Mother Teresa: ಬಡತನ ಒಳ್ಳೆಯದೆಂದು ಭಾವಿಸಿದ್ದರು; ಮದರ್ ತೆರೆಸಾರ ಇನ್ನೊಂದು ಮುಖದ ಮೇಲೆ ಬೆಳಕು ಚೆಲ್ಲಿದ ಸಾಕ್ಷ್ಯಚಿತ್ರ

ಮದರ್ ತೆರೇಸಾ ಬಗ್ಗೆ ತಯಾರಿಸಲಾಗಿರುವ ಮೂರು ಭಾಗದ ಸ್ಕೈ ಸಾಕ್ಷ್ಯಚಿತ್ರ ಸರಣಿಯಾದ 'ಮದರ್ ತೆರೇಸಾ: ಫಾರ್ ದಿ ಲವ್ ಆಫ್ ಗಾಡ್‌'ನಲ್ಲಿ ಅವರ ಇನ್ನೊಂದು ಮುಖದ ಅನಾವರಣ ಮಾಡಲಾಗಿದೆ.

Mother Teresa: ಬಡತನ ಒಳ್ಳೆಯದೆಂದು ಭಾವಿಸಿದ್ದರು; ಮದರ್ ತೆರೆಸಾರ ಇನ್ನೊಂದು ಮುಖದ ಮೇಲೆ ಬೆಳಕು ಚೆಲ್ಲಿದ ಸಾಕ್ಷ್ಯಚಿತ್ರ
ಮದರ್ ತೆರೇಸಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 09, 2022 | 3:59 PM

ಮದರ್ ತೆರೇಸಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಅಸಹಾಯಕರಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮದರ್ ತೆರೇಸಾ (Mother Teresa) ಜಗತ್ತಿನಲ್ಲಿ ಪ್ರೀತಿ, ವಾತ್ಸಲ್ಯವನ್ನು ಹಂಚಿದವರು. ಭಾರತದಲ್ಲಿ ಸುಮಾರು 45ಕ್ಕೂ ಹೆಚ್ಚು ವರ್ಷಗಳ ಕಾಲ ಬಡ ರೋಗಿಗಳ ಸೇವೆ ಮಾಡಿದ ಮದರ್ ತೆರೇಸಾ ಅವರ ಸೇವಾ ಗುಣವನ್ನು ಗಮನಿಸಿ ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ನೀಡಲಾಗಿದೆ. ಮದರ್ ತೆರೇಸಾ ಯುದ್ಧಗಳನ್ನು ನಿಲ್ಲಿಸಿದರು, ಅಧ್ಯಕ್ಷರೊಂದಿಗೆ ಸ್ನೇಹ ಸಂಬಂಧ ಬೆಳೆಸಿಕೊಂಡರು, ಅನಾಥಾಶ್ರಮಗಳ ಸಾಮ್ರಾಜ್ಯವನ್ನು ನಿರ್ಮಿಸಿ, ಅನಾರೋಗ್ಯದಿಂದ ಬಳಲುತ್ತಿದ್ದ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವಂತೆಯೂ ಮಾಡಿದರು. ಆದರೂ ಮಾತೃ ವಾತ್ಸವ್ಯವೇ ತುಂಬಿ ತುಳುಕುವಂತಿದ್ದ ಮದರ್ ತೆರೇಸಾ ಕೂಡ ಕ್ಯಾಥೋಲಿಕ್ ಚರ್ಚ್​​ನ ಕೆಟ್ಟ ಮಿತಿಗಳ ಬಗ್ಗೆ ಮುಚ್ಚಿಟ್ಟರು ಮತ್ತು ಜನರಿಗೆ ಬಡತನದಿಂದ ಪಾರಾಗಲು ಸಹಾಯ ಮಾಡುವುದಕ್ಕಿಂತ ಬಡತನ ಮತ್ತು ನೋವಿನ ಕಡೆಗೆ ಹೆಚ್ಚು ಆಕರ್ಷಿತರಾದರು. ಬಡತನವೆಂಬುದು ಒಳ್ಳೆಯದು ಎಂದು ಅವರು ಭಾವಿಸಿದ್ದರು ಎಂದು ಹೊಸ ಸಾಕ್ಷ್ಯಚಿತ್ರವೊಂದು ಮದರ್ ತೆರೇಸಾ ಅವರ ಇನ್ನೊಂದು ಮುಖವನ್ನು ತೆರೆದಿಟ್ಟಿದೆ.

