New Labour Laws: ವಾರದಲ್ಲಿ ನಾಲ್ಕು ದಿನದ ಕೆಲಸ, ಹೆಚ್ಚಿನ ಪಿಎಫ್, ಗ್ರಾಚ್ಯುಟಿ… ಗೊತ್ತಿದೆಯಾ ಹೊಸ ಕಾರ್ಮಿಕ ಕಾನೂನು ಮಾಹಿತಿ
ಸರ್ಕಾರದಿಂದ ನಾಲ್ಕು ಹೊಸದಾದ ಕಾರ್ಮಿಕ ಸಂಹಿತೆ (Labour Code) ಬಿಡುಗಡೆ ಮಾಡಲಾಗಿದೆ. ಇದರ ಹಿಂದೆ ಹಲವು ತಿಂಗಳ ಶ್ರಮ ಇದೆ. ಇದರ ಮುಖ್ಯ ಉದ್ದೇಶ ಉದ್ಯೋಗಿಗಳು ಮತ್ತು ಉದ್ಯೋಗದಾತರ ಮಧ್ಯದ ಈ ಹಿಂದಿನ ರೀತಿಯ ಸಂಬಂಧಗಳನ್ನು ಸುಧಾರಿಸುವುದು. ಈ ಹೊಸ ಕಾನೂನುಗಳಿಂದಾಗಿ ಕೆಲಸದ ಸ್ಥಿತಿ, ಉದ್ಯೋಗಿಗಳ ವೇತನ, ಕಾರ್ಮಿಕ ಕಲ್ಯಾಣ, ಆರೋಗ್ಯ ಮತ್ತು ಸುರಕ್ಷತೆ ಇವುಗಳಲ್ಲಿ ಬದಲಾವಣೆ ಆಗಲಿದೆ. ಈ ಕಾನೂನುಗಳು ಒಂದು ಸಲ ಜಾರಿಗೆ ಬಂದ ಮೇಲೆ ದೇಶದಾದ್ಯಂತ ಇರುವ ಎಲ್ಲ ಸಂಸ್ಥೆಗಳಲ್ಲಿ ಬದಲಾವಣೆ ಆಗಲಿದೆ. […]
ಸರ್ಕಾರದಿಂದ ನಾಲ್ಕು ಹೊಸದಾದ ಕಾರ್ಮಿಕ ಸಂಹಿತೆ (Labour Code) ಬಿಡುಗಡೆ ಮಾಡಲಾಗಿದೆ. ಇದರ ಹಿಂದೆ ಹಲವು ತಿಂಗಳ ಶ್ರಮ ಇದೆ. ಇದರ ಮುಖ್ಯ ಉದ್ದೇಶ ಉದ್ಯೋಗಿಗಳು ಮತ್ತು ಉದ್ಯೋಗದಾತರ ಮಧ್ಯದ ಈ ಹಿಂದಿನ ರೀತಿಯ ಸಂಬಂಧಗಳನ್ನು ಸುಧಾರಿಸುವುದು. ಈ ಹೊಸ ಕಾನೂನುಗಳಿಂದಾಗಿ ಕೆಲಸದ ಸ್ಥಿತಿ, ಉದ್ಯೋಗಿಗಳ ವೇತನ, ಕಾರ್ಮಿಕ ಕಲ್ಯಾಣ, ಆರೋಗ್ಯ ಮತ್ತು ಸುರಕ್ಷತೆ ಇವುಗಳಲ್ಲಿ ಬದಲಾವಣೆ ಆಗಲಿದೆ. ಈ ಕಾನೂನುಗಳು ಒಂದು ಸಲ ಜಾರಿಗೆ ಬಂದ ಮೇಲೆ ದೇಶದಾದ್ಯಂತ ಇರುವ ಎಲ್ಲ ಸಂಸ್ಥೆಗಳಲ್ಲಿ ಬದಲಾವಣೆ ಆಗಲಿದೆ. ಈ ನಾಲ್ಕು ಹೊಸ ಕಾರ್ಮಿಕ ಕಾನೂನು ಜಾರಿಗೆ ಬಂದ ಮೇಲೆ ಆಗುವ ಬದಲಾವಣೆಗಳೇನು ಎಂಬ ವಿವರ ಇಲ್ಲಿದೆ.
ಕೆಲಸ ಮಾಡುವ ಅವಧಿ ಹಾಗೂ ರಜಾ ದಿನ
ಹೊಸ ಕಾರ್ಮಿಕ ಕಾನೂನು ಪ್ರಕಾರ ಜಾರಿ ಆದ ಮೇಲೆ ಕೆಲಸ ಮಾಡುವ ದಿನಗಳಲ್ಲಿ ಬದಲಾಗಲಿದೆ. ಐದು ದಿನದ ಬದಲಿಗೆ ನಾಲ್ಕು ದಿನದ ಕೆಲಸಕ್ಕೆ, ಮೂರು ರಜಾ ದಿನಕ್ಕೆ ಮಾರ್ಪಾಡಾಗಲಿದೆ. ಆದರೆ ಇಲ್ಲೊಂದು ವಿಚಾರ ಇದೆ. ನಾಲ್ಕು ದಿನಗಳು 8 ಗಂಟೆಗಳ ಬದಲಿಗೆ 12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡುವ ಅವಧಿ ಕಡಿಮೆ ಆಗಲ್ಲ. ಇದು ಪ್ರತಿ ಉದ್ಯಮಕ್ಕೂ ಅನ್ವಯಿಸುತ್ತದೆ. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ಅಲ್ಲಿ ರೂಪಿಸುವ ನಿಯಮಕ್ಕೆ ತಕ್ಕಂತೆ ಬದಲಾಗುತ್ತದೆ.
