ಗದಗ: ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿಯಾಗಿದ್ದು, ಆತನ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಬಡ್ಡಿ (Interest) ವ್ಯವಹಾರಕ್ಕೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಯುವಕ ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಇಂದು ಜಿಮ್ಸ್ (Gims) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾರ್ಚ್ 23 ರಂದು ರೌಡಿ ಶೀಟರ್ ಗ್ಯಾಂಗ್ ಬಡ್ಡಿ ಹಣಕ್ಕಾಗಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಮೂರು ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು. 29 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ದಂಧೆಕೋರರು 2 ಲಕ್ಷ ಸಾಲಕ್ಕೆ ಒಂದು ಲಕ್ಷ ಬಡ್ಡಿ ಹಣಕ್ಕೆ ಒತ್ತಾಯಿಸಿದ್ದರು.
ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಅಂತ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಎದೆ ಬಡೆದುಕೊಂಡು ದುಃಖಿಸುತ್ತಿರುವ ತಾಯಿ, ನಿಮಗೆ ಕೋಟಿ ರೂ. ಕೊಡುತ್ತೇನೆ. ನನಗೆ ನನ್ನ ಮಗನನ್ನ ತಂದುಕೊಡಿ. ನನ್ನ ಮಗನನ್ನ ಕೊಂದ ರಕ್ಕಸರಿಗೆ ಗಲ್ಲಿಗೇರಿಸಿ. ನನ್ನ ಮಗನ ಮದುವೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆ. ಇಂತಹ ಸಣ್ಣ ವಯಸ್ಸಿನಲ್ಲಿಯೇ ಏನೂ ಕಾಣದೆ ಹೋದ ನನ್ನ ಮುದ್ದಿನ ಮಗ ಎಂದು ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ನನ್ನ ಮಗನಿಗಾದ ಶಿಕ್ಷೆ ಅವರಿಗೂ ಆಗಬೇಕು. ಕೊಲೆಗಾರರಿಗೂ ಗಲ್ಲು ಶಿಕ್ಷೆ ಆಗಬೇಕು ಅಂತ ಯುವಕನ ತಾಯಿ ಒತ್ತಾಯಿಸಿದ್ದಾರೆ.
ಚಾಕುವಿನಿಂದ ಬೆದರಿಸಿ ದರೋಡೆ:
ನೆಲಮಂಗಲ: ಆಟೋ ಚಾಲಕನಿಗೆ ಚಾಕುವಿನಿಂದ ಬೆದರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿ ಹೆದ್ದಾರಿ 4ರಲ್ಲಿ ನಡೆದಿದೆ. ಆಟೋ ಚಾಲಕ ರಾಜಣ್ಣ ಅವರ ಬಳಿ ಇದ್ದ ನಗದು ಸೇರಿದಂತೆ ಒಂದು ಲಕ್ಷ ಬೆಲೆ ಬಾಳುವ ವಸ್ತುಗಳನ್ನು ದೋಚಿ ಬೈಕ್ನಲ್ಲಿ ಬಂದಿದ್ದ ಮೂವರು ಪರಾರಿಯಾಗಿದ್ದಾರೆ.
ಕಲ್ಲು ಎತ್ತಿ ಹಾಕಿ ಹತ್ಯೆ:
ಕೋಲಾರ: ಬಂಗಾರಪೇಟೆಯ ಕಾರಹಳ್ಳಿಯಲ್ಲಿ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಕಾರಹಳ್ಳಿ ರುದ್ರಭೂಮಿಯಲ್ಲಿ ಕೊಲೆ ನಡೆದಿದೆ. ಮೃತ ದುರ್ದೈವಿ ಹರೀಶ್ (23) ಕೆರೆಕೋಡಿ ನಿವಾಸಿ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಗುಂಡು ತಗುಲಿ ವ್ಯಕ್ತಿ ಸಾವು:
ಕೊಡಗು: ವಿರಾಜಪೇಟೆ ತಾಲೂಕಿ ಗುಂಡಿಗೆರೆಯಲ್ಲಿ ಬೇಟೆಗೆ ತೆರಳಿದ್ದಾಗ ಗುಂಡು ತಗುಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ 30 ವರ್ಷದ ಹಮೀದ್ ಮೃತಪಟ್ಟಿದ್ದಾರೆ. ಬೇಟೆಗಾಗಿ ಹಮೀದ್, ಅಶ್ರಫ್, ರಫೀಕ್ ಕಾಫಿ ತೋಟಕ್ಕೆ ತೆರಳಿದ್ದರು. ಆಕಸ್ಮಿಕವಾಗಿ ಗುಂಡು ತಗುಲಿ ಹಮೀದ್ಗೆ ಗಂಭೀರ ಗಾಯವಾಗಿತ್ತು.ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹಮೀದ್ ಸಾವನ್ನಪ್ಪಿದ್ದಾರೆ. ರಫೀಕ್, ಅಶ್ರಫ್ನನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಸಲಿಂಗಕಾಮ ಪಾತ್ರದಿಂದ ಈ ದೇಶಗಳಲ್ಲಿ ಬ್ಯಾನ್ ಆದ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾ
ಹಿಜಾಬ್ ಪ್ರೋತ್ಸಾಹಿಸಿದರೆ ಮತ್ತೊಂದು ವಿಭಜನೆ, ದೇಶ ಒಡೆಯುವುದೇ ಅವರ ಸಂಚು: ಸಿಟಿ ರವಿ ಗಂಭೀರ ಆರೋಪ
Published On - 12:47 pm, Sat, 23 April 22