Zomato Listing: ಝೊಮ್ಯಾಟೋ ಲಿಸ್ಟಿಂಗ್ ನಂತರ ಮೂರೇ ಟ್ರೇಡಿಂಗ್ ಸೆಷನ್​ನಲ್ಲಿ ಶೇ 95ರಷ್ಟು ಏರಿಕೆ

| Updated By: Srinivas Mata

Updated on: Jul 27, 2021 | 12:58 PM

ಆನ್​ಲೈನ್ ಫುಡ್ ಡೆಲಿವರಿ ಕಂಪೆನಿಯಾದ ಝೊಮ್ಯಾಟೋ ಷೇರಿನ ಬೆಲೆ ಮೂರು ಟ್ರೇಡಿಂಗ್ ಸೆಷನ್​ನಲ್ಲಿ ಶೇ 95ರಷ್ಟು ಹೆಚ್ಚಾಗಿ, ಹೂಡಿಕದಾರರ ಹೂಡಿಕೆ ಮೊತ್ತ ದುಪ್ಪಟ್ಟು ಆಗುವ ಸಮೀಪದಲ್ಲಿದೆ.

Zomato Listing: ಝೊಮ್ಯಾಟೋ ಲಿಸ್ಟಿಂಗ್ ನಂತರ ಮೂರೇ ಟ್ರೇಡಿಂಗ್ ಸೆಷನ್​ನಲ್ಲಿ ಶೇ 95ರಷ್ಟು ಏರಿಕೆ
ಇವತ್ತಿಗೆ 1.61 ಕೋಟಿ ರೂಪಾಯಿ
Follow us on

ಝೊಮ್ಯಾಟೋ ಕಂಪೆನಿಯ (Zomato) ಷೇರು ಇಂದಿನ (ಜುಲೈ 27, 2021) ಶೇ 5ರ ತನಕ ಏರಿಕೆ ಕಂಡು, ಎನ್​ಎಸ್​ಇಯಲ್ಲಿ ಹೊಸ ದಾಖಲೆ ಮಟ್ಟವಾದ ರೂ. 147.80 ತಲುಪಿತು. ಆನ್​ಲೈನ್ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಆದ ಝೊಮ್ಯಾಟೋ ಪ್ರತಿ ಷೇರಿಗೆ ರೂ. 76ರಂತೆ ಐಪಿಒನಲ್ಲಿ ವಿತರಿಸಲಾಗಿತ್ತು. ಆ ಹಂತದಿಂದ ಶೇ 95ರಷ್ಟು ಏರಿಕೆ ಆಗಿದೆ. ಸ್ವಿಸ್ ಬ್ರೋಕರೇಜ್​ ಹೇಳುವಂತೆ, ಇನ್ನೂ ಶೇ 12ರಷ್ಟು ಏರಿಕೆ ಕಾಣುವ ಸಾಧ್ಯತೆ ಝೊಮ್ಯಾಟೋಗೆ ಇದೆ. 12 ತಿಂಗಳ ಅವಧಿಯನ್ನು ಗುರಿಯಾಗಿಟ್ಟುಕೊಂಡು ಈ ಬ್ರೋಕಿಂಗ್​ನಿಂದ ಪ್ರತಿ ಷೇರಿಗೆ 165 ರೂಪಾಯಿ ಗುರಿ ನಿಗದಿ ಮಾಡಲಾಗಿದೆ. “ಬಹಳ ವೇಗವಾಗಿ ಬೆಳೆಯುತ್ತಿರುವ ಭಾರತದ ಫುಡ್​ ಡೆಲಿವರಿ ಮಾರ್ಕೆಟ್​ನ ಎರಡು ಪ್ರಮುಖ ಕಂಪೆನಿಗಳಲ್ಲಿ ಒಂದಾದ ಝೊಮ್ಯಾಟೋದಿಂದ ನಾವು ಶೇ 40ರಷ್ಟು ಆದಾಯ ಸಿಎಜಿಆರ್ ನಿರೀಕ್ಷೆ ಮಾಡುತ್ತೇವೆ. ಈ ಭಾಗದಲ್ಲಿ ಇದನ್ನು ವೇಗವಾಗಿ ಬೆಳೆಯುತ್ತಿರುವ ಇಂಟರ್​ನೆಟ್​ ಕಂಪೆನಿಗಳಲ್ಲಿ ಒಂದನ್ನಾಗಿ ಮಾಡುತ್ತದೆ,” ಎಂದು ಯುಬಿಎಸ್​ ಸೆಕ್ಯೂರಿಟೀಸ್ ಹೇಳಿದೆ.

