ನೆಲಮಂಗಲ: ಕೃಷಿ ಹೊಂಡದಲ್ಲಿ ಈಜಲು (Swimming) ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಕುಕ್ಕನಹಳ್ಳಿ ಗ್ರಾಮದ ಗಂಗಭೈಲಪ್ಪ ಅವರಿಗೆ ಸೇರಿದ ಜಮೀನಿನ ಕೃಷಿ ಹೊಂಡದಲ್ಲಿ ಘಟನೆ ನಡೆದಿದೆ. ಅಡುಗೆ ಭಟ್ಟ ಪ್ರಭಾಕರ್ ಪುತ್ರ ಗಗನ್(15)ಮೃತ ದುರ್ದೈವಿ. ಬಿಜಿಎಸ್ ಹಾಸ್ಟೆಲ್ನಲ್ಲಿ ಅಡುಗೆ ಭಟ್ಟರಾಗಿರುವ ಪ್ರಭಾಕರ್, ಸ್ಥಳೀಯರ ಸಹಾಯದಿಂದ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ವಿದ್ಯಾರ್ಥಿ ಶವ ರವಾನೆ ಮಾಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸ್ಟೇಲ್ ಕೋಣೆಯ ಪ್ಯಾನ್ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ:
ಬೆಂಗಳೂರು: ವಿ.ವಿ.ಪುರಂನ ಹಾಸ್ಟೇಲ್ನ ಕೋಣೆಯ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಘಟನೆ ನಡೆದಿದ್ದು, ಗುಡಿಬಂಡೆ ಮೂಲದ ಪ್ರಮೋದ್ (19) ಮೃತ ವಿದ್ಯಾರ್ಥಿ. ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರಿಗೆ ಬಂದು ಹಾಸ್ಟೇಲ್ನಲ್ಲಿ ಬಂದು ನೆಲೆಸಿದ್ದ. ವಿದ್ಯಾರ್ಥಿ ಪ್ರಮೋದ್ ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 9 ಜನರ ಬಂಧನ:
ಕೋಲಾರ: ಎಸ್ಪ್ಡಿ ದೇವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 9 ಜನರ ಬಂಧನ ಮಾಡಲಾಗಿದೆ. ಬಂಧಿತರಿಂದ ಮೊಬೈಲ್ ಪೋನ್ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ವೆಬ್ ಸೈಟ್ಯೊಂದರ ಆನೈಲೈನ್ ಮೂಲಕ ಕ್ರಿಕೆಟ್ ಬುಕ್ಕಿಗಳು ಆಟವಾಡಿಸುತ್ತಿದ್ದರು. ಭರತ್ ೨೯, ಸುಬ್ರಮಣಿ ೩೬, ಶಂಕರಚಾರಿ ೨೮, ಅಂಬರೀಷ್ ೨೪, ಮುನಿರಾಜು ೩೭, ಕುತುಬ್ ಪಾಷಾ ೨೪, ಮಹಮದ್ ಷರೀಪ್, ಸಲ್ಮಾನ್ ೨೩, ವಿಜಯ್ ಕಾಂತ್ ೩೬, ಸೈಯದ್ ಅಬ್ದಲ್ ಸುಭಾನ್ ೨೮ ಬಂಧಿತ ಆರೋಪಿಗಳು. ವಿವಿಧ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರು ಪ್ರಕರಣ ದಾಖಲಾಗಿದೆ. ಬೆಟ್ಟಿಂಗ್ ದಂದೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದು, ಅವರ ಮೇಲೂ ಕ್ರಮದ ಭರವಸೆ ನೀಡಲಾಗಿದೆ.
ಲಕ್ಷ ಲಕ್ಷ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ:
ಚಿಕ್ಕಮಗಳೂರು: ನಗರದಲ್ಲಿ 2 ಲಕ್ಷ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಅಧಿಕಾರಿ ಬಿದ್ದಿರುವಂತಹ ಘಟನೆ ನಡೆದಿದೆ. ನಗರಾಭಿವೃದ್ಧಿ ಪ್ರಾಧಿಕಾರ(ಸಿಡಿಎ)ದ ಸಹಾಯಕ ಯೋಜನಾಧಿಕಾರಿ ಶಿವಕುಮಾರ್ ಬಲಗೆ ಬಿದ್ದ ಅಧಿಕಾರಿ. ಎಸಿಬಿ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಕಚೇರಿ ಪಕ್ಕದಲ್ಲಿಯೇ ಎಂಟೂವರೆ ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಮುಂಗಡ ಹಣ ಎರಡು ಲಕ್ಷ ಪಡೆಯುವ ವೇಳೆ ಎಸಿಬಿ ದಾಳಿ ಮಾಡಿದ್ದು, ಬ್ರೋಕರ್ ರಮೇಶ್ ಎಂಬುವನ ಮೂಲಕ ದೂರುದಾರ ಸಂಪರ್ಕಿಸಿದ್ದಾರೆ.
ಇದನ್ನೂ ಓದಿ:
ವಿದೇಶದಲ್ಲಿ ಅಲ್ಲು ಅರ್ಜುನ್ ಬರ್ತ್ಡೇ ಸೆಲಬ್ರೇಷನ್; ಇಲ್ಲಿದೆ ಫೋಟೋ ಗ್ಯಾಲರಿ
ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಪತ್ರಕರ್ತನನ್ನು ಥಳಿಸಿ, ಆಸ್ಪತ್ರೆಯ ಬೆಡ್ಗೆ ಕಟ್ಟಿಹಾಕಿದ ಪೊಲೀಸರು
Published On - 7:16 pm, Fri, 8 April 22