ಸೇಡು ತೀರಿಸಿಕೊಳ್ಳಿ: ವಿಜಯೋತ್ಸವ ಪರೇಡ್​ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೀರಾವೇಶದ ಭಾಷಣ

2ನೇ ಮಹಾಯುದ್ಧದ ವೀರೋಚಿತ ಹೋರಾಟದ ನೆನಪುಗಳನ್ನು ಮತ್ತೆ ನೇವರಿಸಿ ರಷ್ಯನ್ನರು ಸಂಘರ್ಷಕ್ಕೆ ಸಜ್ಜಾಗಬೇಕು. ದ್ವೇಷ ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು

ಸೇಡು ತೀರಿಸಿಕೊಳ್ಳಿ: ವಿಜಯೋತ್ಸವ ಪರೇಡ್​ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೀರಾವೇಶದ ಭಾಷಣ
ವ್ಲಾದಿಮಿರ್ ಪುಟಿನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 09, 2022 | 10:43 AM

ಮಾಸ್ಕೊ: 1945ರಲ್ಲಿ ನಾಜಿ ಜರ್ಮನಿ ವಿರುದ್ಧ ರಷ್ಯಾ ಯುದ್ಧ ಜಯಿಸಿದಂತೆಯೇ 2022ರಲ್ಲಿಯೂ ನಾವು ಗೆಲುವು ಸಾಧಿಸಲಿದ್ದೇವೆ. 2ನೇ ಮಹಾಯುದ್ಧದಲ್ಲಿ ನಾಜಿಗಳನ್ನು ಸೋಲಿಸಲು ಶ್ರಮಿಸಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳಿಗೆ ಅಭಿನಂದನೆಗಳು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು. 2ನೇ ಮಹಾಯುದ್ಧದಲ್ಲಿ ಬರ್ಲಿನ್ ವಶಪಡಿಸಿಕೊಂಡು, ವಿಜಯ ಘೋಷಿಸಿದ 77ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸೈನಿಕರು 1945ರಂತೆ ಇಂದಿಗೂ ಕೊಳಕು ನಾಜಿಗಳ ವಿರುದ್ಧ ಹೋರಾಡುತ್ತಿದ್ದಾರೆ. 1945ರ ಮಾದರಿಯಲ್ಲಿ ಈ ಬಾರಿಯೂ ಗೆಲುವು ನಮ್ಮದೇ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಷ್ಯಾ ಉಕ್ರೇನ್ ಯದ್ಧ ಕುರಿತು ಮತ್ತಷ್ಟು ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಹಲವು ದೇಶಗಳ ಜನರನ್ನು ಬಾಧಿಸಿದ ನಾಜಿ ವಾದ ಮತ್ತೆ ಬೆಳೆಯಲು ಅವಕಾಶ ಕೊಡಬಾರದು. ತಮ್ಮ ತಂದೆ ಮತ್ತು ತಾತಂದಿರ ನೆನಪುಗಳ ಉತ್ತರಾಧಿಕಾರಿಗಳಾಗಲು ಮುಂದಿನ ತಲೆಮಾರು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ಲೆಕ್ಕವಿಲ್ಲದಷ್ಟು ತ್ಯಾಗಗಳ ಮೂಲಕ ನಮ್ಮ ದೇಶದಲ್ಲಿ ನಾಜಿ ವಾದವನ್ನು ಮಣಿಸಿದೆವು. ಇಂಥ ತ್ಯಾಗ ಮಾಡಿದ ಸೈನಿಕರು ಮತ್ತು ನಾಗರಿಕರನ್ನು ನಾನು ಸ್ಮರಿಸುತ್ತೇನೆ ಎಂದು ಪುಟಿನ್ ಹಲವು ಬಾರಿ ಹೇಳಿದರು. ‘ದುರಂತವೆಂದರೆ ಇಂದು ನಾಜಿ ವಾದವು ಮತ್ತೊಂದು ರೀತಿಯಲ್ಲಿ ತನ್ನ ತಲೆ ಎತ್ತುತ್ತಿದೆ. ಫ್ಯಾಸಿಸ್ಟ್​ಗಳ ಹಿಡಿತದಲ್ಲಿರಯವ ಉಕ್ರೇನ್, ರಷ್ಯಾಕ್ಕೆ ಮತ್ತು ಉಕ್ರೇನ್​ನಲ್ಲಿರುವ ರಷ್ಯನ್ ಭಾಷಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಈಗಿನ ಉಕ್ರೇನ್ ಆಡಳಿತದಲ್ಲಿರುವ ನಾಜಿ ವಾದಿಗಳಿಂದ ಅಪಾಯವಿದೆ’ ಎಂದು ವಿಶ್ಲೇಷಿಸಿದರು.

