ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಿಜೋರಾಂ ಕ್ರೀಡಾ ಸಚಿವ !

ಮಿಜೋರಾಂ ಪ್ರತಿ ಚದರ ಮೀಟರ್​ಗೆ 52 ಜನರಂತೆ ಜನಸಂಖ್ಯಾ ಸಾಂದ್ರತೆ ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ (380 ಇರಬೇಕು)ಗಿಂತ ತುಂಬ ಕಡಿಮೆ. ಮಿಜೋರಾಂನಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಹಲವು ದಿನಗಳಿಂದಲೂ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ರಾಬರ್ಟ್ ತಿಳಿಸಿದ್ದಾರೆ.

ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಿಜೋರಾಂ ಕ್ರೀಡಾ ಸಚಿವ !
ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ
Follow us
TV9 Web
| Updated By: Lakshmi Hegde

Updated on: Jun 22, 2021 | 5:48 PM

ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳು ನಿಧಾನವಾಗಿ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸುತ್ತಿರುವ ಬೆನ್ನಲ್ಲೇ ಮಿಜೋರಾಂ ಇದರ ವಿರುದ್ಧವಾಗಿ ಹೆಜ್ಜೆ ಇಡುತ್ತಿದೆ. ಅತ್ಯಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ 1 ಲಕ್ಷ ರೂ.ಬಹುಮಾನ ಕೊಡುವುದಾಗಿ ಮಿಜೋರಾಂ ಸಚಿವರೊಬ್ಬರು ಘೋಷಣೆ ಮಾಡಿದ್ದಾರೆ. ಹಾಗಂತ ಇದು ಸದ್ಯಕ್ಕೇನೂ ಇಡೀ ರಾಜ್ಯಕ್ಕೆ ಅನ್ವಯ ಆಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರ ಅನ್ವಯಿಸಿದ್ದಾರೆ.

ಅಪ್ಪನ ದಿನಾಚರಣೆ ಸಂದರ್ಭದಲ್ಲಿ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಘೋಷಣೆ ಮಾಡಿದ್ದಾರೆ. ಇವರು ಐಜಾಲ್​ ಪೂರ್ವ-2 ಕ್ಷೇತ್ರದ ಶಾಸಕರಾಗಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ತುಂಬು ಕುಟುಂಬವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಘೋಷಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಹಾಗೇ, 1 ಲಕ್ಷ ರೂ.ಬಹುಮಾನ ಪಡೆಯಲು ನಿರ್ದಿಷ್ಟವಾಗಿ ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬುದನ್ನೇನೂ ಅವರು ಸ್ಪಷ್ಟಪಡಿಸಲಿಲ್ಲ.

ಮಿಜೋರಾಂ ಪ್ರತಿ ಚದರ ಮೀಟರ್​ಗೆ 52 ಜನರಂತೆ ಜನಸಂಖ್ಯಾ ಸಾಂದ್ರತೆ ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ (380 ಇರಬೇಕು)ಗಿಂತ ತುಂಬ ಕಡಿಮೆ. ಮಿಜೋರಾಂನಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಹಲವು ದಿನಗಳಿಂದಲೂ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ರಾಬರ್ಟ್ ತಿಳಿಸಿದ್ದಾರೆ. ಹಾಗೇ ಬಹುಮಾನವನ್ನು ತನ್ನ ಮಗನ ಒಡೆತನದ ಈಶಾನ್ಯ ಕನ್ಸಲ್ಟೆನ್ಸಿ ಸರ್ವೀಸ್​ ಪ್ರಾಯೋಜಿಸಲಿದೆ ಎಂದೂ ಹೇಳಿದ್ದಾರೆ. ಇನ್ನೊಂದೆಡೆ ಅಸ್ಸಾಂ, ಉತ್ತರ ಪ್ರದೇಶದಂಥ ಕೆಲವು ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಎರಡು ಮಕ್ಕಳ ನೀತಿಯನ್ನು ಅಳವಡಿಸುತ್ತಿವೆ. ಇನ್ನು ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಕಡಿತ ಮಾಡಲಾಗುವುದು ಎಂಬಂಥ ಕಾನೂನನ್ನು ತರುತ್ತಿವೆ.

ಇದನ್ನೂ ಓದಿ: ಸ್ವದೇಶಿ ಕೊವ್ಯಾಕ್ಸಿನ್ ಲಸಿಕೆ ಪ್ರಭಾವ ಇಳಿಕೆಯಾಗಿದೆ: ಡಿಸಿಜಿಐ ಅಂತಿಮ ಡಾಟಾ ಏನು ಹೇಳುತ್ತದೆ?