ಪ್ಲಾಟ್ಫಾರ್ಮ್ ಶುಲ್ಕ ಏರಿಕೆಯಲ್ಲಿ ಪೈಪೋಟಿಗಿಳಿದ ಜೊಮಾಟೊ, ಸ್ವಿಗ್ಗಿ
Zomato and Swiggy rise platform fees: ಆಗಸ್ಟ್ 14ರಂದು ಸ್ವಿಗ್ಗಿ ಪ್ಲಾಟ್ಫಾರ್ಮ್ ಫೀ ಅನ್ನು 12 ರೂನಿಂದ 14 ರೂಗೆ ಏರಿಸಿದ ಬೆನ್ನಲ್ಲೇ ಜೊಮಾಟೊ ಕೂಡ ಏರಿಕೆ ಮಾಡಿದೆ. 10 ರೂ ಇದ್ದ ಫೀ ಅನ್ನು 12 ರೂಗೆ ಏರಿಸಿದೆ ಜೊಮಾಟೊ. ಈ ಮಧ್ಯೆ ಸ್ವಿಗ್ಗಿ ಮತ್ತೊಮ್ಮೆ ದರ ಪರಿಷ್ಕರಣೆ ಮಾಡಿದ್ದು, ಕೆಲ ಪ್ರದೇಶಗಳಲ್ಲಿ ಫೀ ಅನ್ನು 15 ರೂಗೆ ಏರಿಸಿದೆ.

ನವದೆಹಲಿ, ಸೆಪ್ಟೆಂಬರ್ 3: ದೇಶದ ಎರಡು ಪ್ರಮುಖ ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಬೆಲೆ ಏರಿಕೆ ಪೈಪೋಟಿಗೆ ಬಿದ್ದಂತಿದೆ. ಜೊಮಾಟೋ (Zomato) ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು (Platform Fees) 10 ರೂನಿಂದ 12 ರೂಗೆ ಏರಿಸಿದೆ. ಇದಕ್ಕೂ ಮೊದಲು ಸ್ವಿಗ್ಗಿ ಸಂಸ್ಥೆಯು ಪ್ಲಾಟ್ಫಾರ್ಮ್ ಫೀ ಅನ್ನು 12 ರೂನಿಂದ 14 ರೂಗೆ ಏರಿಸಿತು. ಜೊಮಾಟೋದಿಂದ ದರ ಪರಿಷ್ಕರಣೆ ಆದ ಬೆನ್ನಲ್ಲೇ ಇದೀಗ ಕೆಲ ಪ್ರದೇಶಗಳಲ್ಲಿ ಪ್ಲಾಟ್ಫಾರ್ಮ್ ಫೀ ಅನ್ನು 1 ರೂ ಹೆಚ್ಚಿಸಿದೆ. ಅಂದರೆ 14 ರೂ ಇದ್ದದ್ದು 15 ರೂ ಆಗಿದೆ.
ಹಬ್ಬದ ಸಂದರ್ಭದಲ್ಲಿ ಮಾತ್ರವೇ ಸ್ಗಿಗ್ಗಿಯಲ್ಲಿ ಪ್ಲಾಟ್ಫಾರ್ಮ್ ಶುಲ್ಕವು 14 ರೂ ಅಥವಾ 15 ರೂ ಇರಬಹುದು. ಉಳಿದಂತೆ, ಬೇರೆ ಸಂದರ್ಭದಲ್ಲಿ 12 ರೂ ಶುಲ್ಕ ವಿಧಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಟ್ರಂಪ್ ಹೇಳೋದು ಸುಳ್ಳು..! ಭಾರತದಲ್ಲಿ ಹಾರ್ಲೀ ಡೇವಿಡ್ಸನ್ ಅವನತಿಗೆ ಟ್ಯಾಕ್ಸ್ ಅಲ್ಲ ಕಾರಣ; ಇಲ್ಲಿದೆ ಸತ್ಯಾಂಶ
ಸ್ವಿಗ್ಗಿ ಆಗಸ್ಟ್ 14ರಂದು ತನ್ನ ಪ್ಲಾಟ್ಫಾರ್ಮ್ ಫೀ ಅನ್ನು 12 ರೂನಿಂದ 14 ರೂಗೆ ಏರಿಸಿತ್ತು. ಅದು ಹಬ್ಬದ ಸೀಸನ್ಗೆಂದು ಅದು ಮಾಡಿದ ಏರಿಕೆ. ಈಗ ಜೊಮಾಟೊ 12 ರೂಗೆ ಶುಲ್ಕವನ್ನು ಏರಿಸಿದೆ.