ನಾವು 77 ವರ್ಷಗಳ ಹಿಂದೆ ಯಾವ ವಾದವನ್ನು ಸೋಲಿಸಿದ್ದೇವೆಯೋ ಅದೇ ವಾದ ಈಗ ಮತ್ತೆ ವಿಜೃಂಭಿಸುತ್ತಿದೆ. 2ನೇ ಮಹಾಯುದ್ಧದ ವೀರೋಚಿತ ಹೋರಾಟದ ನೆನಪುಗಳನ್ನು ಮತ್ತೆ ನೇವರಿಸಿ ರಷ್ಯನ್ನರು ಸಂಘರ್ಷಕ್ಕೆ ಸಜ್ಜಾಗಬೇಕು. ದ್ವೇಷ ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಕ್ರೇನ್​ನ ಎಲ್ಲ ನಿವಾಸಿಗಳಿಗೆ ನಾನು ಶಾಂತಿಯುತ ಬದುಕಿನೊಂದಿಗೆ ಉತ್ತಮ ಭವಿಷ್ಯವನ್ನು ಆಶಿಸುತ್ತೇನೆ ಎಂದರು. 2ನೇ ಮಹಾಯುದ್ಧವನ್ನು ‘ದೇಶಭಕ್ತಿಯ ಯುದ್ಧ’ (ಗ್ರೇಸ್ ಪೇಟ್ರಿಯಾಟಿಕ್ ವಾರ್) ಎಂದು ಕರೆಯುವ ರಷ್ಯಾ ಪ್ರತಿ ವರ್ಷ ಮೇ 9ರಂದು ವಿಜಯೋತ್ಸವ ಪರೇಡ್​ಗಳನ್ನು ನಡೆಸುತ್ತದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೂಚನೆಯಂತೆ ರಷ್ಯನ್ ಪಡೆಗಳು ಫೆಬ್ರುವರಿ 24ರಂದು ವಿಶೇಷ ಕಾರ್ಯಾಚರಣೆಗಾಗಿ ಉಕ್ರೇನ್ ಪ್ರವೇಶಿಸಿದವು. ಉಕ್ರೇನ್​ನ ಮಿಲಿಟರಿ ಶಕ್ತಿ ಕಡಿಮೆ ಮಾಡುವುದು ಮತ್ತು ನಾಜಿ ವಾದವನ್ನು ಸೋಲಿಸುವುದು ರಷ್ಯಾದ ಉದ್ದೇಶ ಎಂದು ಘೋಷಿಸಲಾಗಿದೆ. ಉಕ್ರೇನ್ 1991ರವರೆಗೂ ರಷ್ಯಾದ ಭಾಗವೇ ಆಗಿತ್ತು.

ಇದನ್ನೂ ಓದಿ: ಮೇ 9ರ ಒಳಗೆ ಉಕ್ರೇನ್ ಯುದ್ಧ ಮುಗಿಸುವ ಆತುರ ರಷ್ಯಾಕ್ಕೆ ಇಲ್ಲ: ಪುಟಿನ್ ಆಪ್ತ ಲಾವ್​ರೊವ್

ಇದನ್ನೂ ಓದಿ: Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