾಹಕರ ತನ್ನ ಬ್ಯಾಂಕ್ ಸರ್ವರ್ ಬಳಸದೆಯೇ ವ್ಯಾಲಟ್ ಮೂಲಕ ಪೇಮೆಂಟ್ ಮಾಡಬಹುದು. ಆದರೆ, ವ್ಯಾಲಟ್​ಗೆ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಎಸ್​ಕ್ರೂ ಅಥವಾ ತಾತ್ಕಾಲಿಕ ಖಾತೆ ಮಾಡಿ ಅದರಲ್ಲಿ ಹಣ ಇರಿಸಲಾಗುತ್ತದೆ. ಈಗ ಪೇಮೆಂಟ್ಸ್ ಬ್ಯಾಂಕ್ ಯಾವ ಬ್ಯಾಂಕಿಂಗ್ ಸೇವೆ ಮಾಡಬಾರದು ಎಂದಿರುವುದರಿಂದ ಫೆಬ್ರುವರಿ 29ರ ಬಳಿಕ ವ್ಯಾಲಟ್​ಗೂ ಹಣ ಜಮೆ ಮಾಡಲು ಆಗುವುದಿಲ್ಲ.

ಆದರೆ, ವ್ಯಾಲಟ್​ನಲ್ಲಿ ಹಣ ಇದ್ದರೆ ಅದನ್ನು ಯಥಾಪ್ರಕಾರ ಬಳಕೆ ಮಾಡಬಹುದು. ಫೆಬ್ರುವರಿ 29ರ ಬಳಿಕವೂ ವ್ಯಾಲಟ್ ಹಣವನ್ನು ಖರ್ಚು ಮಾಡಬಹುದು.

ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ನೀವು ಖಾತೆ ಹೊಂದಿದ್ದರೆ ಅದನ್ನೂ ಕೂಡ ಫೆ. 29ರ ಬಳಿಕ ಬಳಕೆ ಮಾಡಲು ಯಾವ ನಿರ್ಬಂಧ ಇರುವುದಿಲ್ಲ.

ಪೇಟಿಎಂಗೆ ಸವಾಲಾಗಿರುವುದು ಈಗ ವರ್ತಕರ ಖಾತೆಗಳನ್ನು ವರ್ಗಾಯಿಸುವುದು. ಅದಾಗಿ ಹೋದರೆ ಪೇಟಿಎಂ ಬಗ್ಗೆ ಗ್ರಾಹಕರು ಯಾವ ಗೊಂದಲ ಇಟ್ಟುಕೊಳ್ಳುವ ಅಗತ್ಯ ಇರದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