AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elena Milashina: ರಷ್ಯಾದ ಮಹಿಳಾ ಪತ್ರಕರ್ತೆ ಎಲೆನಾ ಮಿಲಾಶಿನಾ ಮೇಲೆ ಹಲ್ಲೆ, ತಲೆ ಬೋಳಿಸಿ ಚಿತ್ರಹಿಂಸೆಕೊಟ್ಟ ಶಸ್ತ್ರಧಾರಿಗಳು

ಪ್ರಶಸ್ತಿ ವಿಜೇತೆ ರಷ್ಯಾದ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ( Elena Milashina)ಅವರು ಚೆಚೆನ್ಯಾ ಪ್ರವಾಸದ ವೇಳೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ಥಳಿಸಿ, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ.

Elena Milashina: ರಷ್ಯಾದ ಮಹಿಳಾ ಪತ್ರಕರ್ತೆ ಎಲೆನಾ ಮಿಲಾಶಿನಾ ಮೇಲೆ ಹಲ್ಲೆ, ತಲೆ ಬೋಳಿಸಿ ಚಿತ್ರಹಿಂಸೆಕೊಟ್ಟ ಶಸ್ತ್ರಧಾರಿಗಳು
ಎಲೆನಾ ಮಿಲಾಶಿನಾImage Credit source: NDTV
ನಯನಾ ರಾಜೀವ್
|

Updated on: Jul 05, 2023 | 10:28 AM

Share

ಪ್ರಶಸ್ತಿ ವಿಜೇತೆ ರಷ್ಯಾದ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ( Elena Milashina)ಅವರು ಚೆಚೆನ್ಯಾ ಪ್ರವಾಸದ ವೇಳೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ಥಳಿಸಿ, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಎಲೆನಾ ಅವರ ಬೆರಳುಗಳು ಮುರಿದು ಹೋಗಿವೆ, ಪ್ರಜ್ಞೆಯನ್ನು ಕೂಡ ಕಳೆದುಕೊಂಡಿದ್ದರು, ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೇಹದಾದ್ಯಂತ ಮೂಗೇಟುಗಳು ಬಿದ್ದಿವೆ. ಮಂಗಳವಾರ ಮುಂಜಾನೆ ಮಿಲಾಶಿನಾ ಮತ್ತು ವಕೀಲ ಅಲೆಕ್ಸಾಂಡರ್ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಶಸ್ತ್ರಾಸ್ತ್ರಧಾರಿಗಳು ಅಮಾನವೀಯವಾಗಿ ಥಳಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಮಾಸ್ಕೋದಲ್ಲಿ ರಷ್ಯಾದ ಕೆಲವು ಶಾಸಕರು ಮತ್ತು ಅಧಿಕಾರಿಗಳು ದಾಳಿಯನ್ನು ಖಂಡಿಸಿದರು, ಅವರು ತನಿಖೆಯ ಅಗತ್ಯವಿದೆ ಎಂದು ಹೇಳಿದರು.

ಮತ್ತಷ್ಟು ಓದಿ:ಭಾರತ್ ಜೋಡೋ ಪಾದಾಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆ

ಎಲಾನಾಗೆ ಥಳಿಸಿ ತಲೆ ಬೋಳಿಸಿ ತಲೆಗೆ ಹಸಿರು ಬಣ್ಣವನ್ನು ಬಳಿದಿದ್ದಾರೆ. ನೊವಾಯಾ ಗೆಜೆಟಾ ಪತ್ರಿಕೆಯ ಪ್ರಸಿದ್ಧ ಪತ್ರಕರ್ತೆ ಮಿಲಾಶಿನಾ, ಜರೆಮಾ ಮುಸೇವಾ ಅವರ ಶಿಕ್ಷೆಯ ಕುರಿತು ವರದಿ ಮಾಡಲು ಚೆಚೆನ್ಯಾ ರಾಜಧಾನಿ ಗ್ರೋಜ್ನಿಗೆ ಹೋಗಿದ್ದರು.

ಕಾರಿನ ಚಾಲಕನ್ನು ಬೆದರಿಸಿ ಆತನನ್ನು ಕೆಳಗಿಳಿಸಿ ಬಂದೂಕುಧಾರಿಗಳು ಕಾರಿನೊಳಗೆ ಬಂದರು, ಬಳಿಕ ನನ್ನ ಕೈಕಾಲು ಕಟ್ಟಿ, ತಲೆಗೆ ಬಂದೂಕು ಇಟ್ಟು, ಹಲ್ಲೆ ನಡೆಸಿದ್ದಾರೆ, ತನ್ನ ಬಳಿ ಇದ್ದ ಕ್ಯಾಮರಾ, ಫೋನ್​ ಅನ್ನು ನಾಶಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