ಎಷ್ಟು ಮ್ಯುಚುವಲ್ ಫಂಡ್ಗಳು ತಂತಮ್ಮ ಬೆಂಚ್ಮಾರ್ಕ್ ಮುಟ್ಟಿವೆ? ಶೇ. 50ರಷ್ಟು ಫಂಡ್ಗಳಿಂದ ನಿರಾಸೆ
Equity Mutual funds Performance: 2023ರ ವರ್ಷದಲ್ಲಿ ವಿವಿಧ ವಿಭಾಗದ ಇಂಡೆಕ್ಸ್ಗಳಿಗೆ ಹೋಲಿಸಿದರೆ ಶೇ. 50ರಷ್ಟು ಈಕ್ವಿಟಿ ಮ್ಯುಚುವಲ್ ಫಂಡ್ಗಳು ನಿರೀಕ್ಷೆಯ ಮಟ್ಟ ಮುಟ್ಟಿಲ್ಲ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಿಭಾಗದಲ್ಲಿ ಶೇ. 82ರಷ್ಟು ಮ್ಯುಚುವಲ್ ಫಂಡ್ಗಳು ಬೆಂಚ್ಮಾರ್ಕ್ ಮುಟ್ಟಲು ವಿಫಲವಾಗಿವೆ. ಸದ್ಯ ಮಾರುಕಟ್ಟೆಯಲ್ಲಿ 243 ಈಕ್ವಿಟಿ ಮ್ಯುಚುವಲ್ ಫಂಡ್ಗಳಿವೆ. ಇದರಲ್ಲಿ 122 ಮ್ಯುಚುವಲ್ ಫಂಡ್ಗಳು ಬೆಂಚ್ಮಾರ್ಕ್ ಮಟ್ಟ ತಲುಪಿಲ್ಲ ಎನ್ನಲಾಗಿದೆ.
ನವದೆಹಲಿ, ಡಿಸೆಂಬರ್ 18: ಈಕ್ವಿಟಿ ಮ್ಯೂಚುವಲ್ ಫಂಡ್ ಸ್ಕೀಮ್ಗಳು 2023ರ ವರ್ಷದಲ್ಲಿ ಅವುಗಳ ಬೆಂಚ್ಮಾರ್ಕ್ ಮಟ್ಟ ಮುಟ್ಟಲು ವಿಫಲವಾಗಿವೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಈಕ್ವಿಟಿಗೆ ಮಾತ್ರ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ (Equity mutual funds) ಪ್ರಸಕ್ತ 243 ಇದೆ. ಇದರಲ್ಲಿ 122 ಈಕ್ವಿಟಿ ಸ್ಕೀಮ್ಗಳು ತಂತಮ್ಮ ಬೆಂಚ್ಮಾರ್ಕ್ಗಳ ಸಾಧನೆಯ ಮಟ್ಟವನ್ನು ಮುಟ್ಟಲು ವಿಫಲವಾಗಿವೆ. ಅಂದರೆ, 2023ರಲ್ಲಿ ಇಂಡೆಕ್ಸ್ ಫಂಡ್ಗಳು ಬಹುತೇಕ ಮ್ಯೂಚುವಲ್ ಫಂಡ್ಗಳಿಗಿಂತ ಹೆಚ್ಚು ರಿಟರ್ನ್ ತಂದಿವೆ.
ಏನಿದು ಈಕ್ವಿಟಿ ಬೆಂಚ್ಮಾರ್ಕ್?
ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಸಾವಿರಾರು ಕಂಪನಿಗಳ ಷೇರುಗಳು ಲಿಸ್ಟ್ ಆಗಿರುತ್ತವೆ. ಅವುಗಳ ಷೇರುಸಂಖ್ಯೆ ಮತ್ತು ಬೆಲೆಯ ಆಧಾರದ ಮೇಲೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಹೀಗೆ ವಿವಿಧ ಪ್ರಾಕಾರವಾಗಿ ವರ್ಗೀಕರಣ ಮಾಡಲಾಗುತ್ತದೆ. ಹಾಗೆಯೇ ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಹಲವು ಸೂಚ್ಯಂಕಗಳಿರುತ್ತವೆ. ಸೆನ್ಸೆಕ್ಸ್ ಎಂಬುದು 30 ಆಯ್ದ ಅತಿದೊಡ್ಡ ಗಾತ್ರದ ಕಂಪನಿಗಳ ಪಟ್ಟಿಯಾಗಿದೆ. ಈ 30 ಕಂಪನಿಗಳ ಷೇರುಬೆಲೆ ಏರಿಳಿತದ ಮೇಲೆ ಸೆನ್ಸೆಕ್ಸ್ ಪಾಯಿಂಟ್ಗಳಲ್ಲಿ ವ್ಯತ್ಯಯ ಆಗುತ್ತದೆ. ಲಾರ್ಜ್ ಕ್ಯಾಪ್ ಫಂಡ್ಗೆ ಸೆನ್ಸೆಕ್ಸ್ ಬೆಂಚ್ ಮಾರ್ಕ್ ಆಗಿರುತ್ತದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಾರ್ಜ್ ಕ್ಯಾಪ್ ಫಂಡ್ಗಳಿಗೆ ನಿಫ್ಟಿ50 ಸೂಚ್ಯಂಕವು ಬೆಂಚ್ ಆಗಿದೆ. ಇದೇ ರೀತಿ ವಿವಿಧ ಸೂಚ್ಯಂಕಗಳು ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಇವೆ.
ಇದನ್ನೂ ಓದಿ: ಎರಡು ಕ್ವಾರ್ಟರ್ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್
ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ವಿಭಾಗದ ಮ್ಯೂಚುವಲ್ ಫಂಡ್ಗಳ ಕಳಪೆ ಸಾಧನೆ
2023ರಲ್ಲಿ ಇಂಡೆಕ್ಸ್ ಫಂಡ್ ಅಥವಾ ಬೆಂಚ್ಮಾರ್ಕ್ಗಿಂತ ಕಳಪೆ ಸಾಧನೆ ಬಂದಿದ್ದು ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ವಿಭಾಗಗಳಲ್ಲಿ. ಎಕನಾಮಿಕ್ ಟೈಮ್ಸ್ ಡಾಟಾ ಪ್ರಕಾರ ಸ್ಮಾಲ್ ಕ್ಯಾಪ್ ವಿಭಾಗದ 24 ಮ್ಯುಚುವಲ್ ಫಂಡ್ ಪೈಕಿ 20 ಫಂಡ್ಗಳು ಬೆಂಚ್ಮಾರ್ಕ್ ಮಟ್ಟಕ್ಕಿಂತ ಕಡಿಮೆ ಸಾಧನೆ ತೋರಿವೆ. ಹಾಗೆಯೇ, 29 ಮಿಡ್ ಕ್ಯಾಪ್ ಫಂಡ್ಗಳ ಪೈಕಿ 24 ಫಂಡ್ಗಳು ವಿಫಲವಾಗಿವೆ. ಅಂದರೆ ಈ ಎರಡೂ ವಿಭಾಗದ ಮ್ಯುಚುವಲ್ ಫಂಡ್ಗಳಲ್ಲಿ ಶೇ. 83ರಷ್ಟು ಫಂಡ್ಗಳು ನಿರೀಕ್ಷಿತ ಲಾಭ ತರಲು ಸೋತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