Price Hike: ಸೋಪ್, ಡಿಟರ್ಜೆಂಟ್​ಗಳ ಬೆಲೆ ಏರಿಸಿದ ಪ್ರಮುಖ ಎಫ್​ಎಂಸಿಜಿ ಕಂಪೆನಿಗಳು; ದುನಿಯಾ ಇನ್ನೂ ದುಬಾರಿ

ಇನ್​ಪುಟ್​ ವೆಚ್ಚಗಳ ಏರಿಕೆ ಹಿನ್ನೆಲೆಯಲ್ಲಿ ಸೋಪ್, ಡಿಟರ್ಜೆಂಟ್ ಬೆಲೆಯಲ್ಲಿ ಎಫ್​ಎಂಸಿಜಿ ಕಂಪೆನಿಗಳು ಏರಿಕೆ ಮಾಡಿವೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

Price Hike: ಸೋಪ್, ಡಿಟರ್ಜೆಂಟ್​ಗಳ ಬೆಲೆ ಏರಿಸಿದ ಪ್ರಮುಖ ಎಫ್​ಎಂಸಿಜಿ ಕಂಪೆನಿಗಳು; ದುನಿಯಾ ಇನ್ನೂ ದುಬಾರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 25, 2021 | 9:59 PM

ಇನ್​ಪುಟ್ ವೆಚ್ಚಗಳ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಎಫ್​ಎಂಸಿಜಿ ಕಂಪೆನಿಗಳಾದ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (HUL) ಮತ್ತು ಐಟಿಸಿ ಲಿಮಿಟೆಡ್​ನಿಂದ (ITC Ltd) ಸೋಪ್‌ಗಳು ಮತ್ತು ಡಿಟರ್ಜೆಂಟ್‌ಗಳ ಆಯ್ದ ವೇರಿಯಂಟ್​ಗಳ ಬೆಲೆಯನ್ನು ಹೆಚ್ಚಿಸಿವೆ. ಎಚ್​ಯುಎಲ್​ ತನ್ನ 1 ಕೇಜಿ ಪ್ಯಾಕ್‌ನಲ್ಲಿ ವ್ಹೀಲ್ ಡಿಟರ್ಜೆಂಟ್ ಪೌಡರ್‌ನ ಬೆಲೆಯನ್ನು ಶೇ 3.4ರಷ್ಟು ಹೆಚ್ಚಿಸಿದೆ ಎಂದು ಸಿಎನ್​ಬಿಸಿ- ಟಿವಿ18 ನವೆಂಬರ್ 25ರಂದು ವರದಿ ಮಾಡಿದೆ. ಇದು ರೂ. 2 ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸುದ್ದಿ ವಾಹಿನಿಯು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 500 ಗ್ರಾಂ ಪ್ಯಾಕ್ ವ್ಹೀಲ್‌ನಲ್ಲಿ ಬೆಲೆ ಏರಿಕೆಯನ್ನು ಪ್ರಾರಂಭಿಸಲಾಗಿದೆ. ಇದು ರಿನ್ ಡಿಟರ್ಜೆಂಟ್ ಬಾರ್ ಮತ್ತು ಲಕ್ಸ್ ಸೋಪ್‌ಗಳ ಪ್ಯಾಕ್‌ಗಳ ಬೆಲೆಯನ್ನು ಹೆಚ್ಚಿಸಿದೆ.

ಐಟಿಸಿ ಫಿಯಾಮಾ ಡಿ ವಿಲ್ಸ್ ಮತ್ತು ವಿವೆಲ್ ಸಾಬೂನುಗಳ ಬೆಲೆಯನ್ನು ಶೇ 10ರಿಂದ 15ರ ನಡುವೆ ಹೆಚ್ಚಿಸಿದೆ. “ಇನ್‌ಪುಟ್ ವೆಚ್ಚಗಳು ಗಣನೀಯವಾಗಿ ಹೆಚ್ಚಿವೆ ಮತ್ತು ಒಟ್ಟಾರೆ ಉದ್ಯಮವು ಬೆಲೆಗಳನ್ನು ಹೆಚ್ಚಿಸಿದೆ. ಆಯ್ದ ವಸ್ತುಗಳ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಐಟಿಸಿಯ ಗಮನವು ಪರಿಣಾಮಕಾರಿ ವೆಚ್ಚ ನಿರ್ವಹಣೆ, ಪ್ರೀಮಿಯಮ್​ ವಸ್ತುಗಳು, ಅನುಕೂಲಕರ ವ್ಯವಹಾರ ಮಿಶ್ರಣ ಮತ್ತು ವೆಚ್ಚವನ್ನು ತಗ್ಗಿಸಲು ಹಾಗೂ ದಕ್ಷತೆಯನ್ನು ಹೆಚ್ಚಿಸಲು ಎಲ್ಲ ಮಾರ್ಗಗಳನ್ನು ಮೌಲ್ಯಮಾಪನ ಮಾಡುವುದು. ನಾವು ಸಂಪೂರ್ಣ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲ್ಲ,” ಎಂದು ಕಂಪೆನಿಯ ವಕ್ತಾರರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಉತ್ಪನ್ನದ ಬೆಲೆಯನ್ನು ಹೆಚ್ಚಿಸುವುದು ಕೊನೆಯ ಉಪಾಯವಾಗಿದೆ. ಏಕೆಂದರೆ ನಾವು ಗ್ರಾಹಕರ ಮೇಲೆ ಸಾಧ್ಯವಾದಷ್ಟೂ ಪ್ರಭಾವ ಬೀರಲು ಬಯಸುವುದಿಲ್ಲ ಎಂದು ವಕ್ತಾರರು ಸೇರಿಸಿದ್ದಾರೆ.

