ಹಣದ ಆಸೆ ತೋರಿಸಿ ಮಕ್ಕಳಿಂದ ಮೊಬೈಲ್ ಕಳ್ಳತನ ಮಾಡಿಸುತ್ತಿರುವ ಗುಂಪು; ಖದೀಮರ ಬಂಧನಕ್ಕೆ ಸ್ಥಳೀಯರ ಒತ್ತಾಯ

ಲಿಂಗರಾಜಪುರದಲ್ಲಿ ಮಕ್ಕಳಿಂದ ಮೊಬೈಲ್ ಕಳ್ಳತನವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಗುಂಪೊಂದು ಮಕ್ಕಳನ್ನು‌ ಮುಂದೆ ಬಿಟ್ಟು ಕಳ್ಳತನ ಮಾಡುತ್ತಿದೆ. ಈ ಗುಂಪು ಮಕ್ಕಳಿಂದ ಒಂದು ಮೊಬೈಲ್ ಪಡೆದು ಅವರಿಗೆ ಐನೂರು ಸಾವಿರ ರೂಪಾಯಿ ನೀಡಿ ಕಳ್ಳತನಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಣದ ಆಸೆ ತೋರಿಸಿ ಮಕ್ಕಳಿಂದ ಮೊಬೈಲ್ ಕಳ್ಳತನ ಮಾಡಿಸುತ್ತಿರುವ ಗುಂಪು; ಖದೀಮರ ಬಂಧನಕ್ಕೆ ಸ್ಥಳೀಯರ ಒತ್ತಾಯ
ಮಕ್ಕಳಿಂದ ಮೊಬೈಲ್ ಕಳ್ಳತನ ಮಾಡಿಸುತ್ತಿರುವ ಗುಂಪು
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Feb 26, 2024 | 2:23 PM

ಬೆಂಗಳೂರು, ಫೆ.26: ಬೆಂಗಳೂರಲ್ಲಿ ಮಕ್ಕಳನ್ನು ಮುಂದೆ ಬಿಟ್ಟು ಕಳ್ಳತನ (Theft) ಮಾಡಲಾಗುತ್ತಿರುವ ಗುಂಪೊಂದು ಪತ್ತೆಯಾಗಿದೆ. ಮಕ್ಕಳು ಸಣ್ಣ ಸಣ್ಣ ವಯಸ್ಸಿಗೆ ಮೊಬೈಲ್ ಕಳ್ಳತನಕ್ಕೆ (Mobile Theft) ಕೈಹಾಕುತ್ತಿದ್ದಾರೆ. ಲಿಂಗರಾಜಪುರದಲ್ಲಿ ಮಕ್ಕಳಿಂದ ಮೊಬೈಲ್ ಕಳ್ಳತನವಾಗುತ್ತಿರುವ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಲಿಂಗರಾಜಪುರ ಅಕ್ರಮದ ಗೂಡಾಗಿದೆ. ಇಲ್ಲಿ ಮೀಸೆ ಚಿಗುರದ ಹುಡುಗರ ಕೈಯಲ್ಲಿ ಮಾದಕ ವಸ್ತು ಕಾಣಸಿಗುತ್ತದೆ.

ಐದು, ಆರು, ಏಳನೇ ತರಗತಿ ಮಕ್ಕಳು ಕಳ್ಳತನ ಮಾಡುತ್ತಿದ್ದಾರೆ. ಜನ ನಿದ್ದೆ ಮಾಡ್ತಿದ್ದಂತೆ ಮೊಬೈಲ್ ಕದ್ದು ಹೋಗ್ತಿದ್ದಾರೆ. ಗುಂಪೊಂದು ಮಕ್ಕಳನ್ನು‌ ಮುಂದೆ ಬಿಟ್ಟು ಕಳ್ಳತನ ಮಾಡುತ್ತಿದೆ. ಈ ಗುಂಪು ಮಕ್ಕಳಿಂದ ಒಂದು ಮೊಬೈಲ್ ಪಡೆದು ಅವರಿಗೆ ಐನೂರು ಸಾವಿರ ರೂಪಾಯಿ ನೀಡಿ ಕಳ್ಳತನಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಲಿಂಗರಾಜಪುರ ನಿವಾಸಿಗಳು ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ರು ಪ್ರಯೋಜನ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮನೆಯಲ್ಲಿ ಮಧ್ಯಾಹ್ನ ಮಲಗಿದ್ದ ಡಿಸೋಜಾ ಎಂಬ ವ್ಯಕ್ತಿಯ ಮೊಬೈಲ್ ಅನ್ನೇ ಓರ್ವ ಬಾಲಕ ಎಗರಿಸಿ ಸಿಮ್ ಕಾರ್ಡ್ ಕಚ್ಚಿ ಬಿಸಾಡಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಮಕ್ಕಳ ಹಿಂದಿರುವ ಮಾಫಿಯ ಬಯಲಿಗೆಳೆಯಲು ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಕಿಡ್ನಾಪ್ ಮಾಡಿ ಸುಲಿಗೆ

