
ನವದೆಹಲಿ, ಮಾರ್ಚ್ 20: ಜೊಮಾಟೋ ಆಫರ್ ಮಾಡಿರುವ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ಗೆ (Zomato Pure Veg services) ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಈ ಸೇವೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ (Deepinder Goyal) ನಿನ್ನೆ ಮಂಗಳವಾರ ರಾತ್ರಿ ಹೇಳಿದ್ದಾರೆ. ದೀಪಿಂದರ್ ಗೋಯಲ್ ನಿನ್ನೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು. ಜೊಮಾಟೊದ ಈ ಸೇವೆಯು ಜಾತೀಯತೆಯನ್ನು (castiesm) ಸೃಷ್ಟಿಸುತ್ತದೆ ಎಂಬುದು ಹೆಚ್ಚಿನ ಆಕ್ಷೇಪ. ಹೀಗಾಗಿ, ಜೊಮಾಟೊ ಈ ಎರಡು ಸೇವೆಗಳನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದೆ.
ಪರಿಪೂರ್ಣ ಸಸ್ಯಾಹಾರಿಗಳಿಗಾಗಿ ಜೊಮಾಟೊ ಈ ಎರಡು ಸೇವೆ ಆರಂಭಿಸಿತ್ತು. ಪ್ಯೂರ್ ವೆಜ್ ಮೋಡ್ನಲ್ಲಿ ಬುಕ್ ಮಾಡಲಾಗುವ ಆಹಾರವನ್ನು ವೆಜ್ ಹೋಟೆಲ್ಗಳಿಂದ ಮಾತ್ರವೇ ಪಿಕಪ್ ಮಾಡಿ, ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತದೆ.
ಇದನ್ನೂ ಓದಿ: ಸಣ್ಣ ಜಗಳಕ್ಕೆ ವಿಚ್ಛೇದನ ಪಡೆದು, 3ವರ್ಷಗಳ ಬಳಿಕ ಮಾಜಿ ಪತಿಯೊಂದಿಗೆ ಮರು ಮದುವೆ
ಪ್ಯೂರ್ ವೆಜ್ ಫ್ಲೀಟ್ನಲ್ಲಿ, ಸಸ್ಯಾಹಾರದ ಡೆಲಿವರಿಗೆ ಪ್ರತ್ಯೇಕ ತಂಡವನ್ನು ಇಡಲಾಗುತ್ತದೆ. ಮಾಮೂಲಿಯ ಜೊಮಾಟೋ ಡೆಲಿವರಿ ಬಾಯ್ಸ್ ಕೆಂಪು ಸಮವಸ್ತ್ರ ಧರಿಸಿದರೆ, ಪ್ಯೂರ್ ವೆಜ್ ಫ್ಲೀಟ್ನ ತಂಡದವರ ಯೂನಿಫಾರ್ಮ್ ಹಸಿರು ಬಣ್ಣದ್ದಾಗಿರುತ್ತದೆ. ಅಲ್ಲದೇ ಈ ತಂಡ ಕೇವಲ ಪ್ಯೂರ್ ವೆಜ್ ಆಹಾರವನ್ನು ಮಾತ್ರ ಡೆಲಿವರಿ ಮಾಡುತ್ತದೆ.
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ನೀಡಿರುವ ಸ್ಪಷ್ಟನೆ ಪ್ರಕಾರ, ಆಹಾರ ಡೆಲಿವರಿಗೆ ಹೋಗುವಾಗ ಪ್ಯಾಕ್ನಿಂದ ಆಹಾರ ಚೆಲ್ಲುವ ಸಾಧ್ಯತೆ ಇರುತ್ತದೆ. ಒಂದೇ ಡೆಲವರಿ ವೇಳೆ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂ ಇದ್ದರೆ ಒಂದರ ಮೇಲೊಂದು ಚೆಲ್ಲುವ ಸಾಧ್ಯತೆ ಇರುತ್ತದೆ. ಸಂಪೂರ್ಣ ಸಸ್ಯಾಹಾರಿಗಳಾದವರಿಗೆ ಇದರಿಂದ ಮುಜುಗರ ಆಗಬಹುದು. ಈ ಬಗ್ಗೆ ಬಹಳಷ್ಟು ಜನರ ಸಲಹೆ ಮೇರೆಗೆ ಪ್ಯೂರ್ ವೆಜ್ ಫ್ಲೀಟ್ ಆರಂಭಿಸಿದ್ದಾಗಿ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ನಲ್ಲಿ ಎಫ್ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್
ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಎರಡು ಸೇವೆಯನ್ನು ಜಾತೀಯತೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಇವನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಎಲ್ಲಾ ಜೊಮಾಟೊ ಡೆಲಿವರಿ ಬಾಯ್ಗಳೂ ಕೆಂಪು ಬಣ್ಣದ ಸಮವಸ್ತ್ರವನ್ನೇ ಧರಿಸಲಿದ್ದಾರೆ. ಪ್ರತ್ಯೇಕ ಹಸಿರು ಸಮವಸ್ತ್ರ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