Zomato IPO: ಝೊಮ್ಯಾಟೋ ಕಂಪೆನಿ ಐಪಿಒ ಜುಲೈ 14ರಿಂದ ಶುರು; ದರ, ಲಿಸ್ಟಿಂಗ್ ಮತ್ತಿತರ ವಿವರ ಇಲ್ಲಿದೆ

| Updated By: Digi Tech Desk

Updated on: Jul 14, 2021 | 4:36 PM

ಗುರ್​ಗ್ರಾಮ್ ಮೂಲದ ಝೊಮ್ಯಾಟೋ ಕಂಪೆನಿ ಝೊಮ್ಯಾಟೋ (Zomato)ದ 9375 ಕೋಟಿ ರೂಪಾಯಿಯ ಐಪಿಒ ಜುಲೈ 14ರಂದು ಆರಂಭವಾಗಲಿದೆ. ಝೊಮ್ಯಾಟೋ ಐಪಿಒಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ವಿವರಗಳಿವೆ.

Zomato IPO: ಝೊಮ್ಯಾಟೋ ಕಂಪೆನಿ ಐಪಿಒ ಜುಲೈ 14ರಿಂದ ಶುರು; ದರ, ಲಿಸ್ಟಿಂಗ್ ಮತ್ತಿತರ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಝೊಮ್ಯಾಟೋ (Zomato) ಕಂಪೆನಿಯ 9375 ಕೋಟಿ ರೂಪಾಯಿಯ ಐಪಿಒ ಜುಲೈ 14ರಂದು ಆರಂಭವಾಗಲಿದೆ. 2020ರ ಮಾರ್ಚ್​ನಲ್ಲಿ ಎಸ್​ಬಿಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವೀಸಸ್ 10,341 ಕೋಟಿ ರೂಪಾಯಿಯನ್ನು ಕೊವಿಡ್- 19 ಬಿಕ್ಕಟ್ಟಿಗೆ ಮುಂಚೆ ಸಂಗ್ರಹ ಮಾಡಿದ್ದು, ಐಪಿಒ ಮೂಲಕ ಸಂಗ್ರಹ ಮಾಡಿದ ಮೊತ್ತದಲ್ಲಿ ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನ ಈಗ ಝೊಮ್ಯಾಟೋದ್ದಾಗಿದೆ. ಗುರ್​ಗ್ರಾಮ್ ಮೂಲದ ಝೊಮ್ಯಾಟೋ ಕಂಪೆನಿ ಐಪಿಒ ಬಿಡುಗಡೆ ಮಾಡುತ್ತಿರುವ ಮೊದಲ ಸ್ಟಾರ್ಟ್​ ಅಪ್ ಆಗಿದೆ. ಜತೆಗೆ ಭಾರತೀಯ ಆನ್​ಲೈನ್​ ಫುಡ್​ ಅಗ್ರಿಗೇಟರ್ಸ್​ ಆಗಿ ಐಪಿಒ ಬಿಡುಗಡೆ ಮಾಡುತ್ತಿರುವ ಮೊದಲ ಕಂಪೆನಿ ಕೂಡ ಝೊಮ್ಯಾಟೋ. ಈ ಐಪಿಒ ಮೂಲಕ ಝೊಮ್ಯಾಟೋದ ಮೌಲ್ಯಮಾಪನವು 900 ಕೋಟಿ ಅಮೆರಿಕನ್ ಆಗುವಂತೆ ಮಾಡುತ್ತದೆ. ಝೊಮ್ಯಾಟೋ ಐಪಿಒಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ವಿವರಗಳಿವೆ.

* ಝೊಮ್ಯಾಟೋ ಐಪಿಒ ಸಬ್​ಸ್ಕ್ರಿಪ್ಷನ್ ಯಾವಾಗಿನಿಂದ ಶುರುವಾಗುತ್ತದೆ?
ಐಪಿಒ ಸಬ್​ಸ್ಕ್ರಿಪ್ಷನ್ ಜುಲೈ 14 (ಬುಧವಾರ) ಆರಂಭವಾಗುತ್ತದೆ.

* ಐಪಿಒ ಮುಕ್ತಾಯ ದಿನಾಂಕ ಯಾವಾಗ?
ಐಪಿಒ ಸಬ್​ಸ್ಕ್ರಿಪ್ಷನ್ ಜುಲೈ 16 (ಶುಕ್ರವಾರ) ಕೊನೆಯಾಗುತ್ತದೆ.

