ದೇಶೀ ಕಂಪೆನಿಗಳ ಐಪಿಒ ಹೂಡಿಕೆ ಬಗ್ಗೆ ಉತ್ಸಾಹ ಚಿಮ್ಮಿಸಿದ ಝೊಮ್ಯಾಟೋ ಲಿಸ್ಟಿಂಗ್​

ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಯಶಸ್ವಿ ಆಗುವುದು ಅಷ್ಟು ಸಲೀಸಾದ ಸಂಗತಿ ಅಲ್ಲ. ಆದರೆ ಇತ್ತೀಚೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಐಪಿಒಗಳ ಭರಾಟೆ ಜೋರಾಗಿದೆ. ಈಗಿನ ತಾಜಾ ಉದಾಹರಣೆ ಅಂತ ತೆಗೆದುಕೊಳ್ಳುವುದಾದರೆ ಝೊಮ್ಯಾಟೋದ (Zomato) ಯಶಸ್ಸು. 9375 ಕೋಟಿ ರೂಪಾಯಿ ಮೊತ್ತದ ಐಪಿಒ ಅಭೂತಪೂರ್ವವಾದ ಯಶಸ್ಸು ಗಳಿಸಿದೆ. ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲಿಸಿಡಬೇಕಾದ ಸನ್ನಿವೇಶ ಇದು. ಯಾಕೆ ಝೊಮ್ಯಾಟೋ ಐಪಿಒ ಅತ್ಯುತ್ತಮ ಉದಾಹರಣೆಯಾಗಿ ಕಣ್ಣೆದುರಿಗೆ ನಿಲ್ಲುತ್ತದೆ ಅಂದರೆ, ಆ ಕಂಪೆನಿಯಿಂದ ವಿತರಣೆಗೆ ಮುಂದಾದ ಗಾತ್ರಕ್ಕಿಂತ 38 […]

ದೇಶೀ ಕಂಪೆನಿಗಳ ಐಪಿಒ ಹೂಡಿಕೆ ಬಗ್ಗೆ ಉತ್ಸಾಹ ಚಿಮ್ಮಿಸಿದ ಝೊಮ್ಯಾಟೋ ಲಿಸ್ಟಿಂಗ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 28, 2021 | 4:01 PM

ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಯಶಸ್ವಿ ಆಗುವುದು ಅಷ್ಟು ಸಲೀಸಾದ ಸಂಗತಿ ಅಲ್ಲ. ಆದರೆ ಇತ್ತೀಚೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಐಪಿಒಗಳ ಭರಾಟೆ ಜೋರಾಗಿದೆ. ಈಗಿನ ತಾಜಾ ಉದಾಹರಣೆ ಅಂತ ತೆಗೆದುಕೊಳ್ಳುವುದಾದರೆ ಝೊಮ್ಯಾಟೋದ (Zomato) ಯಶಸ್ಸು. 9375 ಕೋಟಿ ರೂಪಾಯಿ ಮೊತ್ತದ ಐಪಿಒ ಅಭೂತಪೂರ್ವವಾದ ಯಶಸ್ಸು ಗಳಿಸಿದೆ. ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲಿಸಿಡಬೇಕಾದ ಸನ್ನಿವೇಶ ಇದು. ಯಾಕೆ ಝೊಮ್ಯಾಟೋ ಐಪಿಒ ಅತ್ಯುತ್ತಮ ಉದಾಹರಣೆಯಾಗಿ ಕಣ್ಣೆದುರಿಗೆ ನಿಲ್ಲುತ್ತದೆ ಅಂದರೆ, ಆ ಕಂಪೆನಿಯಿಂದ ವಿತರಣೆಗೆ ಮುಂದಾದ ಗಾತ್ರಕ್ಕಿಂತ 38 ಪಟ್ಟು ಹೆಚ್ಚು ಬೇಡಿಕೆ ಕಂಡುಬಂದಿತು. ಅದು ಅಷ್ಟಕ್ಕೇ ನಿಲ್ಲದೆ ವಿತರಣೆ ಮಾಡಿದ ದರಕ್ಕಿಂತ ಶೇ 53ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಕೂಡ ಆಯಿತು. ಈ ಅಂಶಗಳು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಇದು ಕೇವಲ ಒಂದು ಕಂಪೆನಿಯ ಬಂಡವಾಳ ಸಂಗ್ರಹದ ಕಥೆಯಲ್ಲ. ಭಾರತದ ಬಂಡವಾಳ ಮಾರುಕಟ್ಟೆಯ ಅಭಿವೃದ್ಧಿಯನ್ನು ಬಿಂಬಿಸುವಂಥ ಉದಾಹರಣೆ. ಜಿಆರ್​ ಇನ್​ಫ್ರಾ ಪ್ರಾಜೆಕ್ಟ್ಸ್​ ಕೂಡ ಐಪಿಒ ಬಿಡುಗಡೆ ಮಾಡಿ, ಲಿಸ್ಟಿಂಗ್​ ದಿನವೇ ಶೇ 100ಕ್ಕೂ ಹೆಚ್ಚು ಮೇಲೇರಿತು. ಇಂಥ ಬೆಳವಣಿಗೆಗಳು ಭಾರತದಲ್ಲಿ ಐಪಿಒಗಳ ಮೇಲೆ ರೀಟೇಲ್ ಹೂಡಿಕೆದಾರರಿಗೆ ಆಸಕ್ತಿ ಮತ್ತು ಕುತೂಹಲ ಎರಡನ್ನೂ ಹೆಚ್ಚಿಸುತ್ತದೆ. ಇನ್ನೇನು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ತಲೆಮಾರಿನ ಕಂಪೆನಿಗಳ ಷೇರುಗಳ ಐಪಿಒ ಬರಲಿವೆ.

ಅದರಲ್ಲಿ ಬಹಳ ಮುಖ್ಯವಾಗಿ ಗಮನಿಸ ಬೇಕಾದದ್ದು ಪೇಟಿಎಂ ಐಪಿಒ ಬಗ್ಗೆ. 16,000 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಐಪಿಒ ಮೂಲಕ ಸಂಗ್ರಹಿಸುವ ಗುರಿ ಇರಿಸಿಕೊಂಡಿರುವ ಆ ಕಂಪೆನಿಯು ಭಾರತದ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯಲಿದೆ. ಅಂಥ ಪ್ರಯತ್ನಗಳಿಗೆ ಈಗ ಝೊಮ್ಯಾಟೋದ ಯಶಸ್ಸು ಹೊಸದಾಗಿ ಹುರುಪು ತುಂಬಲಿದೆ.

ಇದನ್ನೂ ಓದಿ: Zomato Listing: ಝೊಮ್ಯಾಟೋ ಲಿಸ್ಟಿಂಗ್ ನಂತರ ಮೂರೇ ಟ್ರೇಡಿಂಗ್ ಸೆಷನ್​ನಲ್ಲಿ ಶೇ 95ರಷ್ಟು ಏರಿಕೆ

(Zomato Listing Increased Faith Of Investors In Domestic Listings)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು