ಕೋಟಿ ಕೋಟಿ ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ; ಮ್ಯಾಟ್ರೋಮೋನಿ ಮಾದರಿಯ ಆ್ಯಪ್ ದಂಧೆಗೆ ಬಳಕೆ

ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್​ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸುಲು ಈ ಟೆಕ್ಕಿ ಹಿಡಿದಿದ್ದೇ ವೇಶ್ಯಾವಾಟಿಕೆ ದಂಧೆ!

ಕೋಟಿ ಕೋಟಿ ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ; ಮ್ಯಾಟ್ರೋಮೋನಿ ಮಾದರಿಯ ಆ್ಯಪ್ ದಂಧೆಗೆ ಬಳಕೆ
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಟೆಕ್ಕಿ ವೈಶಾಕ್, ಗೋವಿಂದರಾಜು ಹಾಗೂ ವಿದೇಶಿ ಮಹಿಳೆ
Follow us
Jagadisha B
| Updated By: Rakesh Nayak Manchi

Updated on:Jan 12, 2024 | 11:41 AM

ಬೆಂಗಳೂರು, ಜ.11: ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್​ನಲ್ಲಿ (Stock Market) ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್​ಬೈ ಹೇಳಿ ಮ್ಯಾಟ್ರಿಮೋನಿ (Matrimony) ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸುಲು ಈ ಟೆಕ್ಕಿ ಹಿಡಿದಿದ್ದೇ ವೇಶ್ಯಾವಾಟಿಕೆ ದಂಧೆಯ ಹಾದಿ!

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವೈಶಾಕ್​ಗೆ ವೇತನಕ್ಕೇನು ಕೊರತೆ ಇರಲಿಲ್ಲ. ತಿಂಗಳಿಗೆ ಒಂದೂವರೆ ಲಕ್ಷರೂಪಾಯಿ ಸಂಬಳ ಪಡೆಯುತ್ತಿದ್ದನು. ಹೈಟೆಕ್ ಲೈಫ್​ ಸಾಗಿಸುತ್ತಿದ್ದನು. ಆದರೆ ಸ್ಟಾಕ್ ಮಾರ್ಕೆಟ್ ಹುಚ್ಚಿಗೆ ಬಿದ್ದ ವೈಶಾಕ್ ಅದರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾನೆ. ಅಲ್ಲದೆ, ಲಕ್ಷ ಲಕ್ಷ ಸಾಲ ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದೆಯಾ ವೇಶ್ಯಾವಾಟಿಕೆ? ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ದೂರು

ಟೆಕ್ನಾಲಜಿಯಲ್ಲಿ ತಂತ್ರಾಜ್ಞಾನದಲ್ಲಿ ಜ್ಞಾನ ಹೊಂದಿದ್ದ ವೈಶಾಕ್, ಉತ್ತಮ ವೇತನದ ಕಲಸ ಬಿಟ್ಟು ತಲೆ ಕೆಡಿಸಿಕೊಂಡಿದ್ದನು. ನಂತರ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸಿ ಅದರಲ್ಲಿ ವಿವಾಹವಾಗಲು ಇಚ್ಚಿಸುತ್ತಿರುವ ಯುವಕ-ಯುವತಿಯರನ್ನ ಆ್ಯಡ್ ಮಾಡಿ ಸಂಪರ್ಕ ಕಲ್ಪಿಸುತ್ತಿದ್ದನು.

ಇಬ್ಬರಿಗೂ ಪರಸ್ಪರ ಕಾಂಟ್ಯಾಕ್ಟ್ ಮಾಡಿಸಲು ಹಣ ಪಡೆಯುತ್ತಿದ್ದನು. ಹೀಗೆ ಉತ್ತಮ ರೀತಿಯಲ್ಲಿ ಬ್ಯುಸಿನೆಸ್ ಸಾಗುತ್ತಿದ್ದಂತೆ ಬಿಟೆಕ್ ಮುಗಿಸಿದ್ದ ಗೋವಿಂದರಾಜು ಎಂಬಾತ ಈ ಆ್ಯಪ್​ಗೆ ಎಂಟ್ರಿಕೊಟ್ಟಿದ್ದಾನೆ. ಆ್ಯಪ್​ನ ಪ್ರೈವಸಿ ವರ್ಕ್ ನೋಡಿ ಶಾಕ್ ಆಗಿದ್ದ ಗೋವಿಂದರಾಜು, ವೈಶಾಕ್​ನನ್ನು ಸಂಪರ್ಕಿಸಿ ಮ್ಯಾಟ್ರಿಮೋನಿ ಕೆಲಸದ ಬದಲು ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಖತರ್ನಾಕ್ ಐಡಿಯಾ ಕೊಟ್ಟಿದ್ದಾನೆ.

ಅಲ್ಲದೆ, ವಿದೇಶಿ ಮಹಿಳೆಯರಿಗೆ ಸಖತ್ ಡಿಮ್ಯಾಂಡ್ ಇದೆ, ಕೋಟಿ ಕೋಟಿ ಹಣ ಮಾಡಬಹುದು ಎಂದು ಮೈಂಡ್ ವಾಶ್ ಮಾಡಿದ್ದಾನೆ. ಅದಾಗಲೇ ಗೋವಿಂದರಾಜು ವಿದೇಶಿ ಪಿಂಪ್ ಜೊತೆ ಸಂಪರ್ದದಲ್ಲಿದ್ದ. ಆಕೆಯಿಂದ ವಿದೇಶಿ ಯುವತಿಯರು ಸಿಗುತ್ತಾರೆ. ನೀನು ಕಾಂಟೆಕ್ಟ್​​ನಲ್ಲಿ ಗ್ರಾಹಕರನ್ನು ಹುಡುಕು ಎಂದು ವೈಶಾಕ್​ಗೆ ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಮಸಾಜ್ ಪಾರ್ಲರ್​​​​ನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ

ಕೋಟಿಕೋಟಿ ಹಣ ಸಂಪಾದಿಸಲು ದಂಧೆಗೆ ಇಳಿದ ವೈಶಾಗ್​ಗೆ ಗೋವಿಂದರಾಜು ಆತನ ಆ್ಯಪ್​ನಲ್ಲಿದ್ದ ಕೆಲವು ಕಸ್ಟಮರ್​ಗಳನ್ನು ಹುಡುಕಿ ಕೊಡುತ್ತಿದ್ದ. ದಿನ ಕಳೆದಂತೆ ಈ ದಂಧೆಯಿಂದ ಹೆಚ್ಚಿನ ಹಣ ಬರುವುದನ್ನು ನೋಡಿದ ವೈಶಾಕ್, ಇತರೆ ಇಬ್ಬರೊಂದಿಗೆ ಸೇರಿಕೊಂಡು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು. ಸದ್ಯ, ಈ ದಂಧೆ ಬೆಳಕಿಗೆ ಬಂದಿದೆ.

ರಷ್ಯಾ, ಖಜಕಿಸ್ತಾನ ಸೇರಿ ಬೇರೆ ಬೇರೆ ದೇಶಗಳಿಂದ ಯುವತಿಯರನ್ನು ಕರೆಸುತ್ತಿದ್ದರು. ಈ ವಿಚಾರ ತಿಳಿದ ಬೆಂಗಳೂರು ನಗರದ ಬಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಆರೋಪಿಗಳಾದ ವಿದೇಶಿ ಮಹಿಳೆ​, ಗೋವಿಂದರಾಜು ಹಾಗೂ ವೈಶಾಕ್​ನನ್ನ ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:42 am, Thu, 11 January 24