ಮದರ್ ತೆರೇಸಾ ಬಗ್ಗೆ ತಯಾರಿಸಲಾಗಿರುವ ಮೂರು ಭಾಗದ ಸ್ಕೈ ಸಾಕ್ಷ್ಯಚಿತ್ರ ಸರಣಿಯಾದ ‘ಮದರ್ ತೆರೇಸಾ: ಫಾರ್ ದಿ ಲವ್ ಆಫ್ ಗಾಡ್‌’ನಲ್ಲಿ ಅವರ ಇನ್ನೊಂದು ಮುಖದ ಅನಾವರಣ ಮಾಡಲಾಗಿದೆ. ಮದರ್ ತೆರೇಸಾ ಅವರ ಕೆಲವು ನಿಕಟ ಸ್ನೇಹಿತರು ಮತ್ತು ಕಟುವಾದ ವಿಮರ್ಶಕರೊಂದಿಗೆ ಈ ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಲಾಗಿದೆ. ಕಳೆದ ಶತಮಾನದ ಅತ್ಯಂತ ಪ್ರಸಿದ್ಧ ಮಹಿಳೆಯೊಬ್ಬರ ಬಗ್ಗೆ ಸಂಪೂರ್ಣ ಮರುಮೌಲ್ಯಮಾಪನ ಮಾಡಲು ಈ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ. (Source)

1910ರಲ್ಲಿ ಉತ್ತರ ಮೆಸಿಡೋನಿಯಾದ ಸ್ಕೋಪ್ಜೆಯಲ್ಲಿ ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು ಜನಿಸಿದ ಮದರ್ ತೆರೇಸಾ ಅವರ ಮೊದಲ ಹೆಸರು ಆಗ್ನೆಸೇ ಗೋನ್​ಕ್ಸೆ ಬೋಜಕ್ಸಿಯು. ಮದರ್ ತೆರೆಸಾ ಅವರ ತಂದೆ ಅವರು ಎಂಟು ವರ್ಷದವಳಿದ್ದಾಗ ಕುಟುಂಬವನ್ನು ಬಡತನಕ್ಕೆ ತಳ್ಳಿದರು. ಆಕೆಯನ್ನು ಚರ್ಚ್‌ನಲ್ಲಿ ಸಾಕಲಾಯಿತು. ತನ್ನ 12ನೇ ವಯಸ್ಸಿನಲ್ಲಿ ಅವರು ಸನ್ಯಾಸಿನಿಯಾಗಲು ನಿರ್ಧರಿಸಿದರು. ತನ್ನ 18ನೇ ವಯಸ್ಸಿನಲ್ಲಿ ಅವರು ಕ್ಯಾಥೋಲಿಕ್ ಸಿಸ್ಟರ್ಸ್ ಆಫ್ ಲೊರೆಟೊ ಆರ್ಡರ್‌ಗೆ ಸೇರಲು ಡಬ್ಲಿನ್‌ಗೆ ಹೋದರು. ನಂತರ ಒಂದು ವರ್ಷದ ಬಳಿಕ ಅವರು ಶಿಕ್ಷಕರಾಗಲು ಕೊಲ್ಕತ್ತಾಕ್ಕೆ ತೆರಳಿದರು. 1943ರ ಬಂಗಾಳದ ಕ್ಷಾಮದಿಂದ ಉಂಟಾದ ದುಃಖ ಮತ್ತು ಸಾವಿಗೆ ಅವರು ಸಾಕ್ಷಿಯಾದರು. ಆ ವೇಳೆ ಹಲವಾರು ಮೃತದೇಹಗಳು ಬೀದಿಗಳಲ್ಲಿ ಬಿದ್ದುದನ್ನು ನೋಡಿದ ಅವರ ಮೇಲೆ ಆ ದೃಶ್ಯ ಬಹಳ ಆಳವಾದ ಪ್ರಭಾವ ಬೀರಿತು. 1950ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಕೊಲ್ಕತ್ತಾದಲ್ಲಿ ಸ್ಥಾಪಿಸಿದ ಮದರ್ ತೆರೇಸಾ ಸುಮಾರು 45 ವರ್ಷಗಳ ಕಾಲ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

