ಟಿವಿ9 ನೆಟ್ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್ನ (What India Thinks Today) ಎರಡನೇ ಆವೃತ್ತಿಯ ಎರಡನೇ ದಿನದಂದು ‘ಸ್ಟಾರ್ಟಪ್ ಇಂಡಿಯಾ: ಸ್ಕೇಲಪ್ ಅಂಡ್ ಸಸ್ಟೇನ್’ (Startup India: Scaleup and Sustain) ವಿಷಯದ ಮೇಲೆ ಸಂವಾದ ಕಾರ್ಯಕ್ರಮ ನಡೆಯಿತು. ಅಮುಲ್ನ ಜಯನ್ ಮೆಹ್ತಾ, ಮಮಅರ್ಥ್ನ ಗಜಲ್ ಅಲಾಘ್, 108 ಕ್ಯಾಪಿಟಲ್ ಸಂಸ್ಥೆಯ ಫೌಂಡಿಂಗ್ ಪಾರ್ಟ್ನರ್ ಸುಷ್ಮಾ ಕೌಶಿಕ್, ನೋಬ್ರೋಕರ್ನ ಸಿಟಿಒ ಅಖಿಲ್ ಗುಪ್ತಾ ವೇದಿಕೆಯಲ್ಲಿ ಮಾತನಾಡಿದರು. ಅಮುಲ್ ಎಂಡಿ ಜಯನ್ ಮೆಹ್ತಾ ಅವರೊಂದಿಗೆ ಚರ್ಚೆ ಪ್ರಾರಂಭವಾಯಿತು. ಬೆಣ್ಣೆಯಾಗಲಿ, ಹಾಲು ಆಗಲಿ ಈಗ ಜನರಿಗೆ ಸುಲಭವಾಗಿ ಸಿಗುತ್ತಿದೆ ಎಂದ ಅವರು, ಹಾಲು, ಮನೆ, ಸೌಂದರ್ಯ ಮತ್ತು ಬಂಡವಾಳದ ಮೂಲಕ ಭಾರತದ ಗುರುತು ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸಿದರು.
ಅಮುಲ್ ಎಂಡಿ ಜಯನ್ ಮೆಹ್ತಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ಮಾತನಾಡಿ, ಭಾರತೀಯ ಹಾಲು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಭಾರತೀಯ ಹಾಲನ್ನು ಅತಿ ಹೆಚ್ಚು ಖರೀದಿಸುವವರು ವಿದೇಶಿಯರು ಎಂದು ಹೇಳಿದರು. ಪ್ರಪಂಚದ ಹಾಲಿನ ಕಾಲು ಭಾಗ ಭಾರತದಿಂದಲೇ ಬರುತ್ತದೆ. ಅದೇ ಸಮಯದಲ್ಲಿ, ಹಸು ಸಾಕುವವರಿಗೂ ಹಾಲಿನಿಂದ ಉತ್ತಮ ಹಣ ಸಿಗುತ್ತದೆ ಎಂದರು.
ಅಮುಲ್ ಬ್ರಾಂಡ್ನ ಮೌಲ್ಯ 61 ಸಾವಿರ ಕೋಟಿ ರೂ.ಗಿಂತ ಹೆಚ್ಚಿದ್ದು, ಇದರ ಮಾಲಕತ್ವ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಹೊಂದಿದೆ. 1946 ರಲ್ಲಿ ಸಣ್ಣದಾಗಿ ಪ್ರಾರಂಭವಾದ ಅಮುಲ್ ಇಂದು ದೇಶದ ನಂಬರ್ ಒನ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಜಯನ್ ಮೆಹ್ತಾ ಕಂಪನಿಯ ಎಂಡಿ ಆಗಿ ಅಧಿಕಾರ ವಹಿಸಿಕೊಂಡಾಗ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದರು: ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವು ಕಂಪನಿಯ ಪ್ರಮುಖ ವ್ಯವಹಾರವಾಗಿದೆ. ಆದರೆ ಕಂಪನಿಯ ಬೆಳವಣಿಗೆಗೋಸ್ಕರ ಈಗ ಡೈರಿಯೇತರ ವ್ಯವಹಾರಕ್ಕೂ ಗಮನ ಹರಿಸುವುದಾಗಿ ಜಯಂತ್ ಆ ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮನುಷ್ಯನಿಗೆ ಮಾರಕವಾ, ಪ್ರಯೋಜನಕಾರಿಯಾ?; ಜಾಗತಿಕ ಐಐ ಪರಿಣಿತರು ಹೇಳಿದ್ದಿದು
ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ತುಂಬಾ ಕಷ್ಟಕರವಾಗಿತ್ತು. ಆದರೆ ನೋಬ್ರೋಕರ್ ಆ್ಯಪ್ ಮತ್ತು ವೆಬ್ಸೈಟ್ ಪ್ರಾರಂಭವಾದಾಗಿನಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ವಹಿವಾಟಿನ ಬಗ್ಗೆ ಜನರ ವಿಶ್ವಾಸ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಅಪ್ಲಿಕೇಶನ್ ನೋಬ್ರೋಕರ್ನ ಸಹ-ಸಂಸ್ಥಾಪಕ ಅಖಿಲ್ ಗುಪ್ತಾ ಹೇಳುವುದು ಇದನ್ನೇ. ಆನ್ಲೈನ್ನಲ್ಲಿ ಫ್ಲಾಟ್ ಹುಡುಕುವುದು ಅಥವಾ ಮಾರಾಟ ಮಾಡುವುದು ಅಥವಾ ಖರೀದಿಸುವುದು, ಈ ಕಾರ್ಯವು NoBroker ನ ಅಪ್ಲಿಕೇಶನ್ನೊಂದಿಗೆ ಸುಲಭವಾಗಿದೆ.