* ಈ ಷೇರು ವಿತರಣೆಯ ಉದ್ದೇಶ ಏನು?
ಸಾಮಾನ್ಯ ಕಾರ್ಯ ನಿರ್ವಹಣೆ ಉದ್ದೇಶಗಳು ಹಾಗೂ ಬೆಳವಣಿಗೆಯ ಆರ್ಗಾನಿಕ್ ಮತ್ತು ಇನ್ ಆರ್ಗಾನಿಕ್ ಅಭಿಯಾನಗಳಿಗೆ (6750 ಕೋಟಿ ರೂಪಾಯಿ) ಹಣವನ್ನು ಬಳಸಲಾಗುವುದು.

* ವಿತರಣೆಯ ಗಾತ್ರ ಏನು?
ಹೊಸದಾಗಿ ಷೇರು ವಿತರಣೆ ಮಾಡುವ ಮೂಲಕ 9000 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಸದ್ಯದ ಷೇರುದಾರರಿಂದ 375 ಕೋಟಿ ರೂಪಾಯಿ ತನಕ ಆಫರ್ ಫಾರ್ ಸೇಲ್ (ಒಎಫ್ಎಸ್) ಆಗಲಿದೆ.

* ಐಪಿಒ ದರದ ಬ್ಯಾಂಡ್ ಏನು?
ಐಪಿಒ ದರ ಬ್ಯಾಂಡ್ 72ರಿಂದ 76 ರೂಪಾಯಿ ನಿಗದಿ ಮಾಡಲಾಗಿದೆ.

* ಲಾಟ್ ಗಾತ್ರ ಏನು?
ಹೂಡಿಕೆದಾರರು ಕನಿಷ್ಠ 195 ಷೇರುಗಳಿಗಾಗಿ (1 ಲಾಟ್) ಅರ್ಜಿ ಹಾಕಬೇಕು. ಅದಕ್ಕಿಂತ ಹೆಚ್ಚಿನ ಷೇರುಗಳಿಗಾಗಿ 195ರ ಗುಣಕದಲ್ಲಿ (195+195 ಹೀಗೆ) ಅರ್ಜಿ ಹಾಕಿಕೊಳ್ಳಬೇಕು. ರೀಟೇಲ್ ಹೂಡಿಕೆದಾರರು ಗರಿಷ್ಠ 13 ಲಾಟ್​ಗೆ ಅಪ್ಲೈ ಮಾಡಬಹುದು.

* ರೀಟೇಲ್ ಹೂಡಿಕೆದಾರರಿಗೆ ಎಷ್ಟನ್ನು ಮೀಸಲಿರಿಸಲಾಗಿದೆ?
ನಿವ್ವಳ ಆಫರ್​ನಲ್ಲಿ ಶೇ 10ರಷ್ಟು ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದೆ. ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಖರೀದಿದಾರರಿಗೆ (QIB) ಶೇ 75ರಷ್ಟು ಮತ್ತು ನಾನ್- ಇನ್​ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್​ಗೆ ಶೇ 15ರಷ್ಟು ಮೀಸಲಾಗಿದೆ.

* ಉದ್ಯೋಗಿಗಳಿಗೆ ಎಷ್ಟು ಮೀಸಲಾಗಿದೆ?
ಅರ್ಹ ಸಿಬ್ಬಂದಿಗೆ 65 ಲಕ್ಷ ಈಕ್ವಿಟಿ ಷೇರುಗಳನ್ನು ಮೀಸಲಿಡಲಾಗಿದೆ.

* ವಿತರಣೆ ಯಾವಾಗ ಅಂತಿಮಗೊಳ್ಳುತ್ತದೆ?
ಜುಲೈ 22ನೇ ತಾರೀಕಿಗೆ ವಿತರಣೆ ಅಂತಿಮವಾಗುತ್ತದೆ. ಜುಲೈ 23ಕ್ಕೆ ರೀಫಂಡ್ ಆರಂಭವಾಗುತ್ತದೆ. ಜುಲೈ 26ನೇ ತಾರೀಕಿಗೆ ಡಿಮ್ಯಾಟ್ ಖಾತೆಗೆ ಷೇರುಗಳು ಜಮೆ ಆಗುತ್ತವೆ.

* ಝೊಮ್ಯಾಟೋ ಷೇರು ಲಿಸ್ಟಿಂಗ್ ಯಾವಾಗ?
ಜುಲೈ 27ನೇ ತಾರೀಕಿನಂದು ಝೊಮ್ಯಾಟೋ ಕಂಪೆನಿ ಷೇರು ಲಿಸ್ಟಿಂಗ್ ಆಗುತ್ತದೆ.

ಇದನ್ನೂ ಓದಿ: Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ

(India’s food aggregator Zomato’s IPO subscription starts from July 14, 2021. Here is the FAQ’s regarding issue)

Published On - 4:41 pm, Mon, 12 July 21