ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸ್ಥಗಿತಗೊಳಿಸಿದೆ ಎಂಬ ಮಮತಾ ಬ್ಯಾನರ್ಜಿ ಆರೋಪಕ್ಕೆ ಕೇಂದ್ರ ಸ್ಪಷ್ಟನೆ
ಎಫ್‌ಸಿಆರ್‌ಎ 2010 ಮತ್ತು ವಿದೇಶಿ ಕೊಡುಗೆ ನಿಯಂತ್ರಣ ನಿಯಮಗಳು 2011ರ ಅಡಿಯಲ್ಲಿ ಅರ್ಹತಾ ಷರತ್ತುಗಳನ್ನು ಪೂರೈಸದ ಕಾರಣಕ್ಕಾಗಿ ಡಿಸೆಂಬರ್ 25 ರಂದು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ನೋಂದಣಿಯ ನವೀಕರಣದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.
ಕೊಲ್ಕತ್ತಾ: ಮದರ್ ತೆರೇಸಾ (Mother Teresa) ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿಯ (Missionaries of Charity) ಎಲ್ಲಾ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸ್ಥಗಿತಗೊಳಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಹೇಳಿದ್ದಾರೆ. ಈ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು 22,000 ರೋಗಿಗಳು ಮತ್ತು ಕೊಲ್ಕತ್ತಾ ಪ್ರಧಾನ ಚಾರಿಟಬಲ್ ಗುಂಪಿನ ನೌಕರರು ಕೇಂದ್ರ ಸರ್ಕಾರದ ಕ್ರಮದಿಂದ ಆಹಾರ ಮತ್ತು ಔಷಧಿಗಳಿಲ್ಲದೆ ಕಂಗಾಲಾಗಿದ್ದಾರೆ ಎಂದಿದ್ದಾರೆ. ಕಾನೂನು ಅತ್ಯುನ್ನತವಾಗಿದ್ದರೂ ಮಾನವೀಯ ಪ್ರಯತ್ನಗಳನ್ನು ರಾಜಿ ಮಾಡಿಕೊಳ್ಳಬಾರದು ಎಂದು ಬ್ಯಾನರ್ಜಿ ಹೇಳಿದ್ದಾರೆ. ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಸಹವಾಸಿಗಳ ಬಲವಂತದ ಮತಾಂತರದ ವರದಿಗಳ ಮೇಲೆ ಬಾಲಕಿಯರಿಗಾಗಿ ಚಾರಿಟಿ ನಡೆಸುತ್ತಿರುವ ಹೋಮ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
Shocked to hear that on Christmas, Union Ministry FROZE ALL BANK ACCOUNTS of Mother Teresa’s Missionaries of Charity in India!
Their 22,000 patients & employees have been left without food & medicines.
While the law is paramount, humanitarian efforts must not be compromised.
— Mamata Banerjee (@MamataOfficial) December 27, 2021
ಹುಡುಗಿಯರಿಗೆ ಬೈಬಲ್ ಓದಲು ಹೇಳಲಾಗುತ್ತಿದೆ ಮತ್ತು ಇತರ ಸಮುದಾಯಗಳಿಗೆ ಸೇರಿದವರ ಕೆಲವು ವಿವಾಹಗಳನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪೊಲೀಸರು ಮಾತನಾಡಿದರು. ಆದರೆ, ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿರುವ ಸನ್ಯಾಸಿನಿಯೊಬ್ಬರು ಆರೋಪವನ್ನು ಅಲ್ಲಗಳೆದಿದ್ದರು.