ಆಸ್ಟ್ರೇಲಿಯಾದ ಸಿಟಿಜೆನ್ಶಿಪ್ ಪಡೆದ ಅಲೋಕ್ ರಾಣಾ ಹಾಗೂ ಈತನ ಸಹೋದರ ಅಮಿತ್ ರಾಣಾ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದರು. ಅಲೋಕ್ ರಾಣಾ ಸಹೋದರ ಅಮಿತ್ ರಾಣಾನನ್ನು ನೋಡಿಕೊಂಡು ಹೋಗಲು ಬಂದಿದ್ದ ಈ ವೇಳೆ ಡ್ರಗ್ಸ್ ವೆಸನಿಯಾಗಿದ್ದ ಅಲೋಕ್ ರಾಣಾ ಡಾರ್ಕ್ ವೆಬ್ ಮೂಲಕ ಗಾಂಜಾ ಖರೀದಿಸಲು ಮುಂದಾಗಿದ್ದ. ಈ ವೇಳೆ ಮೋನಿಷ್ ಎಂಬಾತ ಪರಿಚಯವಾಗಿದ್ದ. ಅಷ್ಟೇ ಮೋನಿಷ್ ಬಳಿ ನಾಲ್ಕೈದು ಸಲ ಗಾಂಜಾವನ್ನು ಖರೀದಿ ಮಾಡಿದ್ದ. ಇದರಿಂದ ಮೊನಿಷ್ , ಅನಿರುದ್ದ್, ಆದಿ ಸೇರಿದಂತೆ ನಾಲ್ಕೈದು ಜನರ ಗುಂಪು ಅಲೋಕ್ ರಾಣಾ ನನ್ನು ಕಿಡ್ನಾಪ್ ಮಾಡಿದ್ರೆ ಸಾಕಷ್ಟು ಹಣ ಗಳಿಸಬಹುದು ಎಂದು ಪ್ಲಾನ್ ಮಾಡಿ ಗಾಂಜಾ ಕೊಡುವ ನೆಪದಲ್ಲಿ ಕರೆಸಿಕೊಂಡು ಕಿಡ್ನಾಪ್ ಮಾಡಿದ್ದಾರೆ.

ಇದನ್ನೂ ಓದಿ: ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಯುವಕ-ಯುವತಿಯರಿಗೆ ಕೋಟ್ಯಾಂತರ ರೂ ಮೋಸ, ನಾಲ್ವರು ಅರೆಸ್ಟ್

ಮೋನಿಷ್, ಆದಿ, ಅನಿರುದ್ದ್ ಟೀಮ್ ಅಲೋಕ್ ರಾಣಾನನ್ನು ಕಿಡ್ನಾಪ್ ಮಾಡಿ ರೂಮ್ ನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು. ಈ ವೇಳೆ ಹಣಕ್ಕಾಗಿ ಪೀಡಿಸಿ ಅಲೋಕ್ ರಾಣಾ ಬಳಿ ಕಾರ್ಡ್ ನಿಂಡ ಎಟಿಎಂ ನಲ್ಲಿ ಹಣ ಡ್ರಾ ಮಾಡಿಸಿದ್ದರು. ಅಲೋಕ್ ರಾಣಾ ಅಣ್ಣನಿಗೂ ಕರೆ ಮಾಡಿ ಅನ್ ಲೈನ್ ಪೇಮೆಂಟ್ ಮೂಲಕ ಹಣ ಹಾಕಿಸಿಕೊಂಡಿದ್ದರು. ಸುಮಾರು 78 ಸಾವಿರ ಹಣವನ್ನು ಅಲೋಕ್ ರಾಣಾ ನಿಂದ ಪಡೆದ್ರೆ 40 ಸಾವಿರ ಹಣ ಅಮಿತ್ ರಾಣಾ ಟ್ರಾನ್ಸ್ ಫರ್ ಮಾಡಿಸಿಕೊಂಡು ಆ ಮೂಲಕ ಖದೀಮರು ಪೀಕಿದ್ದರು. ಅಲೋಕ್ ರಾಣಾ ಕಾರು ಜಿಪಿಆರ್ ಎಸ್ ಆಧರಿಸಿ ಟ್ರೇಸ್ ಮಾಡಿ ಅಣ್ಣ ಅಮಿತ್ ರಾಣಾ ಬೊಮ್ಮನಹಳ್ಳಿಯ ಆ ಸ್ಪಾಟ್ ಗೆ ಬಂದಾಗ ಬೈಲ್ ಏರಿ ಗಾಂಜಾ ಗ್ಯಾಂಗ್ ಎಸ್ಕೇಪ್ ಆಗಿತ್ತು, ಅದರಲ್ಲೊಬ್ಬ ತನ್ನ ಮೊಬೈಲ್ ಬಿಟ್ಟು ಗಾಬರಿಯಿಂದ ಓಡಿಬಪರಾರಿಯಾಗಿದ್ದ. ಆದರೆ ಇದೇ ಸಮಯದಲ್ಲಿ ಅಲೋಕ್ ಖದೀಮರಿಂದ ತಪ್ಪಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ. ಗಾಂಜಾ ಖರೀದಿದಾರ ಎಂಬ ಭಯಕ್ಕೆ ಈ ವಿಚಾರ ಎಲ್ಲೂ ಬಾಯ್ಬಿಟ್ಟರಲಿಲ್ಲ. ಡಿಸಿಪಿ ಸಿಕೆ ಬಾಬಾಗೆ ಈ ವಿಚಾರ ತಿಳಿಯುತ್ತಿದ್ದಂತೆ ಎಫ್ ಐಆರ್ ದಾಖಲಿಸುವಂತೆ ಸೂಚಿಸಿದರು. ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳನನ್ನು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ 6 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?