2 ದಿನದ ಹಿಂದೆ ಎಂ.ಸ್ಯಾಂಡ್ ಟಿಪ್ಪರ್ನಲ್ಲಿ ಯುವಕನ ಶವ: ಮಾಸ್ಕ್ನಿಂದ ಮೃತದೇಹ ಪತ್ತೆ
ಅಕ್ರಮವಾಗಿ ದನದ ಮಾಂಸ ಸಾಗಿಸ್ತಿದ್ದ ಹಿನ್ನಲೆ. ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ಬೊಲೆರೊ ಹಾಗೂ ಮೂವರು ಆರೋಪಿಗಳನ್ನು ಹಿಡಿಯಲಾಗಿದೆ. ಸ್ಥಳಿಯ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಬೆಂಗಳೂರು: 2 ದಿನದ ಹಿಂದೆ ಎಂ ಸ್ಯಾಂಡ್ ಟಿಪ್ಪರ್ನಲ್ಲಿ ಮೃತದೇಹ ಪತ್ತೆಯಾಗಿದ್ದು, ಒಂದು ಮಾಸ್ಕ್ನಿಂದ ಅಪರಿಚಿತ ಮೃತದೇಹದ ಗುರುತು ಪತ್ತೆ ಮಾಡಲಾಗಿದೆ. ತಮಿಳುನಾಡಿನಿಂದ ಎಂ ಸ್ಯಾಂಡ್ ತುಂಬಿಕೊಂಡು ಬಂದಿದ್ದ ಟಿಪ್ಪರ್, ಬೆಂಗಳುರಿನ ಮಾರತ್ತಹಳ್ಳಿ ಪೊಲೀಸರ ತನಿಖೆ ವೇಳೆ ಮಾಸ್ಕ್ ಪತ್ತೆಯಾಗಿದೆ. ಮಾಸ್ಕ್ ಮೇಲಿನ ಹೆಸರು ನೋಡಿ ಹೊಸಕೋಟೆ ಸುತ್ತ ವಿಚಾರಣೆ ಮಾಡಲಾಗಿದ್ದು, ಮೇ 5ರಿಂದ ಪಿಯು ವಿದ್ಯಾರ್ಥಿ ಸೋಮನಾಥ ನಾಪತ್ತೆಯಾಗಿದ್ದ. ಹೊಸಕೋಟೆಯಲ್ಲಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೇ 6ರಂದು ಎಂ ಸ್ಯಾಂಡ್ ಟಿಪ್ಪರ್ನಲ್ಲಿ ಯುವಕನ ಶವ ಸಿಕ್ಕಿತ್ತು. ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್ನೋಟ್ ಸಹ ಸಿಕ್ಕಿತ್ತು. ಕಾಲೇಜು ಯುವತಿ ಜತೆ ಚಾಟ್ ಮಾಡಿದ್ದು, ಕಾಲೇಜಿನ ಗ್ರೂಪ್ಗೆ ಸ್ಕ್ರೀನ್ ಶಾಟ್ ಕೆಲವು ಯುವಕರು ಹಾಕಿದ್ದಾರೆ. ಇದೇ ವಿಚಾರಕ್ಕೆ ಬೇಸರದಿಂದ ಯುವಕ ಸೋಮನಾಥ ಮನೆಬಿಟ್ಟಿದ್ದ. ವಿಷಸೇವಿಸಿ ಟಿಪ್ಪರ್ನಲ್ಲಿ ಮಗಿದ್ದಾಗ ಯುವಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಯುವಕ ಟಿಪ್ಪರ್ ಒಳಗೆ ಇದ್ದಾಗ ಕ್ರಷರ್ನಲ್ಲಿ ಎಂ ಸ್ಯಾಂಡ್ ಸುರಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ಕಾರಣ ತಿಳಿಯಬಹುದಾಗಿದೆ.
ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದವರ ಬಂಧನ
ಚಿಕ್ಕಬಳ್ಳಾಫುರ: ಅಕ್ರಮವಾಗಿ ದನದ ಮಾಂಸ ಸಾಗಿಸ್ತಿದ್ದ ಹಿನ್ನಲೆ. ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ಬೊಲೆರೊ ಹಾಗೂ ಮೂವರು ಆರೋಪಿಗಳನ್ನು ಹಿಡಿಯಲಾಗಿದೆ. ಸ್ಥಳಿಯ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆಂದ್ರ ಮೂಲದ ಎ.ಪಿ.39, ಟಿಕ್ಯೂ 2663 ಬೊಲೆರೊ ವಾಹನ. ಆಂದ್ರದ ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ದನಸ ಮಾಂಸ ಸಾಗಾಟ ಮಾಡಲಾಗುತ್ತಿತ್ತು. ಮುಖ್ಯ ರಸ್ತೆಗಳ ಬದಲು ಹಳ್ಳಿ ರಸ್ತೆಗಳಲ್ಲೊಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ
ತುಮಕೂರು: ನಗರದ ಜಯನಗರ ಹಾಗೂ ತಿಲಕ್ ಪಾರ್ಕ್ ಪೊಲೀಸರ ಕಾರ್ಯಚರಣೆಯಿಂದ ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಅಸಾಮಿಗಳ ಬಂಧನ ಮಾಡಲಾಗಿದೆ. ಬಂಧಿತರಿಂದ 16 ದ್ವಿಚಕ್ರ ವಾಹನಗಳು ವಶ ಪಡಿಸಿಕೊಂಡಿದ್ದು, ಅನೈತಿಕ ಚಟುವಟಿಕೆ ಹಾಗೂ ವಿಲ್ಹಿಂಗ್ಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ತುಮಕೂರು ನಗರದಲ್ಲಿ ಬೈಕ್ ಕಳ್ಳತನ ಹೆಚ್ಚಾಗಿದ್ದು, ಈ ಸಂಬಂಧ ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಪೊಲೀಸರು ಬಲೆಬಿಸಿದ್ದರು. ಆರೋಪಿಗಳ ಬಂಧನದಿಂದ ನಗರದ ತಿಲಕ್ ಪಾರ್ಕ್, ಜಯನಗರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವುವಾಗಿದ್ದ 16 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.