Mamaearthನ ಸಹ-ಸಂಸ್ಥಾಪಕ ಮತ್ತು ಶಾರ್ಕ್ ಇಂಡಿಯಾದ ಶಾರ್ಕ್ ಗಜಲ್ ಅಲಾಗ್ ಅವರು TV9 ನ ಜಾಗತಿಕ ಶೃಂಗಸಭೆಯಲ್ಲಿ ಸ್ಟಾರ್ಟ್ಅಪ್ ಇಂಡಿಯಾದ ಕುರಿತು ಮಾತನಾಡಿದರು. ಮಮಅರ್ಥ್ ಅನ್ನು ಪ್ರಾರಂಭಿಸುವುದು ಏಕೆ ಅಗತ್ಯ ಇತ್ತು ಎಂದು ಅವರು ವಿವರಿಸಿದರು. Mamaearth ಅನ್ನು ಯಶಸ್ವಿ ಬ್ರಾಂಡ್ ಆಗಿ ಸ್ಥಾಪಿಸುವ ಮೊದಲು ಗಜಲ್ ಅಲಾಗ್ ಹಲವಾರು ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸಿದರು. Mamaearth ಅನ್ನು ಭಾರತದ ಮೊದಲ ಟಾಕ್ಸಿನ್ ಮುಕ್ತ ಶಿಶುಪಾಲನಾ ಬ್ರ್ಯಾಂಡ್ ಆಗಿ ರಚಿಸಿದ ನಂತರ, ಹಿಂತಿರುಗಿ ನೋಡಲಿಲ್ಲ.
ಇದನ್ನೂ ಓದಿ: ಇದು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಕಾಲ: ಭಾರತ್ಪೇ ಛೇರ್ಮನ್ ರಜನೀಶ್ ಕುಮಾರ್
ದೇಶದಲ್ಲಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸಬೇಕಾದರೆ, ಟ್ರಿಪಲ್ ಪಿ ಅಗತ್ಯವಿರುತ್ತದೆ. 108 ಕ್ಯಾಪಿಟಲ್ನ ಫೌಂಡಿಂಗ್ ಪಾರ್ಟ್ನರ್ ಆಗಿರುವ ಸುಷ್ಮಾ ಕೌಶಿಕ್ ಹೇಳುವುದು ಇದನ್ನೇ. ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ಹೂಡಿಕೆಯ ಪ್ರಶ್ನೆಯನ್ನು ಕೇಳಿದಾಗ, ಪ್ರತಿ ಹೂಡಿಕೆದಾರರು 3 ಅಗತ್ಯಗಳನ್ನು ಹೊಂದಿರಬೇಕು ಎಂದು ಹೇಳಿದರು. ಇದು ಟ್ರಿಪಲ್ ಪಿ, ಎಂದರೆ ಪಬ್ಲಿಕ್, ಪಾರ್ಟ್ನರ್ಶಿಪ್ ಮತ್ತು ಪ್ರೈವೇಟ್ ಮಾಡಲ್ ಹೊಂದಿರುವುದು ಅವಶ್ಯಕ ಎಂದು ಸುಷ್ಮಾ ಕೌಶಿಕ್ ವಿವರಿಸಿದರು.
ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