ಮಾಧ್ಯಮ ಕಳುಹಿಸಿದ ಇಮೇಲ್ ಪ್ರಶ್ನೆಗೆ ಹಿಂದೂಸ್ತಾನ್ ಯುನಿಲಿವರ್ ಪ್ರತ್ಯುತ್ತರ ನೀಡಿಲ್ಲ. ಎಫ್​ಎಂಸಿಜಿ ಕಂಪೆನಿಗಳು ಈಗ ಕೆಲ ಸಮಯದಿಂದ ತೀವ್ರ ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿವೆ- ಇದು ಹೆಚ್ಚಿನ ಇಂಧನ ಬೆಲೆಗಳು, ಹೆಚ್ಚಿದ ತಾಳೆ ಎಣ್ಣೆಯ ಬೆಲೆಗಳು ಮತ್ತು ಇತರ ಬೆಲೆಯ ಸರಕುಗಳ ಹೊರತಾಗಿ ಸರಕು ಸಾಗಣೆಯ ಹೆಚ್ಚಿದ ವೆಚ್ಚಗಳ ಪರಿಣಾಮ ಆಗಿದೆ. ಇತ್ತೀಚೆಗೆ ಪಾರ್ಲೆ ಉತ್ಪನ್ನಗಳು ಹೆಚ್ಚಿನ ಇನ್‌ಪುಟ್ ವೆಚ್ಚವನ್ನು ತಗ್ಗಿಸಲು ಮತ್ತೊಂದು ಸುತ್ತಿನ ಬೆಲೆ ಏರಿಕೆಯನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಅದರ ಜೂನ್ ತ್ರೈಮಾಸಿಕ ಗಳಿಕೆಯ ವೇಳೆಯಲ್ಲಿ-ಎಚ್‌ಯುಎಲ್‌ನ ಉನ್ನತ ನಿರ್ವಹಣೆಯು ಲಾಂಡ್ರಿ ಮತ್ತು ಟೀ ಪೋರ್ಟ್‌ಫೋಲಿಯೊದಲ್ಲಿ ಮತ್ತೊಂದು ಸುತ್ತಿನ ಬೆಲೆ ಹೆಚ್ಚಳವನ್ನು ಕಾರ್ಯಗತಗೊಳಿಸಿದೆ ಎಂದು ಹೇಳಿದೆ. ಕಂಪೆನಿಯ ಆಡಳಿತವು “ವ್ಯವಹಾರ ಮಾದರಿಯನ್ನು ರಕ್ಷಿಸಲು” ಬೆಲೆ ಏರಿಕೆಯ ಅಗತ್ಯವಿದೆ ಎಂದು ಹೇಳಿದೆ.

ಆ ನಂತರ ಅದರ ಸೆಪ್ಟೆಂಬರ್ ತ್ರೈಮಾಸಿಕ ಗಳಿಕೆಯ ವೇಳೆಯಲ್ಲಿ, ಇನ್‌ಪುಟ್ ವೆಚ್ಚಗಳು ಹೆಚ್ಚುತ್ತಲೇ ಇರುತ್ತವೆ ಎಂದು ಕಂಪೆನಿ ಎಚ್ಚರಿಸಿದೆ. ಬೆಲೆ ಹೆಚ್ಚಳವನ್ನು “ಹಂತ ಹಂತವಾದ” ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಕಂಪೆನಿಯ ಉನ್ನತ ಆಡಳಿತವು ಹೇಳಿದೆ. “ಚರ್ಮದ ಸ್ವಚ್ಛತೆ ಮತ್ತು ಕೂದಲ ರಕ್ಷಣೆಯ ವಿಭಾಗಗಳಲ್ಲಿ ಬಳಸಲಾಗುವ ತಾಳೆ ಎಣ್ಣೆ ಮತ್ತು ಅದರ ಉತ್ಪನ್ನಗಳ ಬೆಲೆಗಳು ಮತ್ತಷ್ಟು ಏರುತ್ತಿವೆ. ಇವುಗಳು ಈಗಾಗಲೇ ಐತಿಹಾಸಿಕ ಎತ್ತರದಲ್ಲಿವೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ತಾಳೆ ಋತು ಪೂರ್ಣ ಪ್ರಮಾಣದಲ್ಲಿ ಮತ್ತು ಸ್ಟಾಕ್ ಮಟ್ಟಗಳ ಗೋಚರತೆಯನ್ನು ಹೊಂದಿರುವುದರಿಂದ, ಜಾಗತಿಕ ಬೆಲೆಗಳು ಅಲ್ಪಾವಧಿಯಲ್ಲಿ ಬೆಂಬಲವಾಗಿ ಉಳಿಯುವುದು ನಮ್ಮ ನಿರೀಕ್ಷೆಯಾಗಿದೆ,” ಎಂದು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ರಿತೇಶ್ ತಿವಾರಿ ವಿಶ್ಲೇಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್​ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