Work From Home: ಎಲ್ಲಿ ಕೆಲಸ ಮಾಡಿದರೆ ಒಳ್ಳೇದು? ವರ್ಕ್ ಫ್ರಮ್ ಹೋಂ ಅಥವಾ ಕಚೇರಿಯಲ್ಲಿ ಕೆಲಸ, ಕಂಪೆನಿಗಳಿಂದ ಪರಿಶೀಲನೆ ಆರಂಭ
ವರ್ಕ್ ಫ್ರಮ್ ಹೋಮ್ ಅಥವಾ ಉದ್ಯೋಗಿಗಗಳನ್ನು ವಾಪಸ್ ಕಚೇರಿಗೆ ಕರೆತರಬೇಕೆ? ಈ ಬಗ್ಗೆ ಕಂಪೆನಿಗಳು ವಿಶ್ಲೇಷಣೆಯನ್ನು ಆರಂಭಿಸಿವೆ.
ಕೊವಿಡ್19 ನಿರ್ಬಂಧಗಳು ಮುಗಿದು, ಮಾರುಕಟ್ಟೆ ಚೇತರಿಸಿಕೊಳ್ಳುವುದಕ್ಕೆ ಆರಂಭವಾಗುತ್ತಿರುವಂತೆ ಸಿಬ್ಬಂದಿಯನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುವ ಅನುಕೂಲಗಳ ಬಗ್ಗೆ ಕಂಪೆನಿಗಳು ವಿಶ್ಲೇಷಣೆ ಆರಂಭಿಸಿವೆ. ಆದರೆ ಈಗಿನ ಚಿಂತೆ ಬೇರೆ ಥರದ್ದಾಗಿದೆ. ಒಂದು, ಕಚೇರಿಗೆ ಬಂದು ಎಲ್ಲಿ ಕೊರೊನಾ ಹರಡುತ್ತದೋ ಎಂದು ಉದ್ಯೋಗಿಗಳ ಆರೋಗ್ಯದ ಬಗೆಗಿನ ಕಾಳಜಿ ಇದೆ. ತಮ್ಮ ವ್ಯವಹಾರಕ್ಕೆ ಎಂಥದ್ದು ಸೂಕ್ತ ಮತ್ತು ಹೈಬ್ರಿಡ್ ಕೆಲಸದ ಉತ್ತಮ ಮಾದರಿಯನ್ನು ಅಳವಡಿಸಿಕೊಳ್ಳುವುದು ಹೇಗೆ ಎಂಬುದು ಚಿಂತೆಯ ಸಂಗತಿ ಆಗಿದೆ. ಈ ಎರಡೂ ಸನ್ನಿವೇಶಗಳಿಗೆ ಕಂಪೆನಿಗಳು ಸಂಸಿದ್ಧಗೊಂಡಿವೆ. ದೂರದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವಾಪಸ್ ಕಚೇರಿಗೆ ಕರೆಸಿಕೊಂಡರು ಅಂದುಕೊಳ್ಳಿ. ಸ್ವಾತಂತ್ರ್ಯದ ವಿಷಯವಾಗುತ್ತದೆ. ಆದರೆ ಉದ್ಯೋಗಿಗಳು ಹೇಗೆ, ಯಾವಾಗ ಮತ್ತು ಎಲ್ಲಿ ಕೆಲಸ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕೆ ಸಾಧ್ಯವಾ ಎಂಬುದನ್ನು ನಿಶ್ಚಿತವಾಗಿ ಹೇಳುತ್ತಿಲ್ಲ. ಇದೆಲ್ಲದರ ಪರಿಣಾಮವಾಗಿ, ದೂರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವಾಪಸ್ ಕಚೇರಿಗೆ ಬನ್ನಿ. ಇದರಿಂದ ಕಂಪೆನಿ ಹಾಗೂ ಉದ್ಯೋಗಿಗಳಿಗೆ ಅನುಕೂಲ ಎಂದು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ತಂಡ ಮಾರ್ಗದರ್ಶನ ನೀಡುತ್ತಿದೆ.