mother teresa 1

ಮದರ್ ತೆರೇಸಾ

ನಾನು ಕಾನ್ವೆಂಟ್ ತೊರೆದು ಬಡವರಿಗೆ ಸಹಾಯ ಮಾಡಬೇಕೆಂಬುದು ಜೀಸಸ್​ನ ಆದೇಶವಾಗಿತ್ತು ಎಂದು ಮದರ್ ತೆರೇಸಾ ಹೇಳಿಕೊಂಡಿದ್ದಾರೆ. ನೀಲಿ ಅಂಚು ಹೊಂದಿರುವ ಸರಳವಾದ ಬಿಳಿ ಕಾಟನ್ ಸೀರೆ ಧರಿಸತೊಡಗಿದ ಮದರ್ ತೆರೇಸಾ ಆರಂಭದಿಂದಲೂ ಜನರ ಮೇಲೆ ಸಹಾನುಭೂತಿ ಮತ್ತು ಪ್ರೀತಿಯನ್ನು ತೋರಿಸತೊಡಗಿದರು.

ಹೊಸ ಸಾಕ್ಷ್ಯಚಿತ್ರದಲ್ಲಿ 20 ವರ್ಷಗಳ ಕಾಲ ಮದರ್ ತೆರೇಸಾ ಅವರೊಂದಿಗೆ ಕೆಲಸ ಮಾಡಿದ ಮೇರಿ ಜಾನ್ಸನ್ ಮಾತನಾಡಿದ್ದು, ಅವರು ಬಡವನಾಗಿರುವುದೇ ಒಳ್ಳೆಯದು ಎಂದು ಭಾವಿಸಿದ್ದರು. ಜೀಸಸ್ ಬಡವನಾಗಿದ್ದರಿಂದ ಬಡವನಾಗಿರುವುದು ಒಳ್ಳೆಯದು ಎಂದು ಅವರು ಭಾವಿಸಿದ್ದರು. ಇದು ಸ್ಕಿಜೋಫ್ರೇನಿಕ್ ಆಗಿದೆ ಎಂದು ಉಲ್ಲೇಖಿಸಿದ್ದಾರೆ.

ಮದರ್ ತೆರೇಸಾ ಅವರು ಕ್ಯಾಥೋಲಿಕ್ ಚರ್ಚ್‌ನ ಕೆಟ್ಟ ಮಿತಿಗಳನ್ನು ಮುಚ್ಚಿಹಾಕಿದರು ಮತ್ತು ಜನರು ಅದರಿಂದ ಪಾರಾಗಲು ಸಹಾಯ ಮಾಡುವುದಕ್ಕಿಂತ ಬಡತನ ಮತ್ತು ನೋವಿನ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು ಎಂದು ವರದಿಯು ತಿಳಿಸಿದೆ. ಈ ಕುರಿತು ಡೈಲಿ ಮೇಲ್ ವರದಿ ಮಾಡಿದ್ದು, ಇಂದು (ಮೇ 9) ಸ್ಕೈ ಡಾಕ್ಯುಮೆಂಟರಿಗಳಲ್ಲಿ ಪ್ರಸಾರವಾಗಲಿದೆ.

ಮುಖ್ಯವಾಗಿ, ಮದರ್ ತೆರೇಸಾ ಅವರ ಜೀವನದ ಕೊನೆಯ ದಶಕವು ಬಹುಶಃ ಅತ್ಯಂತ ಕಷ್ಟಕರವಾಗಿತ್ತು. ಅವರು ವೃದ್ಧಾಪ್ಯದೊಂದಿಗೆ ಹೋರಾಡುತ್ತಿದ್ದರು. ಆದರೆ ಪುರೋಹಿತರಿಂದ ಮಕ್ಕಳ ನಿಂದನೆಯ ಹೆಚ್ಚುತ್ತಿರುವ ಹಗರಣದಿಂದ ಅದನ್ನು ಉಳಿಸಲು ಸಹಾಯ ಮಾಡಲು ಚರ್ಚ್ ಅವಳನ್ನು ಕರೆಯುತ್ತಿತ್ತು. ಮದರ್ ತೆರೇಸಾ ಅವರ ಆಪ್ತ ಸ್ನೇಹಿತರಾಗಿದ್ದ ನಾಗರಿಕ ಸೇವಕ ನವೀನ್ ಚಾವ್ಲಾ ಅವರು ಪ್ರಾದೇಶಿಕ ಲೆಫ್ಟಿನೆಂಟ್-ಗವರ್ನರ್‌ಗೆ ಕುಷ್ಠರೋಗದಿಂದ ಬಳಲುತ್ತಿರುವವರನ್ನು ನೋಡಿಕೊಳ್ಳಲು ಸ್ವಲ್ಪ ಜಾಗವನ್ನು ಕೇಳಿದಾಗ ಅದಕ್ಕೆ ಅವರು ಒಪ್ಪಿದರು. ಅವರು ನಿರೀಕ್ಷಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಭೂಮಿಯನ್ನು ನೀಡಲಾಗಿತ್ತು. ಮದರ್ ತೆರೇಸಾ ಸಮಚಿತ್ತದ ವ್ಯಕ್ತಿತ್ವದವರಾಗಿದ್ದರು. ಅವರು ಸ್ವಲ್ಪ ಹಠಮಾರಿಯಾಗಿದ್ದರು. ಅವರನ್ನು ಪ್ರೀತಿಸದೆ ಇರಲು ಕಾರಣವೇ ಇರಲಿಲ್ಲ ಎಂದು ಹೇಳಿದ್ದಾರೆ.

