ಸಣ್ಣ ವಿಚಾರಕ್ಕೆ ಜಗಳ ವಿದ್ಯಾರ್ಥಿ ಸಾವು, ನಾಲ್ವರು ಅಪ್ರಾಪ್ತ ಬಾಲಕರ ಬಂಧನ

11 ನೇ ತರಗತಿಯ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎಂದು ಖಮ್ತರಾಯ್ ಪೊಲೀಸ್ ಠಾಣಾಧಿಕಾರಿ ಸೋನಾಲ್ ಗ್ವಾಲಾ ತಿಳಿಸಿದ್ದಾರೆ. ಅವರ ನಡುವೆ ವಾಗ್ವಾದ ನಡೆದಿದ್ದು, ನಾಲ್ವರು ಹದಿಹರೆಯದ ಹುಡುಗರು ರಜಪೂತ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಸಣ್ಣ ವಿಚಾರಕ್ಕೆ ಜಗಳ ವಿದ್ಯಾರ್ಥಿ ಸಾವು, ನಾಲ್ವರು ಅಪ್ರಾಪ್ತ ಬಾಲಕರ ಬಂಧನ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2022 | 3:45 PM

ರಾಯಪುರ: ರಾಯ್‌ಪುರದ ಶಾಲೆಯೊಂದರಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಮಾತಿನ ಚಕಮಕಿ ನಡೆದು 16 ವರ್ಷದ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಹುಡುಗರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ.
ಛತ್ತೀಸ್‌ಗಢದ ಭಾನ್‌ಪುರಿ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ನಾಲ್ವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ ಎಂದು  ತಿಳಿಸಿದ್ದಾರೆ. ಸಾವನ್ನಪ್ಪಿರುವ ಹುಡುಗ, ಮೋಹನ್ ಸಿಂಗ್ ರಜಪೂತ್, 10 ನೇ ತರಗತಿ ವಿಭಾಗದ ಪರೀಕ್ಷೆಯಲ್ಲಿ ಹಾಜರಾಗಲು ಶಾಲೆಗೆ ಹೋಗಿದ್ದ, ಅಂಕದ ವಿಚಾರವಾಗಿ ನಡೆದ ಗಲಾಟ ಎಂದು ಹೇಳಲಾಗಿದೆ.

11 ನೇ ತರಗತಿಯ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎಂದು ಖಮ್ತರಾಯ್ ಪೊಲೀಸ್ ಠಾಣಾಧಿಕಾರಿ ಸೋನಾಲ್ ಗ್ವಾಲಾ ತಿಳಿಸಿದ್ದಾರೆ. ಅವರ ನಡುವೆ ವಾಗ್ವಾದ ನಡೆದಿದ್ದು, ನಾಲ್ವರು ಹದಿಹರೆಯದ ಹುಡುಗರು ರಜಪೂತ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ತೀವ್ರವಾಗಿ ಥಳಿಸಿದ ಕಾರಣ ಹುಡುಗ  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಡಾ ಬಿಆರ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಹುಡುಗ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ನಾಲ್ವರು ಬಾಲಕರನ್ನು ಬಂಧಿಸಲಾಯಿತು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Published On - 3:10 pm, Tue, 12 July 22