ಉನ್ನತ ಮಟ್ಟದ ಆರೋಗ್ಯ ಸುರಕ್ಷತೆ ವಿವಿಧ ಮಾರುಕಟ್ಟೆ ಅಭಿಪ್ರಾಯ ಸಂಗ್ರಹದ ಪ್ರಕಾರ, ಕೊವಿಡ್-19 ಬಿಕ್ಕಟ್ಟಿನ ನಂತರವೂ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡುವುದಾದರೆ ಅದನ್ನೇ ಮುಂದುವರಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಉದ್ಯೋಗದ ಸಲುವಾಗಿ ಮನೆಯಿಂದ ಆಚೆ ಹೋಗಲು ಇಷ್ಟವಿಲ್ಲ ಅಂತಲೂ ಹೇಳಿದ್ದಾರೆ. ಉದ್ಯೋಗ ಸ್ಥಳದಲ್ಲಿ ಆರಾಮದಾಯಕ ಹಾಗೂ ಸುರಕ್ಷಿತ ಎಂಬ ಭಾವ ಮೂಡಿಸಲು ಭಾರೀ ಸುರಕ್ಷತಾ ಕ್ರಮಗಳನ್ನು ಕಂಪೆನಿಗಳು ಪರಿಚಯಿಸುತ್ತಿವೆ. ತಮ್ಮ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ಇರುವ ಕಂಪೆನಿಗಳು ಆರೋಗ್ಯ ಸ್ಕ್ರೀನಿಂಗ್ ಪದ್ಧತಿಗಳನ್ನು ಪರಿಚಯಿಸುತ್ತಿವೆ.
ದೇಹದ ತಾಪಮಾನ ಪರೀಕ್ಷಿಸುವುದು ಅಗತ್ಯ, ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಟಚ್ಲೆಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇವೆಲ್ಲವನ್ನೂ ಹೊರತುಪಡಿಸಿ, ವರ್ಕ್ ಸ್ಟೇಷನ್ ಮಧ್ಯೆ ಅಂತರ, ಪಾಳಿಯಲ್ಲಿ ಬದಲಾವಣೆ ಮುಖ್ಯ ಪಾತ್ರವನ್ನು ವಹಿಸಲಿವೆ.
ಸಂಪರ್ಕ ಗಾಢ ಸಿಬ್ಬಂದಿ ಕಚೇರಿಯಲ್ಲಿ ಇದ್ದಲ್ಲಿ ಸಂಪರ್ಕ ಗಾಢವಾಗುತ್ತದೆ. ಏಕೆಂದರೆ ಮುಖತಃ ಸಂಭಾಷಣೆ ಮಾಡುತ್ತಾರೆ. ಇದರಿಂದ ವಿಶ್ವಾಸ ಸ್ಥಾಪನೆಗೆ ಮತ್ತು ತಂಡದಲ್ಲಿ ಸಂಪರ್ಕ ಸೃಷ್ಟಿಗೆ ನೆರವಾಗುತ್ತದೆ. ಇದರಿಂದ ಆವಿಷ್ಕಾರ, ಉತ್ಪಾದಕತೆಗೆ ಸಹಾಯವಾಗಿ, ಆ ಮೂಲಕ ಉದ್ಯಮದ ಬೆಳವಣಿಗೆ ಮತ್ತು ವ್ಯಾಪ್ತಿ ಇನ್ನಷ್ಟು ಬೆಳೆಯುತ್ತದೆ. ತಂಡ ಕಟ್ಟುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬಹುದು. ಅದರಿಂದಾಗಿ ಉದ್ಯೋಗಿಗಳ ಮಧ್ಯೆ ಬಾಂಧವ್ಯ ಬೆಳೆಯುತ್ತದೆ.
