ಮಾರ್ಚ್ ತಿಂಗಳ ಸಗಟು ಹಣದುಬ್ಬರ ಶೇ. 0.53ಕ್ಕೆ; ಮೂರು ತಿಂಗಳಲ್ಲೇ ಗರಿಷ್ಠ ಬೆಲೆ ಏರಿಕೆ

India WPI inflation: ಸಗಟು ಮಾರಾಟ ಅನುಸೂಚಿ ಆಧಾರಿತ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ. 0.53ಕ್ಕೆ ಏರಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಫೆಬ್ರುವರಿ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ. 0.3, 2023ರ ಮಾರ್ಚ್ ತಿಂಗಳಲ್ಲಿ ಶೇ. 1.34ರಷ್ಟು ಇತ್ತು. ಸಗಟು ಮಾರಾಟ ಬೆಲೆ ಹಣದುಬ್ಬರದಲ್ಲಿ ಆಹಾರವಸ್ತುಗಳ ಬೆಲೆ ಏರಿಕೆ ಮತ್ತು ತಯಾರಿತ ಉತ್ಪನ್ನಗಳ ಬೆಲೆ ಏರಿಕೆ ಪ್ರಮುಖ ಪಾತ್ರ ವಹಿಸಿವೆ.

ಮಾರ್ಚ್ ತಿಂಗಳ ಸಗಟು ಹಣದುಬ್ಬರ ಶೇ. 0.53ಕ್ಕೆ; ಮೂರು ತಿಂಗಳಲ್ಲೇ ಗರಿಷ್ಠ ಬೆಲೆ ಏರಿಕೆ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 15, 2024 | 3:08 PM

ನವದೆಹಲಿ, ಏಪ್ರಿಲ್ 15: ಒಂದೆಡೆ ರೀಟೇಲ್ ಹಣದುಬ್ಬರ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇನ್ನೊಂದೆಡೆ ಸಗಟು ಹಣದುಬ್ಬರ (Wholesale Inflation) ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇಂದು ಸೋಮವಾರ ಕೇಂದ್ರ ವಾಣಿಜ್ಯ ಸಚಿವಾಲಯ (Union commerce ministry) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್ ತಿಂಗಳ ಹೋಲ್​ಸೇಲ್ ಹಣದುಬ್ಬರ ಶೇ. 0.53ಕ್ಕೆ ಏರಿದೆ. ಸಗಟು ಮಾರಾಟ ಸೂಚಿ ಅಥವಾ ಡಬ್ಲ್ಯುಪಿಐ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 0.2ರಲ್ಲಿ ಇತ್ತು. ಹೆಚ್ಚೂಕಡಿಮೆ ಮೂರು ಪಟ್ಟು ಬೆಲೆ ಏರಿಕೆ ಆಗಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಗಟು ಮಾರಾಟ ಸೂಚಿ ಹಣದುಬ್ಬರ ಕಡಿಮೆ ಆಗಿದೆ. ಅಂದರೆ 2023ರ ಮಾರ್ಚ್ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ. 1.34ರಷ್ಟು ಇತ್ತು.

ರೀಟೇಲ್ ಹಣದುಬ್ಬರಕ್ಕೆ ಕಾರಣವಾದ ಆಹಾರವಸ್ತುಗಳ ಬೆಲೆಗಳೇ ಸಗಟು ಹಣದುಬ್ಬರ ಏರಿಕೆಗೂ ಕಾರಣವಾಗಿವೆ. ಫೆಬ್ರುವರಿಯಲ್ಲಿ ಶೇ. 4.09ರಷ್ಟಿದ್ದ ಆಹಾರ ವಸ್ತುಗಳ ಸಗಟು ಬೆಲೆ ಮಾರ್ಚ್ ತಿಂಗಳಲ್ಲಿ ಶೇ. 4.65ಕ್ಕೆ ಏರಿವೆ.

ಇದನ್ನೂ ಓದಿ: ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ

ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತ ಹಣದುಬ್ಬರದಲ್ಲಿ ಮೂರು ವಿಭಾಗಗಳಿವೆ. ಪ್ರೈಮರಿ ಆರ್ಟಿಕಲ್, ಇಂಧನ ಮತ್ತು ವಿದ್ಯುತ್, ಹಾಗೂ ತಯಾರಿತ ಉತ್ಪನ್ನಗಳು ಇರುತ್ತವೆ. ಪ್ರೈಮರಿ ಆರ್ಟಿಕಲ್​ನಲ್ಲಿ ಆಹಾರ ವಸ್ತುಗಳು, ಆಹಾರೇತರ ವಸ್ತಗಳು, ಖನಿಜಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಕಗಿ ಅನಿಲ ಇವನ್ನು ಒಳಗೊಳ್ಳಲಾಗಿರುತ್ತದೆ.

ಇನ್ನು, ತಯಾರಿತ ಉತ್ಪನ್ನಗಳಲ್ಲಿ ಆಹಾರ ಉತ್ಪನ್ನಗಳು, ಪಾನೀಯಗಳು, ತಂಬಾಕು, ಜವಳಿ, ವೆಜಿಟಬಲ್ ಆಯಿಲ್, ಅನಿಮಲ್ ಫ್ಯಾಟ್, ಸಿಮೆಂಟ್, ಸ್ಟೀಲ್ ಇತ್ಯಾದಿ ಉತ್ಪನ್ನಗಳು ಇರುತ್ತವೆ. ಈ ಮೂರು ವಿಭಾಗಗಳ ಪೈಕಿ ತಯಾರಿತ ಉತ್ಪನ್ನಗಳಿಗೆ ಶೇ. 64ರಷ್ಟು ವೈಟೇಜ್ ಇರುತ್ತದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿ 648 ಬಿಲಿಯನ್ ಡಾಲರ್​ಗೆ ಏರಿಕೆ; ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ

ಪ್ರೈಮರಿ ಆರ್ಟಿಕಲ್​ನಲ್ಲಿನ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 4.49ರಷ್ಟು ಇದ್ದದ್ದು ಮಾರ್ಚ್​ನಲ್ಲಿ ಶೇ. 4.51ಕ್ಕೆ ಏರಿದೆ. ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ. 1.59ರಿಂದ ಮೈನಸ್ ಶೇ. 0.77ಕ್ಕೆ ಏರಿದೆ. ಮ್ಯಾನುಫ್ಯಾಕ್ಚರ್ಡ್ ಪ್ರಾಡಕ್ಟ್ಸ್​ನ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ. 1.27ರಿಂದ ಮೈನಸ್ ಶೇ. 0.85ಕ್ಕೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