Bengaluru News: ಇಬ್ಬರ ಜಗಳದ ಮಧ್ಯೆ ಬಂದ ಮೂರನೇ ವ್ಯಕ್ತಿ ದುರಂತ ಅಂತ್ಯ

ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರದಲ್ಲಿ ನಡೆದಿದೆ. ಸೋನು‌ (35) ಕೊಲೆಯಾದ ವ್ಯಕ್ತಿ.

Bengaluru News: ಇಬ್ಬರ ಜಗಳದ ಮಧ್ಯೆ ಬಂದ ಮೂರನೇ ವ್ಯಕ್ತಿ ದುರಂತ ಅಂತ್ಯ
ಪ್ರಾತಿನಿಧಿಕ ಚಿತ್ರ
Edited By:

Updated on: Jul 05, 2023 | 3:23 PM

ಬೆಂಗಳೂರು: ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರ(Gopalpur)ದಲ್ಲಿ ನಡೆದಿದೆ. ಸೋನು‌ (35) ಕೊಲೆಯಾದ ವ್ಯಕ್ತಿ. ಈ ಹಿಂದೆ ಮೃತನ ಸಹೋದರ ಅಕ್ರಮ್ ಜೊತೆ ಫಾರೂಕ್ ಜಗಳ ಮಾಡಿಕೊಂಡಿದ್ದ. ಈ ವೇಳೆ ಅಕ್ರಮ್, ಫಾರೂಕ್​ ಪತ್ನಿ ವಿಚಾರವಾಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಬಳಿಕ ಜಗಳ ಹೆಚ್ಚಾಗಿದ್ದು, ಮಾವ ರಿಯಾಜ್ ಗಲಾಟೆ ತಡೆಯಲು ಎಂಟ್ರಿ ಕೊಟ್ಟಿದ್ದನು. ಈ ವೇಳೆ ಗೋಪಾಲಪುರದ ಗುಜುರಿ ಅಂಗಡಿಗೆ ಸಂಧಾನ ಮಾಡುಲು ಕರೆಸಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸೋದರ ಸಂಬಂಧಿ ಫಾರೂಕ್​ನಿಂದ ಕೃತ್ಯ

ಇನ್ನು ಮಾವನಿಂದ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನಕ್ಕೆ ಯತ್ನಿಸಲು ಕರೆಸಿದ್ದ ವೇಳೆ ಅಕ್ರಮ್ ಜೊತೆ ಆತನ ತಮ್ಮ ಸೋನು ಸಹ ಬಂದಿದ್ದ. ಬಳಿಕ ಅಕ್ರಮ್, ಫಾರೂಕ್ ನಡುವಿನ ಜಗಳ ಸಂಧಾನವಾಗಿತ್ತು. ಈ ಮಧ್ಯೆ ಅಕ್ರಮ್ ತಮ್ಮ ಸೋನು ಫಾರೂಕ್​ಗೆ ನಿಂದನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಫಾರೂಕ್ ರಾಡ್​ನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ತಲೆಗೆ ಬಿದ್ದ ಒಂದೇ ಏಟಿಗೆ ನೆಲಕ್ಕೆ ಬಿದ್ದಿದ್ದ ಸೋನು. ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿ ಫಾರೂಕ್​ನನ್ನ ಪೊಲೀಸರು ಬಂಧಿಸಿದ್ದು, ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜೀವನ ಭೀಮಾನಗರ ಮಹಿಳಾ ಟೆಕ್ಕಿ ಕೊಲೆ ಪ್ರಕರಣ: 3 ರಾಜ್ಯಗಳನ್ನ ಸುತ್ತಿದ್ದ ಪ್ರಿಯಕರ ಕೊನೆಗೆ ಬೆಂಗಳೂರಿನಲ್ಲಿ ಲಾಕ್​

ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಟಾಟಾ ಏಸ್; 10ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ

ಮೈಸೂರು: ಜಿಲ್ಲೆಯ ನರಸೀಪುರ ತಾಲೂಕಿನ ಕುಳ್ಳನಕೊಪ್ಪಲು ಗ್ರಾಮದ ಬಳಿ ಗಾರ್ಮೆಂಟ್ಸ್​ಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್, ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದಿದೆ. ಈ ವೇಳೆ 10ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯಗಳಾಗಿದ್ದು, ಬನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಗಂಭೀರ ಗಾಯಗೊಂಡ ಮೂವರನ್ನು ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Wed, 5 July 23