ಇವೆಲ್ಲವನ್ನೂ ಹೊರತುಪಡಿಸಿ, ಕಂಪೆನಿಗಳು ವರ್ಚುವಲ್ ಗೇಮ್ಗಳು ಮತ್ತು ಚಟುವಟಿಕೆಗಳನ್ನು ಯೋಜನೆ ಮಾಡುತ್ತಿವೆ. ಅವುಗಳಲ್ಲಿ ಸಿಬ್ಬಂದಿ ಭಾಗವಹಿಸಬಹುದು, ಒಟ್ಟಾಗಿ ಕೆಲಸ ಮಾಡಿ, ಉದ್ಯೋಗದಲ್ಲಿ ಉತ್ತಮ ಬಾಂಧವ್ಯ ಬೆಳೆಸಬಹುದು. ಇನ್ನು ಕಂಪೆನಿಗಳು ನಿಯಮಿತವಾಗಿ ಟೀಮ್ ಲಂಚ್ಗಳನ್ನು, ಸಂತೋಷ ಕೂಟಗಳನ್ನು ಮತ್ತಿತರ ಚಟುವಟಿಕೆಗಳನ್ನು ಯೋಜಿಸುತ್ತಿವೆ. ಇದೆಲ್ಲದರ ಜತೆಗೆ ಸಿಬ್ಬಂದಿಯ ವೃತ್ತಿ ಬದುಕು ಉನ್ನತಕ್ಕೇರಲು ಅಗತ್ಯ ಇರುವ ಪುನರ್ಕೌಶಲ ಕಾರ್ಯಕ್ರಮವನ್ನು ಆಲೋಚಿಸುತ್ತಿದೆ.
ಸ್ಪಷ್ಟ ಸಂವಹನ ಸಕ್ರಿಯ ಕಂಪೆನಿಗಳು ಸುಧಾರಿತ ಡಿಜಿಟಲ್ ಪರಿಕರಗಳನ್ನು ಅಳವಡಿಸಿಕೊಂಡಿವೆ ಎಂಬ ವಾಸ್ತವದ ಹೊರತಾಗಿಯೂ ದೂರದಿಂದ ಕೆಲಸವನ್ನು ತಡೆರಹಿತವಾಗಿ ಮಾಡಲು ಮತ್ತು ಸುಲಭವಾಗಿಸಲು ಇನ್ನೂ ಸ್ಪಷ್ಟ ಸಂವಹನವನ್ನು ಸ್ಥಾಪಿಸಲು ಶ್ರಮಿಸುತ್ತಾರೆ. ದೂರದ ಕೆಲಸದ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿನ ಸಂವಹನವು ಕ್ರಿಯಾತ್ಮಕವಾಗಿ ಪ್ರಗತಿ ಸಾಧಿಸಿದೆ. ನಿಸ್ಸಂದೇಹವಾಗಿ ಇಂದಿನ ಕಾಲದಲ್ಲಿ ತಂತ್ರಜ್ಞಾನದ ಬಳಕೆಯು ಸಂವಹನದ ಸುದ್ದಿ ಮಾನದಂಡಗಳನ್ನು ಮುಟ್ಟಿದೆ. ಆದ್ದರಿಂದ, ಕಚೇರಿಗೆ ಹಿಂತಿರುಗಲು ಉದ್ಯೋಗಿಗಳಿಗೆ ಕಾರ್ಯತಂತ್ರದ ಯೋಜನೆ ಅಗತ್ಯವಿರುತ್ತದೆ.
ಆನ್-ಸೈಟ್ ಸಂವಹನ ಕೆಲಸದ ಸ್ಥಳದಲ್ಲಿ ಸಂವಹನ ಪ್ರೋಟೋಕಾಲ್‌ಗಳನ್ನು ರಚನೆ ಮಾಡುತ್ತವೆ. ಆಫ್-ಸೈಟ್ ಸಂವಹನಕ್ಕಿಂತ ಉದ್ಯೋಗಿಗಳಿಗೆ ತಮ್ಮ ಪಾತ್ರಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಕೆಲಸದ ಸ್ಥಳದಲ್ಲಿ ಗಹನವಾದ ಸಂಪರ್ಕಗಳು ಮತ್ತು ಸಂಸ್ಕೃತಿಯನ್ನು ಸೃಷ್ಟಿಸಲು ಕೊಡುಗೆ ನೀಡುತ್ತದೆ. ಇದರ ಹೊರತಾಗಿ, ಕಚೇರಿಗಳಲ್ಲಿ ಉದ್ಯೋಗಿಗಳು ನಡೆಸುವ ಸಂವಹನದಿಂದ ನವೀನ ಆಲೋಚನೆಗಳಿಗೆ ಕಾರಣವಾಗಬಹುದು. ಆದರೆ ಇಮೇಲ್ ಅಥವಾ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಹೀಗೆ ಆಗುವ ಸಾಧ್ಯತೆ ಕಡಿಮೆ.
