ಆನೆಕಲ್ನ ಮನೆಯೊಂದರಲ್ಲಿ ಪತ್ನಿ ಶವ ಪತ್ತೆ, ಪತಿ ನಾಪತ್ತೆ
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ವಿನಾಯಕನಗರದ ಮನೆಯೊಂದರಲ್ಲಿ ಮಹಿಳೆಯು ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ.
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ವಿನಾಯಕನಗರದ ಮನೆಯೊಂದರಲ್ಲಿ ಮಹಿಳೆಯು ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ವಿಜಯಪುರ ಮೂಲದ ಪವಿತ್ರಾ(24) ಮೃತ ದುರ್ದೈವಿ. ಪವಿತ್ರಾ ಕಳೆದ 3 ವರ್ಷಗಳಿಂದ ಜಾಕಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇಂದು (ಅ.26) ಪವಿತ್ರಾಳ ಮನೆಯಿಂದ ದುರ್ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದಾಗ ಪವಿತ್ರಾ ಕೊಲೆಯಾಗಿದ್ದು, ಬೆಡ್ಶೀಟ್ನಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಪವಿತ್ರಾಳನ್ನು 3 ದಿನಗಳ ಹಿಂದೆಯೇ ಕೊಲೆ ಮಾಡಿರುವ ಅನುಮಾನವ್ಯಕ್ತವಾಗಿದ್ದು, ಪವಿತ್ರಾ ಪತಿಯೇ, ಪತ್ನಿಯನ್ನು ಕೊಲೆಗೈದು ಪರಾರಿಯಾಗಿರುವ ಅನುಮಾನಮಾನ ವ್ಯಕ್ತವಾಗುತ್ತಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