ಕಂಬಿ ಕದಿಯಲು ಹೋಗಿದ್ದ ಕಳ್ಳನ ಸಾವಿಗೆ ಟ್ವಿಸ್ಟ್​, ಆರೋಪಿಗಳು ಅರೆಸ್ಟ್​

ಬೆಂಗಳೂರು: ಶ್ರೀರಾಂಪುರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮೇ 31ರಂದು ಜಗನ್(23) ಎಂಬಾತನ ಅನುಮಾನಾಸ್ಪದ ಸಾವು ಸಂಭವಿಸಿತ್ತು. ನಂತರ ತನಿಖೆ ವೇಳೆ ಜಗನ್ ಕೊಲೆಯಾಗಿರುವ ವಿಷಯ ಬಯಲಾಗಿದೆ. ಕದಿಯಲು ಬಂದಿದ್ದ ಕಳ್ಳನನ್ನು ಕೊಲೆ ಮಾಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜಗನ್, ಶ್ರೀರಾಮಪುರದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ಸಾಕಷ್ಟು ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಬಳಿಕವೂ ಅದೇ ಮಾದರಿಯ ಕೃತ್ಯ ಎಸಗಲು ಹೋಗಿದ್ದ. ಮೇ 31ರಂದು ರಾತ್ರಿ […]

ಕಂಬಿ ಕದಿಯಲು ಹೋಗಿದ್ದ ಕಳ್ಳನ ಸಾವಿಗೆ ಟ್ವಿಸ್ಟ್​, ಆರೋಪಿಗಳು ಅರೆಸ್ಟ್​
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 05, 2020 | 3:20 PM

ಬೆಂಗಳೂರು: ಶ್ರೀರಾಂಪುರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮೇ 31ರಂದು ಜಗನ್(23) ಎಂಬಾತನ ಅನುಮಾನಾಸ್ಪದ ಸಾವು ಸಂಭವಿಸಿತ್ತು. ನಂತರ ತನಿಖೆ ವೇಳೆ ಜಗನ್ ಕೊಲೆಯಾಗಿರುವ ವಿಷಯ ಬಯಲಾಗಿದೆ. ಕದಿಯಲು ಬಂದಿದ್ದ ಕಳ್ಳನನ್ನು ಕೊಲೆ ಮಾಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಜಗನ್, ಶ್ರೀರಾಮಪುರದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ಸಾಕಷ್ಟು ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಬಳಿಕವೂ ಅದೇ ಮಾದರಿಯ ಕೃತ್ಯ ಎಸಗಲು ಹೋಗಿದ್ದ.

ಮೇ 31ರಂದು ರಾತ್ರಿ ಖಾಸಗಿ ಅಪಾರ್ಟ್​ಮೆಂಟ್​ನ ಕಂಬಿ ಕದಿಯಲು ಜಗನ್ ಹೋಗಿದ್ದ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕೈಗೆ ಸಿಕ್ಕಿ ಜಗನ್​ ಸಿಕ್ಕಿಬಿದ್ದಿದ್ದ. ಆಗ ಬನಬಂದಂತೆ ಥಳಿಸಿ ಸೆಕ್ಯೂರಿಟಿ ಗಾರ್ಡ್​ಗಳು ಹೊರತಳ್ಳಿದ್ದರು. ನಂತರ ಮನೆಗೆ ತೆರಳುವಾಗ ಮನೆಯ ಮುಂದೆ ಮೋರಿಗೆ ಬಿದ್ದು ಮೃತಪಟ್ಟಿದ್ದಾನೆ.

ತನಿಖೆ ವೇಳೆ ಅಸಹಜ ಸಾವಲ್ಲ ಕೊಲೆ ಎಂಬುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ ಪಶ್ಚಿಮ ಬಂಗಾಳ ಮೂಲದ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Published On - 11:53 am, Fri, 5 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us