AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಪ್​ರಾಕೆಟ್-ಜೊಮಾಟೋ ಡೀಲ್ ಸುದ್ದಿ ನಿಜವಾ? ಸರ್ರನೆ ಏರಿದ ಷೇರುಬೆಲೆ; ಸುದ್ದಿ ತಳ್ಳಿಹಾಕಿದ ಫುಡ್ ಡೆಲಿವರಿ ಸಂಸ್ಥೆ

Zomato-Shiprocket News: ಶಿಪ್​ರಾಕೆಟ್ ಸಂಸ್ಥೆಯನ್ನು ಜೊಮಾಟೋ 2 ಬಿಲಿಯನ್ ಡಾಲರ್​​ಗೆ ಖರೀದಿಸಲು ಮುಂದಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬಿಎಸ್​ಇಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಜೊಮಾಟೋ ಸಂಸ್ಥೆ ಈ ಸುದ್ದಿಯನ್ನು ತಳ್ಳಿಹಾಕಿದ್ದು, ತಾನ್ಯಾವ ಖರೀದಿಗೂ ಮುಂದಾಗಿಲ್ಲ ಎಂದಿದೆ. ಜೊಮಾಟೋ ಸಂಸ್ಥೆಯ ಷೇರುಬೆಲೆ ಕಳೆದ 9 ತಿಂಗಳಲ್ಲಿ 3 ಪಟ್ಟು ಹೆಚ್ಚಾಗಿ, ಅದು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ.

ಶಿಪ್​ರಾಕೆಟ್-ಜೊಮಾಟೋ ಡೀಲ್ ಸುದ್ದಿ ನಿಜವಾ? ಸರ್ರನೆ ಏರಿದ ಷೇರುಬೆಲೆ; ಸುದ್ದಿ ತಳ್ಳಿಹಾಕಿದ ಫುಡ್ ಡೆಲಿವರಿ ಸಂಸ್ಥೆ
ಜೊಮಾಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2023 | 1:05 PM

ನವದೆಹಲಿ, ಡಿಸೆಂಬರ್ 22: ಕಳೆದ ಒಂದೆರಡು ವರ್ಷದಿಂದ ಉತ್ತಮವಾಗಿ ಸಾಗುತ್ತಿರುವ ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮಾಟೋ (Zomato) ಪ್ರಮುಖ ಶಿಪ್ಪಿಂಗ್ ಕಂಪನಿಯೊಂದನ್ನು ಖರೀದಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಶಿಪ್ ರಾಕೆಟ್ ಸಂಸ್ಥೆಯನ್ನು (Shiprocket) 2 ಬಿಲಿಯನ್ ಡಾಲರ್ ಮೊತ್ತಕ್ಕೆ ಜೊಮಾಟೋ ಖರೀದಿಸುತ್ತಿದೆ ಎನ್ನುವ ಸುದ್ದಿ ಇದು. ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆ ತನ್ನ ಮೂಲಗಳನ್ನು ಉಲ್ಲೇಖಿಸಿ ಬಿಡುಗಡೆ ಮಾಡಿದ ಈ ಸುದ್ದಿಯನ್ನು ಜೊಮಾಟೋ ತಳ್ಳಿಹಾಕಿದೆ. ಈ ಸುದ್ದಿಯನ್ನು ಯಾವುದೇ ಹುರುಳಿಲ್ಲ ಎಂದು ಜೊಮಾಟೋ ಸ್ಪ್ಟಪಡಿಸಿದೆ.

‘ಶಿಪ್​ರಾಕೆಟ್ ಸಂಸ್ಥೆಯನ್ನು 2 ಬಿಲಿಯನ್ ಡಾಲರ್​ಗೆ ಖರೀದಿಸಲು ಜೊಮಾಟೋ ಆಫರ್ ಮಾಡಿದೆ ಎನ್ನುವಂತಹ ಸುದ್ದಿ ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಕಟವಾಗಿರುವುದನ್ನು ನಾವು ಗಮನಿಸಿದ್ದೇವೆ. ಮಾಧ್ಯಮಗಳಲ್ಲಿ ಬರುವ ಊಹಾಪೋಹ ಸುದ್ದಿಗೆ ನಾವು ಸ್ಪಂದಿಸುವುದಿಲ್ಲ. ಆದರೆ, ಈಗ ಆಗಿರುವ ವರದಿ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಆಗುವಂಥದ್ದು. ಹೀಗಾಗಿ ಪ್ರತಿಕ್ರಿಯಿಸುತ್ತಿದ್ದೇವೆ.