ಏನಿದು ಪ್ಲಾಟ್ಫಾರ್ಮ್ ಫೀ?
ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ನಲ್ಲಿ ನೀವು ಮಾಡುವ ಪ್ರತಿಯೊಂದು ಬುಕಿಂಗ್ಗೂ ವಿಧಿಸಲಾಗುವ ನಿರ್ದಿಷ್ಟ ಶುಲ್ಕ. ಎಷ್ಟೇ ಮೊತ್ತದ ಆರ್ಡರ್ ಆದರೂ ಅದೇ ಶುಲ್ಕ ಹಾಕಲಾಗುತ್ತದೆ. 50 ರೂ ಫೂಡ್ ಆರ್ಡರ್ ಮಾಡಿದರೂ, ಅಥವಾ 2,000 ರೂ ಫೂಡ್ ಆರ್ಡರ್ ಮಾಡಿದರೂ ಪ್ಲಾಟ್ಫಾರ್ಮ್ ಶುಲ್ಕ ಒಂದೇ ಇರುತ್ತದೆ.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ಎದುರಿಸಲು ಸರ್ಕಾರದಿಂದ 4 ಸ್ಕೀಮ್ಗಳ ಪ್ಯಾಕೇಜ್ ಬಿಡುಗಡೆ ಸಾಧ್ಯತೆ
ಪ್ಲಾಟ್ಫಾರ್ಮ್ ಫೀ ಅಲ್ಲದೆ ಜಿಎಸ್ಟಿ, ಡೆಲಿವರಿ ಫೀ, ಪ್ಯಾಕೇಜಿಂಗ್ ಫೀ, ಡೆಲಿವರಿ ಪಾರ್ಟ್ನರ್ ಟಿಪ್ಸ್ ಇತ್ಯಾದಿ ಬೇರೆ ಶುಲ್ಕಗಳೂ ಇರುತ್ತವೆ. ಮಳೆ ಸಂದರ್ಭದಲ್ಲಿ ಮತ್ತು ಆರ್ಡರ್ ಬುಕಿಂಗ್ ಹೆಚ್ಚಿರುವ ಸಂದರ್ಭದಲ್ಲಿ ಸರ್ಜ್ ಪ್ರೈಸಿಂಗ್ ಅಥವಾ ಹೆಚ್ಚುವರಿ ದರ ನಿಗದಿ ಮಾಡಲಾಗುತ್ತದೆ.
ಕುತೂಹಲ ಎಂದರೆ ಜೊಮಾಟೊ ಮತ್ತು ಸ್ವಿಗ್ಗಿ ಸಂಸ್ಥೆಗಳು ತಮ್ಮ ಕೋರ್ ಬ್ಯುಸಿನೆಸ್, ಅಂದರೆ ಮುಖ್ಯ ಬ್ಯುಸಿನೆಸ್ ಅನ್ನೇ ಬದಲಾವಣೆ ಮಾಡಿಕೊಳ್ಳುತ್ತಿವೆ. ಎರಡಕ್ಕೂ ಈಗ ಕ್ವಿಕ್ ಕಾಮರ್ಸ್ ಮುಖ್ಯ ಬ್ಯುಸಿನೆಸ್ ಎನಿಸುತ್ತಿದೆ. ಸ್ವಿಗ್ಗಿಯು ಇನ್ಸ್ಟಮಾರ್ಟ್ ನಡೆಸುತ್ತಿದ್ದರೆ ಜೊಮಾಟೊದಿಂದ ಬ್ಲಿಂಕಿಟ್ ಸರ್ವಿಸ್ ಇದೆ. ಭಾರತದ ಕ್ವಿಕ್ ಕಾಮರ್ಸ್ ಕಂಪನಿಗಳಲ್ಲಿ ಬ್ಲಿಂಕಿಟ್ ನಂಬರ್ ಒನ್ ಸ್ಥಾನದಲ್ಲಿದೆ. ಜೊಮಾಟೋಗಿಂತ ಬ್ಲಿಂಕಿಟ್ ಹೆಚ್ಚು ಲಾಭದಾಯಕ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




