ಸರ್ಕಾರಿ ಯೋಜನೆಯೊಂದಕ್ಕೆ ಹೆಸರು, ಟ್ಯಾಗ್ಲೈನ್, ಲೋಗೋ ರೂಪಿಸಿ; 15 ಲಕ್ಷ ರೂಪಾಯಿ ಗಳಿಸಿ
ಈ ವರ್ಷ ಬಜೆಟ್ (Union Budget 2021) ಮಂಡಿಸುವ ವೇಳೆ ಕೇಂದ್ರ ಸರ್ಕಾರದಿಂದ (Central Government) ಡೆವಲಪ್ಮೆಂಟ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ (DFI) ಸೃಷ್ಟಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಎಕ್ಸ್ಕ್ಲೂಸಿವ್ ಆಗಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ಉದ್ದೇಶಗಳಿಗೆ ಇದನ್ನು ರೂಪಿಸಲಾಗುವುದು. ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈಲ್ (NIP) ಅಡಿಯಲ್ಲಿ 2024- 25ರೊಳಗೆ 7000ದಷ್ಟು ಮೂಲಸೌಕರ್ಯ ಯೋಜನೆಗಳಿಗೆ 111 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದೆ. “ಜಾರಿ ಮತ್ತು ಈ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸರಿಯಾದ […]
ಈ ವರ್ಷ ಬಜೆಟ್ (Union Budget 2021) ಮಂಡಿಸುವ ವೇಳೆ ಕೇಂದ್ರ ಸರ್ಕಾರದಿಂದ (Central Government) ಡೆವಲಪ್ಮೆಂಟ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ (DFI) ಸೃಷ್ಟಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಎಕ್ಸ್ಕ್ಲೂಸಿವ್ ಆಗಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ಉದ್ದೇಶಗಳಿಗೆ ಇದನ್ನು ರೂಪಿಸಲಾಗುವುದು. ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈಲ್ (NIP) ಅಡಿಯಲ್ಲಿ 2024- 25ರೊಳಗೆ 7000ದಷ್ಟು ಮೂಲಸೌಕರ್ಯ ಯೋಜನೆಗಳಿಗೆ 111 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದೆ. “ಜಾರಿ ಮತ್ತು ಈ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸರಿಯಾದ ಸಮಯಕ್ಕೆ ಮತ್ತು ದೊಡ್ಡ ಮಟ್ಟದಲ್ಲಿ ಹಣಕಾಸಿನ ಅಗತ್ಯ ಇದೆ,” ಎಂದು mygov.in ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಡಿಎಫ್ಐನಿಂದ ಹಣಕಾಸು ಸಂಗ್ರಹ ಮಾಡಲಾಗುತ್ತದೆ. ಇತರ ಸಾಲ ಪಡೆಯುವ ಸಂಸ್ಥೆಗಳ ಬಳಿ ಎದುರು ನೋಡುವ ಅಗತ್ಯ ಇರುವುದಿಲ್ಲ.
ಇದು ಎಲ್ಲವನ್ನೂ ತನ್ನಷ್ಟಕ್ಕೇ ಮಾಡುವುದಿಲ್ಲ. ಆದ್ದರಿಂದ ಸಾಲ ಒದಗಿಸುವುದಷ್ಟೇ ಅಲ್ಲ, ಸಾಲದ ಜತೆಗೆ ಸೇವೆಯನ್ನು ಸಹ ಒದಗಿಸುತ್ತದೆ. ಮೂಲಸೌಕರ್ಯ ವಲಯದಲ್ಲಿ ಸಹಯೋಗ ಮತ್ತು ಸಹಭಾಗಿತ್ವಕ್ಕೆ ಹೊಸ ವಾತಾವರಣ ಸೃಷ್ಟಿಯಾಗುತ್ತದೆ. ಅಪಾಯದ ನಿವಾರಣೆ, ಉತ್ಪನ್ನಗಳ ಆವಿಷ್ಕಾರ, ಹಸಿರು ಸಂಪರ್ಕ ಮತ್ತು ನೈತಿಕ ಹಣಕಾಸು ಪೂರೈಕೆ ಮತ್ತು ಅದಭುತವಾದ ಬಾಂಡ್ ಮಾರ್ಕೆಟ್ ಅನ್ನು ಸೃಷ್ಟಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ.