ಮದರ್ ತೆರೇಸಾ ರಾತ್ರೋರಾತ್ರಿ ಪ್ರಸಿದ್ಧರಾದರು, ಬೇಕಾದಷ್ಟು ಹಣದ ಹೊಳೆಯೂ ಹರಿಯಿತು, 1979ರಲ್ಲಿ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು. ಆದರೆ ಎಲ್ಲವೂ ಅಂದುಕೊಂಡಂತೆ ಆಗಿದೆಯೇ? ಬ್ರಿಟಿಷ್ ವೈದ್ಯ ಜ್ಯಾಕ್ ಪ್ರೆಗರ್ ತನ್ನ ಚಾರಿಟಿಯೊಂದಿಗೆ ಮದರ್ ತೆರೇಸಾ ಮತ್ತು ಇತರರು ಕೆಲಸ ಮಾಡಿದ ಪ್ರಾರಂಭದಿಂದಲೂ ಸಮಸ್ಯೆಗಳಿವೆ ಎಂದು ಸಾಕ್ಷ್ಯಚಿತ್ರದ ಸರಣಿಯಲ್ಲಿ ತೋರಿಸಲಾಗಿದೆ. ಸನ್ಯಾಸಿನಿಯರು ಸರಿಯಾದ ಆರೈಕೆಯನ್ನು ನೀಡುತ್ತಿಲ್ಲ ಎಂದು ಅವರು ಹೇಳುತ್ತಾರೆ. ಸೂಜಿಗಳನ್ನು ಶುದ್ಧೀಕರಿಸದೆ ಪದೇ ಪದೇ ಬಳಸಲಾಗುತ್ತಿತ್ತು. ಸುಟ್ಟ ಗಾಯಗಳಿರುವ ಒಬ್ಬ ಮಹಿಳೆಗೆ ನೋವು ನಿವಾರಕಗಳನ್ನು ನಿರಾಕರಿಸಲಾಯಿತು. ನಾನು ಗುಟ್ಟಾಗಿ ಆಕೆಗೆ ಚಿಕಿತ್ಸೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಬಡ ಜನರಿಗೆ ಯೋಗ್ಯವಾದ ಆಸ್ಪತ್ರೆಯನ್ನು ನಡೆಸಲು ಅವರ ಬಳಿ ಹಣವಿತ್ತು. ಆದರೆ ಅವರು ಎಂದಿಗೂ ಆ ರೀತಿ ಮಾಡಲಿಲ್ಲ. ಚಿಕಿತ್ಸೆ ನೀಡದೆ ನೋವು ನಿವಾರಣೆಗಾಗಿ ಜೀಸಸ್​ನಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳುತ್ತಲೇ ಎಲ್ಲರ ಪ್ರೀತಿ, ಗೌರವವನ್ನು ಗಳಿಸಿದರು. ಕೆಲವು ಹಗರಣದಲ್ಲಿ ಮದರ್ ತೆರೇಸಾ ಅವರ ಒಳಗೊಳ್ಳುವಿಕೆಯನ್ನು ಮುಚ್ಚಿಹಾಕಲಾಯಿತು. ಅವರು ನಿಜವಾಗಿಯೂ ಸಂತಳೇ? ಅಥವಾ ಪಾಪಿಯೇ? ಅಥವಾ ಎರಡರಲ್ಲೂ ಸ್ವಲ್ಪವೇ? ಈ ಬಗ್ಗೆ ಖಚಿತ ಉತ್ತರ ಸಿಕ್ಕಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Mon, 9 May 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?