Year Ender: 2023ರಲ್ಲಿ ಬೆರಗು ಮೂಡಿಸಿದ ಸ್ಮಾಲ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು; ಮೂರು ಸ್ತರದ ಫಂಡ್​ಗಳು ತಂದಿವೆ ಅಚ್ಚರಿಯ ರಿಟರ್ನ್ಸ್

|

Updated on: Dec 24, 2023 | 12:18 PM

The Year's Top Mutual Funds: 2023ರಲ್ಲಿ ಷೇರುಪೇಟೆ ಬೆಳವಣಿಗೆ ಜೊತೆಗೆ ಮ್ಯುಚುವಲ್ ಫಂಡ್​ಗಳು ತಮ್ಮ ಮೇಲಿನ ನಿರೀಕ್ಷೆಗಳನ್ನು ಉಳಿಸಿಕೊಂಡಿವೆ. ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು 2023ರಲ್ಲಿ ಸರಾಸರಿಯಾಗಿ ಶೇ. 16.15ರಷ್ಟು ಲಾಭ ತಂದುಕೊಟ್ಟಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು ಕ್ರಮವಾಗಿ ಸರಾಸರಿ ಶೇ. 30.77 ಮತ್ತು ಶೇ. 34.29ರಷ್ಟು ರಿಟರ್ನ್ ತಂದುಕೊಟ್ಟಿವೆ.

Year Ender: 2023ರಲ್ಲಿ ಬೆರಗು ಮೂಡಿಸಿದ ಸ್ಮಾಲ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು; ಮೂರು ಸ್ತರದ ಫಂಡ್​ಗಳು ತಂದಿವೆ ಅಚ್ಚರಿಯ ರಿಟರ್ನ್ಸ್
ಮ್ಯುಚುವಲ್ ಫಂಡ್​
Follow us on

ಮ್ಯುಚುವಲ್ ಫಂಡ್​ಗಳು ದಿನೇ ದಿನೇ ಜನಪ್ರಿಯವೆನಿಸುತ್ತಿರುವ ಹೂಡಿಕೆ ಸಾಧನಗಳಾಗಿವೆ. ಲಕ್ಷಾಂತರ ಜನರು ಇವುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಲಕ್ಷಾಂತರ ಕೋಟಿ ರೂ ಹಣ ಹೂಡಿಕೆ ಆಗಿದೆ. ಈ ಮ್ಯುಚುವಲ್ ಫಂಡ್​ಗಳು (mutual funds) ಹೂಡಿಕೆದಾರರ ಹಣವನ್ನು ಷೇರು ಮಾರುಕಟ್ಟೆ, ಡೆಟ್ ಮಾರುಕಟ್ಟೆ, ಚಿನ್ನ ಇತ್ಯಾದಿಯಲ್ಲಿ ಇನ್ವೆಸ್ಟ್ ಮಾಡಿ ಅದರಿಂದ ಬಂದ ಲಾಭವನ್ನು ಹಂಚುತ್ತವೆ. ಷೇರುಮಾರುಕಟ್ಟೆ ಅಥವಾ ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳು ಹೆಚ್ಚು ರಿಸ್ಕ್​ನಿಂದ ಕೂಡಿರುತ್ತವಾದರೂ ಹೆಚ್ಚು ರಿಟರ್ನ್ ತಂದುಕೊಡುವ ಸಾಮರ್ಥ್ಯ ಹೊಂದಿರುತ್ತವೆ.

ಈ ಈಕ್ವಿಟಿ ಮ್ಯುಚುವಲ್ ಫಂಡ್​ಗಳಲ್ಲಿ ಮೂರು ವಿಧ ಇರುತ್ತವೆ. ಲಾರ್ಜ್ ಕ್ಯಾಪ್, ಅಂದರೆ ಹೆಚ್ಚಿನ ಷೇರುಮೊತ್ತ ಇರುವ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳಿರುತ್ತವೆ. ಮಿಡ್ ಕ್ಯಾಪ್, ಅಂದರೆ ಮಧ್ಯಮ ಪ್ರಮಾಣದ ಷೇರುಮೊತ್ತ ಇರುವ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಫಂಡ್​ಗಳಿರುತ್ತವೆ. ಇನ್ನು, ಸ್ಮಾಲ್ ಕ್ಯಾಪ್, ಅಂದರೆ ಹೆಚ್ಚಿನ ಷೇರುಮೊತ್ತ ಇರದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವಂಥವು.