ಕೆಲಸದ ಸ್ಥಳದಲ್ಲಿ ಆರಾಮದಾಯಕ ದೀರ್ಘಾವಧಿಯ ಆರಾಮದಾಯಕ ಕೆಲಸದ ನಂತರ ನಿಸ್ಸಂದೇಹವಾಗಿ ಕಚೇರಿಗೆ ಹಿಂತಿರುಗುವುದು ಉದ್ಯೋಗಿಗಳಿಗೆ ಅಗಾಧ ಆಗಬಹುದು. ಹೆಚ್ಚಿನ ಕಂಪೆನಿಗಳು ಉದ್ಯೋಗಿಗಳಿಗೆ ಆರಾಮದಾಯಕ ಆಗುವಂತೆ ಕ್ರಮೇಣ ಪರಿವರ್ತನೆಯ ವಿಧಾನವನ್ನು ಅಳವಡಿಸಿಕೊಳ್ಳುತ್ತಿವೆ. ಮತ್ತೊಂದೆಡೆ, ನೌಕರರು ಪ್ರತಿ ವಾರ ನಿಗದಿತ ಸಂಖ್ಯೆಯ ಕೆಲಸದ ಗಂಟೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಇದನ್ನು ಪರಿಹರಿಸಲು, ಕಂಪೆನಿಗಳು ಸಿಬ್ಬಂದಿಗೆ ತಮ್ಮದೇ ಆದ ಕೆಲಸದ ಸಮಯವನ್ನು ನಿರ್ಧರಿಸಲು ಮತ್ತು ಅವರ ಕಡ್ಡಾಯ ಸಭೆಗಳು ಹಾಗೂ ಕಚೇರಿಯ ಹಾಜರಾತಿಗೆ ಆದ್ಯತೆ ನೀಡಲು ಅನುಮತಿಸುತ್ತಿವೆ. ಹೆಚ್ಚುವರಿಯಾಗಿ, ಕಂಪೆನಿಗಳು ಕೆಲಸದ ಸ್ಥಳದಲ್ಲಿ ಇತರರಿಗೆ ಸೋಂಕು ತಗುಲುವುದನ್ನು ತಪ್ಪಿಸಲು ಸ್ವಲ್ಪ ಪ್ರಮಾಣದ ಶೀತ ಇದ್ದರೂ ಉದ್ಯೋಗಿಗಳಿಗೆ ತಮ್ಮ ರಜೆ ನೀತಿಗಳನ್ನು ಮರುವಿನ್ಯಾಸ ಮಾಡಲಾಗುತ್ತಿವೆ.
ಉದ್ಯೋಗಿಗಳಿಗೆ ಆರಾಮದಾಯಕ ಮತ್ತು ಉದ್ಯೋಗದಾತರಿಗೆ ಕಡಿಮೆ ನಿರ್ವಹಣೆ ವೆಚ್ಚ ಸೇರಿದಂತೆ ಮನೆಯಿಂದ ಕೆಲಸ ಮಾಡುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿವೆ. ಆದರೂ ಮನೆಯಿಂದಲೇ ಕೆಲಸ ಮಾಡುವುದು ಅನೇಕ ಗೊಂದಲಗಳನ್ನು ಹೊಂದಿದೆ. ಕಚೇರಿಗೆ ಹಿಂತಿರುಗುವುದು ಸಂವಹನಗಳನ್ನು ಸುಗಮಗೊಳಿಸಲು, ಕೆಲಸ ಮಾಡಲು ಮತ್ತು ನವೀನ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಸುಲಭಗೊಳಿಸುತ್ತವೆ. ಹೆಚ್ಚುವರಿಯಾಗಿ, ಇದು ಉದ್ಯೋಗಿಗಳನ್ನು ಕ್ರಿಯಾತ್ಮಕವಾಗಿ ಉಳಿಯಲು ಮತ್ತು ವ್ಯಾಪಾರದ ಉದ್ದೇಶಗಳೊಂದಿಗೆ ಜೋಡಿಸಲು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Work From Home: ವರ್ಕ್ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?
Published On - 6:32 pm, Thu, 25 November 21