ಸ್ಪಷ್ಟನೆ ನೀಡಿದ ಕೇಂದ್ರ ಎಫ್‌ಸಿಆರ್‌ಎ 2010 ಮತ್ತು ವಿದೇಶಿ ಕೊಡುಗೆ ನಿಯಂತ್ರಣ ನಿಯಮಗಳು 2011ರ ಅಡಿಯಲ್ಲಿ ಅರ್ಹತಾ ಷರತ್ತುಗಳನ್ನು ಪೂರೈಸದ ಕಾರಣಕ್ಕಾಗಿ ಡಿಸೆಂಬರ್ 25 ರಂದು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ನೋಂದಣಿಯ ನವೀಕರಣದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ. ಮಿಷನರೀಸ್ ಆಫ್ ಚಾರಿಟಿ ಸ್ವತಃ ತನ್ನ ಖಾತೆಗಳನ್ನು ಫ್ರೀಜ್ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಿನಂತಿ ಕಳುಹಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಮಿಷನರೀಸ್ ಆಫ್ ಚಾರಿಟಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಕೇಂದ್ರವು ಸ್ಥಗಿತಗೊಳಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ನಂತರ ಸಚಿವಾಲಯ ಹೇಳಿಕೆ ನೀಡಿದೆ. ಈ ನವೀಕರಣದ ನಿರಾಕರಣೆಯನ್ನು ಪರಿಶೀಲಿಸಲು ಮಿಷನರೀಸ್ ಆಫ್ ಚಾರಿಟಿಯಿಂದ ಯಾವುದೇ ವಿನಂತಿ ಅಥವಾ ಪರಿಷ್ಕರಣೆ ಅರ್ಜಿಯನ್ನು ಸ್ವೀಕರಿಸಲಾಗಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
FCRA ನೋಂದಣಿ ಸಂಖ್ಯೆ 147120001 ರ ಅಡಿಯಲ್ಲಿ ನೋಂದಾಯಿಸಲಾದ ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯು ಅಕ್ಟೋಬರ್ 31, 2021 ರವರೆಗೆ ಮಾನ್ಯವಾಗಿದೆ. ನವೀಕರಣ ಅರ್ಜಿಗಳು ನವೀಕರಣಕ್ಕೆ ಬಾಕಿ ಇರುವ ಇತರ FCRA ಅಸೋಸಿಯೇಷನ್‌ಗಳ ಜೊತೆಗೆ ಸಿಂಧುತ್ವವನ್ನು ನಂತರ ಡಿಸೆಂಬರ್ 31, 2021 ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮಿಷನರೀಸ್ ಆಫ್ ಚಾರಿಟಿಯ ನವೀಕರಣ ಅರ್ಜಿಯನ್ನು ಪರಿಗಣಿಸುವಾಗ, ಕೇಂದ್ರ ಸರ್ಕಾರದ ಪ್ರಕಾರ ಕೆಲವು ಪ್ರತಿಕೂಲ ಸಂಗತಿಗಳನ್ನು ಗಮನಿಸಲಾಗಿದೆ.
“ದಾಖಲೆಯಲ್ಲಿರುವ ಈ ಇನ್‌ಪುಟ್‌ಗಳನ್ನು ಪರಿಗಣಿಸಿ ಮಿಷನರೀಸ್ ಆಫ್ ಚಾರಿಟಿಯ ನವೀಕರಣ ಅರ್ಜಿಯನ್ನು ಅನುಮೋದಿಸಲಾಗಿಲ್ಲ. ಮಿಷನರೀಸ್ ಆಫ್ ಚಾರಿಟಿಯ ಯ FCRA ನೋಂದಣಿಯು 31ನೇ ಡಿಸೆಂಬರ್ 2021 ರವರೆಗೆ ಮಾನ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
“ಗೃಹ ಸಚಿವಾಲಯ ಯಾವುದೇ ಮಿಷನರೀಸ್ ಆಫ್ ಚಾರಿಟಿಯ ಖಾತೆಗಳನ್ನು ಫ್ರೀಜ್ ಮಾಡಿಲ್ಲ. ತನ್ನ ಖಾತೆಗಳನ್ನು ಫ್ರೀಜ್ ಮಾಡಲು ಮಿಷನರೀಸ್ ಆಫ್ ಚಾರಿಟಿಯೇ ಎಸ್‌ಬಿಐಗೆ ವಿನಂತಿಯನ್ನು ಕಳುಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Published On - 6:14 pm, Mon, 27 December 21