ಝೊಮ್ಯಾಟೋ ಕಂಪೆನಿಯ ಷೇರು ಕಳೆದ ಶುಕ್ರವಾರದಂದು ಪ್ರತಿ ಷೇರಿಗೆ 115 ರೂಪಾಯಿಯಂತೆ ಲಿಸ್ಟಿಂಗ್ ಆಗಿತ್ತು. ಆ ನಂತರ ಶೇ 28.52ರಷ್ಟು ಏರಿಕೆ ಕಂಡು, ಬಿಎಸ್​ಇಯಲ್ಲಿ 56.90 ಲಕ್ಷ ಷೇರುಗಳು ಕೈ ಬದಲಾಗಿದ್ದವು. ಈ ತನಕ ಎನ್​ಎಸ್​ಇಯಲ್ಲಿ 8.14 ಕೋಟಿ ಷೇರುಗಳು ವಹಿವಾಟಾಗಿವೆ. ಕಳೆದ ವರ್ಷದಿಂದ ಆನ್​ಲೈನ್ ಫುಡ್ ಡೆಲಿವರಿಗೆ ಜಾಗತಿಕವಾಗಿ ಬೇಡಿಕೆ ಬಂದಿದೆ ಅಂತಲ್ಲ. ಸಣ್ಣ ಕುಟುಂಬಗಳು, ಕಡಿಮೆ ಸಮಯ ಮತ್ತು ಅಡುಗೆ ಮಾಡುವ ಸಾಧ್ಯತೆ ಹಾಗೂ ಇತರ ಅಂಶಗಳು ಸೇರಿ ಭಾರತದ ಆನ್​ಲೈನ್ ಫುಡ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಸಾಧ್ಯತೆಯನ್ನು ತೆರೆದಿಟ್ಟಿದೆ.

ಘಟಕದ ಆರ್ಥಿಕತೆಯಲ್ಲಿ ಈಗಲೂ ಬದಲಾವಣೆಗಳು ಆಗುತ್ತಾ ಇದೆ ಮತ್ತು ರೆಸ್ಟೋರೆಂಟ್​ಗಳೇ ತಮ್ಮದೇ ಪ್ಲಾಟ್​ಫಾರ್ಮ್​ಗಳನ್ನು ಮಾಡಿಕೊಳ್ಳುತ್ತಿವೆ. ಇನ್ನು ನಾನ್ ಡೆಲಿವರಿ ಪ್ಲಾಟ್​ಫಾರ್ಮ್​ಗಳಾದ Thriveನಂಥವು ಸಹ ಸ್ಪರ್ಧೆ ನೀಡುತ್ತಿವೆ. ಈ ರೀತಿ ಚದುರಿದ ವಾತಾವರಣದಲ್ಲಿ ಅಂತಿಮವಾಗಿ ಅಗ್ರಿಗೇಟರ್ ಆದ ಪ್ಲಾಟ್​ಫಾರ್ಮ್​ಗಳಿಗೆ ಸಿಂಹ ಪಾಲು ದೊರೆಯುವುದಕ್ಕೆ ಅನುಕೂಲ ಆಗುತ್ತದೆ. ಭಾರತದಲ್ಲಿ 1 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. 5 ಕೋಟಿಯಿಂದ 7 ಕೋಟಿ ಒಟ್ಟಾರೆ ಆನ್​ಲೈನ್ ಆರ್ಡರ್​ಗಳಾಗುತ್ತಿವೆ. ಭಾರತದಲ್ಲಿ ಬೆಳವಣಿಗೆಗೆ ದೀರ್ಘಾವಧಿಯ ಅವಕಾಶಗಳಿವೆ ಎಂದು ಯುಬಿಎಸ್ ನಂಬಿಕೆ ಆಗಿದೆ. ಇನ್ನು ನವೆಂಬರ್​ 2020ರಲ್ಲಿ ನಡೆದ ಸಮೀಕ್ಷೆಯೊಂದರ ಬಗ್ಗೆ ಯುಬಿಎಸ್​ನಿಂದ ಪ್ರಸ್ತಾವ ಮಾಡಲಾಗಿದೆ. ಅದರಂತೆ ಯಾರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿಲ್ಲವೋ ಅಂಥವರ ಪೈಕಿ ಶೇ 80ರಷ್ಟು ಮಂದಿ ಭವಿಷ್ಯದಲ್ಲಿ ಆರ್ಡರ್ ಮಾಡುವ ಸಾಧ್ಯತೆ ಇದೆ.

(ಈ ಲೇಖನದಲ್ಲಿನ ಅಭಿಪ್ರಾಯ ಆಯಾ ಬ್ರೋಕಿಂಗ್ ಸಂಸ್ಥೆಯದು. ಹೂಡಿಕೆಗೆ ಮುಂಚಿನ ನಿರ್ಧಾರ ವೈಯಕ್ತಿಕವಾದದ್ದು.)

ಇದನ್ನೂ ಓದಿ: GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್

(Zomato Share Price Increased By 95 Percent In 3 Trading Session From Listing )