‘ಶಿಪ್​ರಾಕೆಟ್ ಅನ್ನು ಜೊಮಾಟೋ ಖರೀದಿಸುತ್ತಿದೆ ಎನ್ನುವ ಸುದ್ದಿಯನ್ನು ನಾವು ತಳ್ಳಿಹಾಕುತ್ತೇವೆ. ಇಂಥ ತಪ್ಪು ಸುದ್ದಿ ಬಗ್ಗೆ ಹೂಡಿಕೆದಾರರು ಎಚ್ಚರದಿಂದ ಇರಬೇಕು. ಈ ಸಂದರ್ಭದಲ್ಲಿ ಯಾವುದೇ ಖರೀದಿಸುವ ಆಲೋಚನೆ ನಮಗಿಲ್ಲ. ನಮ್ಮ ಈಗಿರುವ ವ್ಯವಹಾರದ ಬಗ್ಗೆ ನಮ್ಮ ಗಮನ ಇರಲಿದೆ,’ ಎಂದು ಬಿಎಸ್​ಇಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಜೊಮಾಟೋ ಹೇಳಿದೆ.

ಇದನ್ನೂ ಓದಿ: Commercial LPG cylinder price: ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 39 ರೂ ಇಳಿಕೆ

ಶಿಪ್​ರಾಕೆಟ್ ಎಂಬುದು ಶಿಪ್ಪಿಂಗ್ ಕಂಪನಿ. ಸರಕುಗಳನ್ನು ಸಾಗಿಸುವ ಸಂಸ್ಥೆ. ಶಿಪ್​ರಾಕೆಟ್ ಅನ್ನು ಖರೀದಿ ಮಾಡಿದರೆ ಜೊಮಾಟೋದ ಬಿಸಿನೆಸ್ ವಿಸ್ತರಣೆ ಆಗುವ ಸಾಧ್ಯತೆ ಇದೆ. ಆನ್ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಜೊಮಾಟೋ ಭದ್ರ ನೆಲೆ ಕಂಡುಕೊಳ್ಳಲು ಸಾಧ್ಯ ಇದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿದ್ದವು. 2021ರಲ್ಲಿ ಇದೇ ಶಿಪ್​ರಾಕೆಟ್ ಸಂಸ್ಥೆಯಲ್ಲಿ ಜೊಮಾಟೋ ಹೂಡಿಕೆ ಮಾಡಿತ್ತು. ಹೀಗಾಗಿ, ಶಿಪ್​ರಾಕೆಟ್ ಅನ್ನು ಜೊಮಾಟೋ ಖರೀದಿಸಬಹುದು ಎನ್ನುವ ಸುದ್ದಿ ನಂಬಲರ್ಹ ಎನಿಸಿತ್ತು. ಇದೀಗ ಈ ಸುದ್ದಿಯನ್ನು ಜೊಮಾಟೋ ಅಧಿಕೃತವಾಗಿ ನಿರಾಕರಿಸಿದೆ.

ಜೊಮಾಟೋ ಷೇರುಬೆಲೆ ಏರಿಕೆ

ಶಿಪ್​ರಾಕೆಟ್ ಸಂಸ್ಥೆಯನ್ನು ಖರೀದಿಸುವ ಸುದ್ದಿ ಬಂದ ಬಳಿಕ ಇಂದು ಷೇರುಮಾರುಕಟ್ಟೆಯಲ್ಲಿ ಜೊಮಾಟೋದ ಷೇರುಗಳಿಗೆ ಬೇಡಿಕೆ ಬಂದಿತ್ತು. 127 ರೂ ಇದ್ದ ಅದರ ಷೇರುಬೆಲೆ ಒಂದೆರಡು ಗಂಟೆಯಲ್ಲಿ 131 ರುಪಾಯಿಗೆ ಏರಿತ್ತು. ಜೊಮಾಟೋದಿಂದ ಸ್ಪಷ್ಟನೆ ಬಂದ ಬಳಿಕ ಷೇರು ಸಹಜ ಬೆಲೆಗೆ ಮರಳಿದೆ.

ಇದನ್ನೂ ಓದಿ: ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು

2021ರಲ್ಲಿ ಷೇರುಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಜೊಮಾಟೋ ಇದೇ ಕಳೆದ ಒಂಬತ್ತು ತಿಂಗಳಿನಿಂದ ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. 44 ರೂ ಇದ್ದ ಅದರ ಷೇರುಬೆಲೆ ಈಗ 127 ರೂಗೆ ಹೋಗಿದೆ. ಅಂದರೆ, 9 ತಿಂಗಳಲ್ಲಿ ಷೇರುಬೆಲೆ ಮೂರು ಪಟ್ಟು ಹೆಚ್ಚಾಗಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್