AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ರಸ್ತೆಗೆ 10 ರೂ. ನೋಟು ಬಿಸಾಡಿ 1 ಲಕ್ಷ ರೂ. ಹಣ ಎಗರಿಸಿದ ದುಷ್ಕರ್ಮಿ; ವಿಡಿಯೋ ನೋಡಿ

ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದ 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Oct 10, 2023 | 8:59 AM

Share

ರಾಮನಗರ ಅ.10: ಚನ್ನಪಟ್ಟಣದ (Chennapattan) ಕೆನರಾ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದ 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು. ರಾಘವೇಂದ್ರ ಅವರು ಕೆನರಾ ಬ್ಯಾಂಕ್​ನಿಂದ (Canara Bank) 1 ಲಕ್ಷ ರೂ. ಹಣ ಡ್ರಾಮಾಡಿಕೊಂಡು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದ್ದೆ ಎಂದು ಹೇಳಿದ್ದಾನೆ.

ರಾಘವೇಂದ್ರ ಅವರು 1 ಲಕ್ಷ ರೂ. ಹಣವಿದ್ದ ಕವರ್​​ ಅನ್ನು​ ಬೈಕ್ ಮೇಲೆ ಇಟ್ಟು 10 ರೂ. ಎತ್ತಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಕ್ಷಣಾರ್ಧದಲ್ಲೇ 1 ಲಕ್ಷ ರೂ. ಹಣವಿದ್ದ ಕವರ್ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ಹಣ ತೆಗೆದುಕೊಂಡು ಹೋಗುತ್ತಿರುವುದನ್ನು ಮಹಿಳೆಯೊಬ್ಬರು ಕಂಡು ಕೈಸನ್ನೆ ಮಾಡಿ “ಯಾರೋ ನಿನ್ನ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದಾರೆ ನೋಡಿ ಎಂದು” ರಾಘವೇಂದ್ರ ಅವರಿಗೆ ಎಚ್ಚರಿಸಲು ಪ್ರಯತ್ನ ಪಟ್ಟರು.

ಇದನ್ನೂ ಓದಿ: ವಿಮಾನದಲ್ಲಿ ಬಂದು ಕಳ್ಳತನ: ಮಂಗಳೂರು ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಹೈಟೆಕ್‌ ದರೋಡೆಕೋರರು

ಆದರೆ ರಾಘವೇಂದ್ರ ಅವರಿಗೆ ಮಹಿಳೆಯ ಕೈಸನ್ನೆ ಭಾಷೆ ಅರ್ಥವಾಗದೆ ಎಚ್ಚೆತ್ತುಕೊಳ್ಳಲಿಲ್ಲ. ಖತರ್ನಾಕ್ ಕಳ್ಳನ ಕೈಚಳಕ ಬ್ಯಾಂಕ್ ಮುಂದಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:20 am, Tue, 10 October 23