ಪಿಎಫ್ ಕೊಡುಗೆ ಮತ್ತು ಕೈಗೆ ಬರುವ ವೇತನ
ಮತ್ತೊಂದು ಪ್ರಮುಖ ಅಂಶ ಏನೆಂದರೆ ಉದ್ಯೋಗಿಗಳ ಟೇಕ್ ಹೋಮ್ ವೇತನದಲ್ಲಿ ಕಡಿಮೆ ಆಗುತ್ತದೆ. ಹೊಸ ನಿಯಮಾವಳಿಯಂತೆ ಗ್ರಾಸ್ ವೇತನದಲ್ಲಿ ಶೇ 50ರಷ್ಟು ಉದ್ಯೋಗಿಯ ಮೂಲವೇತನ ಆಗಿರಬೇಕು. ಇದರೊಂದಿಗೆ ಉದ್ಯೋಗಿಗ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆ ಸಹ ಹೆಚ್ಚಾಗುತ್ತದೆ. ಕೆಲವು ಉದ್ಯೋಗಿಗಳು, ಅದರಲ್ಲೂ ಖಾಸಗಿ ವಲಯದ ಉದ್ಯೋಗಿಗಳ ವೇತನ ಇಳಿಕೆ ಆಗುತ್ತದೆ. ಹೊಸದಾಗಿ ಕರಡು ಸಿದ್ಧಪಡಿಸಿರುವ ನಿಯಮಾವಳಿಯಂತೆ ನಿವೃತ್ತಿ ನಂತರ ಸಿಗುವ ಹಣ ಹಾಗೂ ಗ್ರಾಚ್ಯುಟಿ ಮೊತ್ತ ಜಾಸ್ತಿ ದೊರೆಯುತ್ತದೆ,
ವಾರ್ಷಿಕ ರಜಾ
ಹೊಸ ಕಾರ್ಮಿಕ ಕಾನೂನು ಅಡಿಯಲ್ಲಿ ಉದ್ಯೋಗಿಯು ಕಂಪೆನಿಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ರಜಾ ಸಂಖ್ಯೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಹಿಂದಿನ ವರ್ಷದ ರಜಾ ದಿನಗಳನ್ನು ಮುಂದಿನ ವರ್ಷಕ್ಕೆ ಬಳಸಿಕೊಳ್ಳುವಂಥದ್ದು, ರಜಾ ನಗದೀಕರಣದಲ್ಲಿ ಬದಲಾವಣೆ ಆಗಲಿದೆ. ಜತೆಗೆ ವರ್ಕ್ ಫ್ರಮ್ ಹೋಮ್ಗೆ ಒಂದು ರೂಪು-ರೇಖೆ ನೀಡುವುದಕ್ಕೆ ಆಲೋಚಿಸುತ್ತಿದೆ. ಹೊಸ ನಿಯಮಗಳು ರಜೆಗಾಗಿ ಅರ್ಹತೆಯ ಅಗತ್ಯವನ್ನು 240 ದಿನಗಳ ಕೆಲಸದಿಂದ ಒಂದು ವರ್ಷದಲ್ಲಿ 180 ದಿನಗಳಿಗೆ ಹೆಚ್ಚಿಸಿವೆ, ಅಂದರೆ ಉದ್ಯೋಗಿ ರಜೆ ಪಡೆಯಲು ಅರ್ಹರಾಗಲು ಹೊಸ ಕೆಲಸಕ್ಕೆ ಸೇರಿದ ನಂತರ 240 ದಿನಗಳವರೆಗೆ ಕೆಲಸ ಮಾಡಬೇಕು.
ಉತ್ತರಾಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ, ಅರುಣಾಚಲಪ್ರದೇಶ, ಹರ್ಯಾಣ, ಜಾರ್ಖಂಡ್, ಪಂಜಾಬ್, ಮಣಿಪುರ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಕಾರ್ಮಿಕ ಕಾನೂನಿನ ನಿಯಮಾವಳಿಯನ್ನು ರೂಪಿಸಿವೆ.
ಇದನ್ನೂ ಓದಿ: New Wage Code: ಹೊಸ ಕಾನೂನು ಜಾರಿ ಹೇಗೆ ಬದಲಿಸಲಿದೆ ವೇತನ ರಚನೆ ತಿಳಿದಿದೆಯೇ?