ಕ್ರಿಯಾತ್ಮಕ ಆಲೋಚನೆ ಇರುವವರಿಗಾಗಿ ವಿತ್ತ ಸಚಿವಾಲಯದ ಹಣಕಾಸು ಸೇವೆ ಇಲಾಖೆಯಿಂದ ನಾಗರಿಕರಿಗೆ ಒಂದು ಅವಕಾಶ ನೀಡಿದೆ. ಅದೇನೆಂದರೆ, ಈ ಯೋಜನೆಗೆ ಒಂದು ಹೆಸರನ್ನು ಸೂಚಿಸಬೇಕು. ಜತೆಗೆ ಟ್ಯಾಗ್ಲೈನ್ ಮತ್ತು ಲೋಗೋ ಮಾಡಿಕೊಡಬೇಕು. ಈ ಮೇಲ್ಕಂಡ ತಿಳಿಸಿದ ಚಟುವಟಿಕೆಗಳನ್ನು ತಿಳಿಸುವಂತೆ ರೂಪಿಸಬೇಕು. ಡೆವಲಪ್ಮೆಂಟ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ನ ಉದ್ದೇಶವನ್ನು ಪ್ರತಿಬಿಂಬಿಸುವಂತೆ ಹೆಸರು, ಟ್ಯಾಗ್ಲೈನ್ ಮತ್ತು ಲೋಗೋ ಇರಬೇಕು. ಸುಲಭಕ್ಕೆ ಉಚ್ಚರಿಸುವಂಥ ಹೆಸರಾಗಿದ್ದು, ಥಟ್ಟನೆ ನೆನಪಾಗಬೇಕು. ಕಣ್ಸೆಳೆಯುವಂತಿರಬೇಕು. ಇದೊಂದು ಸ್ಪರ್ಧೆ ಆಗಿದ್ದು, 2021ರ ಆಗಸ್ಟ್ 15ನೇ ತಾರೀಕಿನ ತನಕ ಸಲ್ಲಿಸಬಹುದು. ಎಷ್ಟು ಕ್ರಿಯೇಟಿವ್ ಆಗಿ, ಅಂದುಕೊಂಡಂಥ ಉದ್ದೇಶಕ್ಕೆ ಸರಿಹೊಂದುವಂತಿದೆ, ವಿಶಿಷ್ಟವಾಗಿದೆ ಎಂಬಿತ್ಯಾದಿ ಅಂಶಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
ಬಹುಮಾನದ ವಿವರ ಇಂತಿದೆ: ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮೂರು ರೀತಿ ನಗದು ಬಹುಮಾನ ಇದೆ. ಅಂದರೆ, ಹೆಸರು, ಟ್ಯಾಗ್ಲೈನ್ ಮತ್ತು ಲೋಗೋ ಹೀಗೆ ಪ್ರತಿ ವಿಭಾಗಕ್ಕೂ ಇದೆ.
ಹೆಸರು ವಿಭಾಗಕ್ಕೆ: ಪ್ರಥಮ- 5 ಲಕ್ಷ ರೂ. ದ್ವಿತೀಯ- 3 ಲಕ್ಷ ರೂ. ತೃತೀಯ- 2 ಲಕ್ಷ ರೂ.
ಟ್ಯಾಗ್ಲೈನ್ ಪ್ರಥಮ- 5 ಲಕ್ಷ ರೂ. ದ್ವಿತೀಯ- 3 ಲಕ್ಷ ರೂ. ತೃತೀಯ- 2 ಲಕ್ಷ ರೂ.
ಲೋಗೋ ಪ್ರಥಮ- 5 ಲಕ್ಷ ರೂ. ದ್ವಿತೀಯ- 3 ಲಕ್ಷ ರೂ. ತೃತೀಯ- 2 ಲಕ್ಷ ರೂ.
ಇದನ್ನೂ ಓದಿ: ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಿಜೋರಾಂ ಕ್ರೀಡಾ ಸಚಿವ !
(Entry Invited To Suggest Name Tagline Logo For Central Government Scheme You Can Win Rs 15 Lakhs)