ಹರಿಯಾಣ: ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 16 ವರ್ಷದ ಬಾಲಕರು!
ಹರಿಯಾಣದ ಫರಿದಾಬಾದ್ನಲ್ಲಿ (Faridabad) ಇಂದು (ಸೆ.25) ಬೆಳಿಗ್ಗೆ 16 ವರ್ಷದ ಬಾಲಕರಿಬ್ಬರು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೋ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇನ್ನು ಈ ಬಾಲಕರ ಮನೆಯವರು ಇದು ಕೊಲೆ ಎಂಬ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ.
ಫರಿದಾಬಾದ್, ಸೆ.25: ಹರಿಯಾಣದ ಫರಿದಾಬಾದ್ನಲ್ಲಿ (Faridabad) ಇಂದು (ಸೆ.25) ಬೆಳಿಗ್ಗೆ 16 ವರ್ಷದ ಬಾಲಕರಿಬ್ಬರು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೋ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇನ್ನು ಈ ಬಾಲಕರ ಮನೆಯವರು ಇದು ಕೊಲೆ ಎಂಬ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅರಾವಳಿಯಲ್ಲಿರುವ ಸಿದ್ದತಾ ಆಶ್ರಮದ ಹಿಂದೆ ಈ ಇಬ್ಬರ ಬಾಲಕರ ಶವಗಳು ಪತ್ತೆಯಾಗಿದ್ದು, ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಬಾದ್‌ಶಾ ಖಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಫರಿದಾಬಾದ್ ನಿವಾಸಿಗಳಾದ ಇಬ್ಬರು ಬಾಲಕರು 7ರಿಂದ 10ವರೆಗೆ ಜತೆಗೆಯಾಗಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಆದರೆ ಇದರಲ್ಲಿ ಒಬ್ಬ ಬಾಲಕ ಮತ್ತು ಆತನ ಕುಟುಂಬ ಬೇರೆ ಊರಿಗೆ ಹೋಗಬೇಕಾಗಿತ್ತು. ಜತೆಗೆ ಶಾಲೆಯನ್ನು ಬದಲಾಯಿಸುವುದು ಕೂಡ ಅನಿರ್ವಾಯವಾಗಿತ್ತು.
ಭಾನುವಾರ ಸಂಜೆ 3.00 ಗಂಟೆಗೆ ಇಬ್ಬರು ಜತೆಗೆಯಾಗಿ ವಾಕಿಂಗ್ ಹೋಗಿದ್ದರು. ಈ ಇಬ್ಬರು ಬಾಲಕರಲ್ಲಿ ಒಬ್ಬ ತನ್ನ ಅಣ್ಣನಿಗೆ ದಾರಿಯಲ್ಲಿ ಸಿಕ್ಕಿ ಮಾತನಾಡಿ, ನಾನು ಮತ್ತೆ ಬರುವೇ ಎಂದು ಹೇಳಿ ಅಲ್ಲಿಂದ ತನ್ನ ಸ್ನೇಹಿತನ ಜತೆಗೆ ಹೋಗಿದ್ದಾನೆ. ಇದರ ಜತೆಗೆ ಮತ್ತೊಬ್ಬ ಬಾಲಕ ಮೊಬೈಲ್ನ್ನು ಕೂಡ ತೆಗೆದುಕೊಂಡ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೊಬೈಲ್ನಿಂದ ಒಂದು ಬಾರಿ ಬಾಲಕನ ಮನೆಗೆ ಕಾಲ್ ಮಾಡಿದ್ದಾನೆ. ಮತ್ತೊಮ್ಮೆ ಪ್ರಯತ್ನ ಮಾಡಿದಾಗ ಕರೆ ಹೋಗುತ್ತಿರಲಿಲ್ಲ.
ಇದನ್ನೂ ಓದಿ:ಹರಿಯಾಣ; 13 ಗಂಟೆಗಳ ಕ್ಯಾಬ್ರೈಡ್; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ
ಇದರಿಂದ ಭಯಗೊಂಡ ಮನೆಯವರು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಡರಾತ್ರಿ ಬಾಲಕ ತೆಗೆದುಕೊಂಡು ಹೋಗಿದ್ದ ಫೋನ್ಗೆ ಕರೆ ಮಾಡಿದರು, ಯಾರು ಕರೆ ಸ್ವೀಕರಿಸಿಲ್ಲ, ಮಧ್ಯರಾತ್ರಿ ಊರೆಲ್ಲ ಹುಡುಕಾಟ ನಡೆಸಿದ್ದಾರೆ. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಸಿದ್ದತಾ ಆಶ್ರಮದ ಹಿಂಭಾಗದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Mon, 25 September 23