ಟ್ರಂಪ್ ಹೇಳೋದು ಸುಳ್ಳು..! ಭಾರತದಲ್ಲಿ ಹಾರ್ಲೀ ಡೇವಿಡ್ಸನ್ ಅವನತಿಗೆ ಟ್ಯಾಕ್ಸ್ ಅಲ್ಲ ಕಾರಣ; ಇಲ್ಲಿದೆ ಸತ್ಯಾಂಶ
Story of Harley Davidson's exit from Indian market: ಅಮೆರಿಕದ ಉತ್ಕೃಷ್ಟ ಮೋಟಾರ್ ಸೈಕಲ್ ಬ್ರ್ಯಾಂಡ್ ಆದ ಹಾರ್ಲಿ ಡೇವಿಡ್ಸನ್ ಬೈಕುಗಳು ಭಾರತದಲ್ಲಿ ಕೆಲವೇ ಸಾವಿರ ಇರಬಹುದು. ಹಾರ್ಲೀ ಡೇವಿಡ್ಸನ್ಗೆ ಭಾರತ ಶೇ. 200ರಷ್ಟು ಟ್ಯಾರಿಫ್ ಹಾಕುತ್ತದೆ ಎಂದು ಟ್ರಂಪ್ ಪದೇ ಪದೇ ಆರೋಪಿಸುತ್ತಿರುತ್ತಾರೆ. ಆದರೆ, ಹಾರ್ಲಿ ಡೇವಿಡ್ಸನ್ ಭಾರತದಲ್ಲಿ ಬ್ಯುಸಿನೆಸ್ ವೈಫಲ್ಯ ಅನುಭವಿಸಲು ಟ್ಯಾರಿಫ್ಗಿಂತ ಬೇರೆಯೇ ಕಾರಣಗಳು ಪ್ರಮುಖವಾಗಿವೆ.

ನವದೆಹಲಿ, ಸೆಪ್ಟೆಂಬರ್ 3: ಭಾರತ ವಿಧಿಸುವ ಟ್ಯಾರಿಫ್ಗಳನ್ನು (Tariffs) ಟೀಕಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಳ ಸಾಮಾನ್ಯವಾಗಿ ಬಳಸುವುದು ಹಾರ್ಲಿ ಡೇವಿಡ್ಸನ್ (Harley-Davidson) ಹೆಸರನ್ನು. ಹಾರ್ಲಿ ಡೇವಿಡ್ಸನ್ ಎಂಬುದು ಪ್ರೀಮಿಯಮ್ ಬೈಕ್ ಬ್ರ್ಯಾಂಡ್. ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ದುಬಾರಿ ಬೆಲೆಯ ಬೈಕ್ ಅದು. ಭಾರತವು ಹಾರ್ಲಿ ಡೇವಿಡ್ಸನ್ ಬೈಕ್ ಮೇಲೆ ಶೇ. 200 ರಷ್ಟು ಟ್ಯಾರಿಫ್ ಹಾಕುತ್ತದೆ. ಇದರಿಂದಾಗಿ ಭಾರತದಲ್ಲಿ ಅದಕ್ಕೆ ಬ್ಯುಸಿನೆಸ್ ಮಾಡಲಾಗುತ್ತಿಲ್ಲ ಎಂದು ಟ್ರಂಪ್ ಬಾರಿ ಬಾರಿ ಹೇಳುತ್ತಲೇ ಇರುತ್ತಾರೆ. ವಾಸ್ತವದಲ್ಲಿ, ಭಾರತದಲ್ಲಿ ಹಾರ್ಲೀ ಡೇವಿಡ್ಸನ್ ಬ್ಯುಸಿನೆಸ್ ನಿಲ್ಲಲು ಬೇರೆಯ ಅಂಶಗಳೂ ಕಾರಣವಾಗಿದ್ದವು.
ಹಾರ್ಲೀ ಡೇವಿಡ್ಸನ್ ಭಾರತದಿಂದ ನಿರ್ಗಮಿಸಲು ಏನು ಕಾರಣ?
ಅಮೆರಿಕದ ಪ್ರೀಮಿಯಮ್ ಬೈಕ್ ಬ್ರ್ಯಾಂಡ್ ಆದ ಹಾರ್ಲೀ ಡೇವಿಡ್ಸನ್ನ ದ್ವಿಚಕ್ರ ವಾಹನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಭಾರತವು ಶೇ. 50-100ರಷ್ಟು ಟ್ಯಾರಿಫ್ ಹಾಕುತ್ತಿತ್ತು. ಶೇ. 200 ಟ್ಯಾರಿಫ್ ಎಂದು ಟ್ರಂಪ್ ಹೇಳಿದ್ದು ಅರ್ಧ ಸತ್ಯ ಮಾತ್ರ. 2018ರಲ್ಲಿ ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾದಾಗ ಹಾರ್ಲಿ ಡೇವಿಡ್ಸನ್ ಮೇಲಿನ ಟ್ಯಾರಿಫ್ ಅನ್ನು ಭಾರತ ಶೇ. 100ರಿಂದ ಶೇ. 50ಕ್ಕೆ ಇಳಿಸಿತ್ತು.
