ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ

Inflation at 4.85%: ಬೇಸಿಗೆ ಬಿಸಿ ಸರ್ಕಾರಕ್ಕೆ ಆತಂಕ ತಂದಿದೆ. ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ. 4.85ಕ್ಕೆ ಇಳಿದಿದೆ. ಇದು ಕಳೆದ ಐದು ತಿಂಗಳಲ್ಲೇ ಕನಿಷ್ಠ ಹಣದುಬ್ಬರವಾಗಿದೆ. ಆದರೂ ಕೂಡ ಸರ್ಕಾರಕ್ಕೆ ಸಮಾಧಾನದ ಸ್ಥಿತಿ ಬಂದಿಲ್ಲ. ಇದಕ್ಕೆ ಕಾರಣ, ಈ ಬಾರಿಯ ಉರಿ ಬೇಸಿಗೆ. ಅಲ್ಲದೇ ಮಾರ್ಚ್​ನಲ್ಲಿ ಆಹಾರ ವಸ್ತುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಬೇಸಿಗೆಯಲ್ಲಿ ಇಳುವರಿ ಇನ್ನಷ್ಟು ಕುಸಿಯಲಿದೆ. ಇದು ಸರ್ಕಾರಕ್ಕೆ ತಲೆನೋವು ತಂದಿದೆ.

ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2024 | 11:58 AM

ನವದೆಹಲಿ, ಏಪ್ರಿಲ್ 14: ಮಾರ್ಚ್ ತಿಂಗಳ ಹಣದುಬ್ಬರ (Inflation) ಶೇ. 4.85ರಷ್ಟಿರುವುದು ಮೊನ್ನೆ ಬಿಡುಗಡೆ ಆದ ದತ್ತಾಂಶದಿಂದ ತಿಳಿದುಬಂದಿದೆ. ಕಳೆದ ಐದು ತಿಂಗಳಲ್ಲೇ ಇದು ಕನಿಷ್ಠ ಹಣದುಬ್ಬರ ದರವಾಗಿದೆ. ಹಿಂದಿನ ತಿಂಗಳು, ಅಂದರೆ 2024ರ ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 5.09 ಇತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ, ಅಂದರೆ 2023ರ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ. 5.66ರಷ್ಟಿತ್ತು. ಸರ್ಕಾರ ಹಣದುಬ್ಬರವನ್ನು ಕಟ್ಟಿಹಾಕಲು ನಿಗದಿ ಮಾಡಿರುವ ಶೇ. 4ರ ದರಕ್ಕೆ ಇದು ಸಮೀಪ ಹೋಗಿದೆ. ಆದರೆ, ಸರ್ಕಾರಕ್ಕೆ ಹಣದುಬ್ಬರದ ಆತಂಕ ಮಾತ್ರ ಮುಂದುವರಿದಿದೆ.

ಹಣದುಬ್ಬರ ಕಡಿಮೆ ಆಗುತ್ತಿದ್ದರೂ ಸರ್ಕಾರಕ್ಕೆ ಆತಂಕ ಮುಂದುವರಿಯಲು ಕಾರಣವಾಗಿರುವುದು ಆಹಾರ ಹಣದುಬ್ಬರ. ಹಣದುಬ್ಬರದಲ್ಲಿ ಆಹಾರ ವಿಭಾಗ ಪ್ರಮುಖವಾದುದು. ಆಹಾರ ಹಣದುಬ್ಬರ ಶೇ. 8.66ರಿಂದ ಶೇ. 8.52ಕ್ಕೆ ಕಡಿಮೆ ಆಗಿದೆ. ತರಕಾರಿ, ಬೇಳೆ ಕಾಳುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗುತ್ತಿಲ್ಲದಿರುವುದು ಸರ್ಕಾರಕ್ಕೆ ಚಿಂತೆ ಮೂಡಿಸಿದೆ.