ಇದನ್ನೂ ಓದಿ: How to: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು…

ಸಾಮಾನ್ಯವಾಗಿ ಲಾರ್ಜ್ ಕ್ಯಾಪ್ ಫಂಡ್​ಗಳಲ್ಲಿನ ಹೂಡಿಕೆ ಕಡಿಮೆ ರಿಸ್ಕಿ ಎನಿಸುತ್ತವೆ. ಸ್ಮಾಲ್ ಕ್ಯಾಪ್ ಹೆಚ್ಚು ರಿಸ್ಕಿ ಇರುತ್ತದೆ. ಆದರೆ, ರಿಟರ್ನ್ ವಿಚಾರದಲ್ಲಿ ಇದು ಉಲ್ಟಾ. 2023ರ ವರ್ಷದಲ್ಲಿ ಈ ಅಂಶ ರುಜುವಾಗಿದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್​ಗಳು ಲಾರ್ಜ್ ಕ್ಯಾಪ್ ಫಂಡ್​ಗಳಿಗಿಂತ ಹೆಚ್ಚು ರಿಟರ್ನ್ ತಂದುಕೊಟ್ಟಿವೆ. ಲಾರ್ಜ್ ಕ್ಯಾಪ್ ಫಂಡ್​ಗಳು ಸರಾಸರಿಯಾಗಿ 2023ರಲ್ಲಿ ಶೇ. 16.15ರಷ್ಟು ಲಾಭ ಮಾಡಿವೆ. ಮಿಡ್ ಕ್ಯಾಪ್ ಫಂಡ್​ಗಳು ತಂದಿರುವ ಸರಾಸರಿ ರಿಟರ್ನ್ ಶೇ. 30.77ರಷ್ಟಿದ್ದರೆ, ಸ್ಮಾಲ್ ಕ್ಯಾಪ್ ಭರ್ಜರಿ 34.29ರಷ್ಟು ಲಾಭ ತಂದುಕೊಟ್ಟಿದೆ.

2023ರಲ್ಲಿ ಹೆಚ್ಚು ಲಾಭ ಮಾಡಿದ ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು

  1. ನಿಪ್ಪೋನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್: ಶೇ. 28.85 ರಿಟರ್ನ್
  2. ಬ್ಯಾಂಕ್ ಆಫ್ ಇಂಡಿಯಾ ಬ್ಲ್ಯೂಚಿಪ್ ಫಂಡ್: ಶೇ. 27.05 ರಿಟರ್ನ್
  3. ಎಚ್​ಡಿಎಫ್​ಸಿ ಟಾಪ್ 100 ಫಂಡ್: ಶೇ. 26.61 ಲಾಭ
  4. ಜೆಎಂ ಲಾರ್ಜ್ ಕ್ಯಾಪ್ ಫಂಡ್: ಶೇ. 26.16 ಲಾಭ
  5. ಇನ್ವೆಸ್ಕೋ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್: ಶೇ. 24.45ರಷ್ಟು ಲಾಭ

ಇದನ್ನೂ ಓದಿ: ಎಷ್ಟು ಮ್ಯುಚುವಲ್ ಫಂಡ್​ಗಳು ತಂತಮ್ಮ ಬೆಂಚ್​ಮಾರ್ಕ್ ಮುಟ್ಟಿವೆ? ಶೇ. 50ರಷ್ಟು ಫಂಡ್​ಗಳಿಂದ ನಿರಾಸೆ

2023ರಲ್ಲಿ ಹೆಚ್ಚು ಲಾಭ ಮಾಡಿದ ಮಿಡ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು

  1. ನಿಪ್ಪೋನ್ ಇಂಡಿಯಾ ಗ್ರೋತ್ ಫಂಡ್: ಶೇ. 42.93ರಷ್ಟು ಲಾಭ
  2. ಜೆಎಂ ಮಿಡ್​ಕ್ಯಾಪ್ ಫಂಡ್: ಶೇ. 42.88ರಷ್ಟು ಲಾಭ
  3. ಮಹೀಂದ್ರ ಮ್ಯಾನುಲೈಫ್ ಮಿಡ್ ಕ್ಯಾಪ್ ಫಂಡ್: ಶೇ. 41.31ರಷ್ಟು ಲಾಭ
  4. ಎಚ್​ಡಿಎಫ್​ಸಿ ಮಿಡ್ ಕ್ಯಾಪ್ ಆಪೋರ್ಚುನಿಟೀಸ್ ಫಂಡ್: ಶೇ. 41.11ರಷ್ಟು ಲಾಭ
  5. ವೈಟ್ ಓಕ್ ಕ್ಯಾಪಿಟಲ್ ಮಿಡ್ ಕ್ಯಾಪ್ ಫಂಡ್: ಶೇ. 38.53ರಷ್ಟು ಲಾಭ

2023ರಲ್ಲಿ ಹೆಚ್ಚು ಲಾಭ ಮಾಡಿದ ಸ್ಮಾಲ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು

  1. ಮಹೀಂದ್ರ ಮ್ಯಾನುಲೈಫ್ ಸ್ಮಾಲ್ ಕ್ಯಾಪ್ ಫಂಡ್: ಶೇ. 53.22ರಷ್ಟು ಲಾಭ
  2. ಬಂಧನ್ ಸ್ಮಾಲ್ ಕ್ಯಾಪ್ ಫಂಡ್: ಶೇ. 49.48ರಷ್ಟು ಲಾಭ
  3. ಫ್ರಾಂಕ್ಲಿನ್ ಇಂಡಿಯಾ ಸ್ಮಾಲರ್ ಕಂಪನೀಸ್ ಫಂಡ್: ಶೇ. 49.44ರಷ್ಟು ಲಾಭ
  4. ಐಟಿಐ ಸ್ಮಾಲ್ ಕ್ಯಾಪ್ ಫಂಡ್: ಶೇ. 48.54ರಷ್ಟು ಲಾಭ
  5. ಕ್ಯಾಂಟ್ ಸ್ಮಾಲ್ ಕ್ಯಾಪ್ ಫಂಡ್: ಶೇ. 44.90ರಷ್ಟು ಲಾಭ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