ಇದನ್ನೂ ಓದಿ: ವಿಶ್ವಕ್ಕೆ ಫ್ಯಾಕ್ಟರಿಯಾಗಲು ಭಾರತಕ್ಕೆ ಅಪೂರ್ವ ಅವಕಾಶ; ಆದರೆ, ಚೀನಾ ವಿಚಾರದಲ್ಲಿ ಈ ತಪ್ಪು ಬೇಡ ಎಂದ ಜಾನ್ಸನ್
ಟ್ಯಾರಿಫ್ ತಪ್ಪಿಸಲೆಂದು ಹಾರ್ಲಿ ಡೇವಿಡ್ಸನ್ ಸಂಸ್ಥೆ ಭಾರತದಲ್ಲೇ ಬೈಕ್ ತಯಾರಿಸಲೆಂದು 2011ರಲ್ಲಿ ಹರ್ಯಾಣದಲ್ಲಿ ಫ್ಯಾಕ್ಟರಿ ಸ್ಥಾಪಿಸಿತು. ಆದರೂ ಕೂಡ ಭಾರತದ ಮಾರುಕಟ್ಟೆಯಲ್ಲಿ ಆಳವಾಗಿ ಹೆಜ್ಜೆ ಊರಲು ಅದಕ್ಕೆ ಸಾಧ್ಯವಾಗಲಿಲ್ಲ.
ಹಾರ್ಲೀ ಡೇವಿಡ್ಸನ್ ಬೈಕುಗಳ ಸರಾಸರಿ ಬೆಲೆ 5 ಲಕ್ಷ ರೂನಿಂದ 50 ಲಕ್ಷ ರೂ ಇದೆ. ಒಂದು ಬೈಕ್ಗೆ ಇಷ್ಟು ದೊಡ್ಡ ಮೊತ್ತ ಕೊಡುವ ಭಾರತೀಯರ ಸಂಖ್ಯೆ ಹೆಚ್ಚಿರಲಿಲ್ಲ. ಹೀಗಾಗಿ ಹಾರ್ಲೀ ಡೇವಿಡ್ಸನ್ ಬೈಕುಗಳು ಹೆಚ್ಚು ಸೇಲ್ ಆಗಲಿಲ್ಲ.
ಭಾರತದಲ್ಲೇ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಹೊಂದಿದ್ದರೂ ಕಡಿಮೆ ಬೆಲೆಗೆ ಬೈಕ್ ಬಿಡುಗಡೆ ಮಾಡಲು ಹಾರ್ಲಿ ಡೇವಿಡ್ಸನ್ ವಿಫಲವಾಯಿತು. 2011ರಿಂದ 10 ವರ್ಷದಲ್ಲಿ ಮಾರಾಟವಾದ ಹಾರ್ಲಿ ಡೇವಿಡ್ಸನ್ ಬೈಕ್ಗಳ ಸಂಖ್ಯೆ 30,000 ಮಾತ್ರ. ಇತರ ವಾಹನ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ನಗಣ್ಯ. ಹೀಗಾಗಿ, 2020-21ರಲ್ಲಿ ಹಾರ್ಲಿ ಡೇವಿಡ್ಸನ್ ಹೇಳದೆ ಕೇಳದೆ ಭಾರತದಲ್ಲಿ ಬಾಗಿಲು ಮುಚ್ಚಿಕೊಂಡು ನಿರ್ಗಮಿಸಿತು.
ಇದನ್ನೂ ಓದಿ: ಅಮೆರಿಕದಿಂದ ಭಾರತಕ್ಕೆ ಜಾಸ್ತಿ ಲಾಭವಾ? ಭಾರತದಿಂದ ಅಮೆರಿಕಕ್ಕೆ ಹೆಚ್ಚು ಲಾಭವಾ? ಇಲ್ಲಿದೆ ಕಣ್ಣಿಗೆ ಕಾಣದ ಸತ್ಯ
ಬೈಕ್ ಫ್ಯಾಕ್ಟರಿ ಹೊಂದಿದ್ದರೂ ಬೆಲೆ ತಗ್ಗಲಿಲ್ಲ…
ಹಾರ್ಲಿ ಡೇವಿಡ್ಸನ್ ಹರ್ಯಾಣದಲ್ಲಿ ಉತ್ಪಾದನಾ ಘಟಕ ತೆರೆದಾಗ ಕಡಿಮೆ ಬೆಲೆಗೆ ಪ್ರೀಮಿಯಮ್ ಬೈಕ್ ಸಿಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ, ಅದು ಪೂರ್ಣಪ್ರಮಾಣದ ಮ್ಯಾನುಫ್ಯಾಕ್ಚರಿಂಗ್ ಘಟಕವಾಗಲಿಲ್ಲ. ಸಾಕಷ್ಟು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಹೀಗಾಗಿ, ತಯಾರಿಕೆಯಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಹಾರ್ಲಿ ಡೇವಿಡ್ಸನ್ಗೆ ಸಾಧ್ಯವಾಗಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Wed, 3 September 25