ಇದಕ್ಕಿಂತ ಹೆಚ್ಚಾಗಿ, ಈ ಬಾರಿಯ ಬೇಸಿಗೆ ಭಯ ಹುಟ್ಟಿಸುವ ರೀತಿ ಇರಲಿದೆ ಎಂಬ ಸುಳಿವು ಈಗಾಗಲೇ ಸಿಕ್ಕಿದೆ. ಏಪ್ರಿಲ್​ನಿಂದ ಜೂನ್​ವರೆಗೆ ದೇಶಾದ್ಯಂತ ತೀವ್ರ ಉಷ್ಣಗಾಳಿಯ ದಾಳಿ ಇರಲಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಮಾರಕ ಪೆಟ್ಟು ಬೀಳಲಿದ್ದು, ಬೆಳೆ ಉತ್ಪನ್ನಗಳು ತೀವ್ರವಾಗಿ ಕುಸಿಯಬಹುದು. ಪರಿಣಾಮವಾಗಿ ಆಹಾರ ಹಣದುಬ್ಬರ ತಾರಕಕ್ಕೇರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿ 648 ಬಿಲಿಯನ್ ಡಾಲರ್​ಗೆ ಏರಿಕೆ; ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ

ಹೀಟ್​ವೇವ್ ನಡುವೆಯೂ ಭರವಸೆಯ ಬೆಳಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ನೃರುತ್ಯ ಮುಂಗಾರು ಸಹಜವಾಗಿ ಆಗಬಹುದು ಎಂದು ಹೇಳಿದೆ. ಇದೇನಾದರೂ ನಿಜವಾದಲ್ಲಿ ಮುಂಗಾರು ಬೆಳೆಯ ಫಸಲು ಉತ್ತಮವಾಗಿ ಬರಲಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಆಹಾರ ಹಣದುಬ್ಬರ ತಗ್ಗಲು ಕಾರಣವಾಗಬಹುದು ಎಂದು ತಜ್ಞರು ಪರಿಭಾವಿಸಿದ್ದಾರೆ.

ಪೆಟ್ರೋಲ್ ಬೆಲೆ ಇಳಿಕೆಯಿಂದ ಸಮಾಧಾನ

ತಜ್ಞರು ಮಾರ್ಚ್ ತಿಂಗಳ ಹಣದುಬ್ಬರ ಶೇ. 4.7ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ತುಸು ಹೆಚ್ಚೇ ಆಗಿದೆ. ಆಹಾರವಸ್ತುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸಿದ್ದರಿಂದ ಒಟ್ಟಾರೆ ಹಣದುಬ್ಬರ ಶಾಂತಗೊಳ್ಳಲು ಸಹಾಯಕವಾಗಿದೆ. ಇಲ್ಲದಿದ್ದರೆ ಶೇ. 5ಕ್ಕಿಂತಲೂ ಹೆಚ್ಚಿನ ಮೇಲ್ಮಟ್ಟದಲ್ಲಿ ಇರುವ ಸಾಧ್ಯತೆ ಇತ್ತು.

ಇದನ್ನೂ ಓದಿ: ಬೌರ್ನ್‌ವಿಟಾ ಮಕ್ಕಳ ಜೀವಕ್ಕೆ ಕುತ್ತು, ಹೆಲ್ತ್​​​ ಡ್ರಿಂಕ್ಸ್​​​ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ

ಭಾರತಕ್ಕೆ ಕಳೆದ ಕೆಲ ತಿಂಗಳಿಂದ ಆಹಾರ ವಸ್ತುಗಳ ಬೆಲೆಯೇ ತಲೆನೋವಾಗಿರುವುದು. ಹಣದುಬ್ಬರವನ್ನು ನಿರೀಕ್ಷಿತ ರೀತಿಯಲ್ಲಿ ತಹಬದಿಗೆ ತರಲು ಸಾಧ್ಯ ಆಗದೇ ಹೋಗಲು ಇದೇ ಆಹಾರವಸ್ತುಗಳ ಬೆಲೆ ಏರಿಕೆ ಕಾರಣವಾಗಿದೆ. ಏಪ್ರಿಲ್ ತಿಂಗಳಲ್ಲಿ ಆಹಾರ ಹಣದುಬ್ಬರ ಶೇ. 7ಕ್ಕಿಂತ ಕಡಿಮೆ ಮಟ್ಟಕ್ಕೆ ಬರುವುದಿಲ್ಲ ಎಂದು ಐಸಿಆರ್​ಎ ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