ಕಾರವಾರ: ಸೇತುವೆ ಮೇಲೆ ಕಾರ್ ಮತ್ತು ಬೈಕ್ (car and bike accident) ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ನದಿಗೆ ಬಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ. ಅಕ್ಷಯ್ (26), ಸುನೀಲ್ (27) ನದಿಗೆ ಬಿದ್ದ ಬೈಕ್ ಸವಾರರು. ಕಾರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಯುವಕರು ನದಿಗೆ ಬಿದಿದ್ದಾರೆ. ಈಜುತ್ತಾ ದಡಕ್ಕೆ ಬಂದ ಓರ್ವ ಸುನೀಲ್, ಇನ್ನೋರ್ವ ನಾಪತ್ತೆಯಾಗಿದ್ದು, ನಾಪತ್ತೆಯಾದ ಅಕ್ಷಯಗಾಗಿ ಹುಡಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಈಜು ತಜ್ಞರು, ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೊನ್ನಾವರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ವಿಷ ಸೇವಿಸಿ ಮಹಿಳೆಯರಿಬ್ಬರು ಆತ್ಮಹತ್ಯೆಗೆ ಯತ್ನ; ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು:
ಗದಗ: ವಿಷ ಸೇವಿಸಿ ಮಹಿಳೆಯರಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರಿನಲ್ಲಿ ಘಟನೆ ನಡೆದಿದೆ. ವಿಷ ಸೇವಿಸಿದ್ದ ಓರ್ವ ರೈತ ಮಹಿಳೆ ಚಿಕಿತ್ಸೆ ಫಲಿಸದೆ ನಿರ್ಮಲಾ ಪಾಟೀಲ್(34) ಸಾವನ್ನಪ್ಪಿದ್ದಾರೆ. ಮತ್ತೋರ್ವ ರೈತ ಮಹಿಳೆ ಸರೋಜಾ ಸ್ಥಿತಿ ಗಂಭೀರವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ರೈತ ಮಹಿಳೆ ಸರೋಜಾಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಕೇಲೂರ ಗ್ರಾಮದಲ್ಲಿ ಇನ್ನು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಿರ್ಮಲಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ವಾಹನಗಳು ಬಿಟ್ಟು ಅರಣ್ಯ ಹಾಗೂ ಪೊಲೀಸ್ ಇಲಾಖೆ ಬಚಾವ್ ಆಗಿದ್ದಾರೆ. ಮುಂಡರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
500 ರೂ. ಒಂದು ಕೀ ಪ್ಯಾಡ್ ಫೋನ್ಗಾಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ:
ಬೆಂಗಳೂರು: 500 ರೂಪಾಯಿ, ಒಂದು ಕೀ ಪ್ಯಾಡ್ ಫೋನ್ಗಾಗಿ ಕೊಲೆ ನಡೆದಿದೆ. ಕಾಮಾಕ್ಷಿಪಾಳ್ಯ ಬಾರ್ ಮುಂದೆ ಈ ಘಟನೆ ನಡೆದಿದೆ. ಕುಡಿದು ಬೀದಿ ಬದಿ ಮಲಗಿದ್ದವರನ್ನ ಟಾರ್ಗೆಟ್ ಮಾಡ್ತಾಯಿದ್ದ ಆರೋಪಿಗಳು, ಕುಡಿದ ನಶೆಯಲ್ಲಿ ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಅದೇ ರೀತಿ ಮೃತ ಸತೀಶ್ ಬಳಿ ಕಳ್ಳತನ ಮಾಡಲು ಯತ್ನಿಸಿದ್ದು, ಈ ವೇಳೆ ಎಚ್ಚರಗೊಂಡಿದ್ದ ಸತೀಶ್ ವಿರೋಧಿಸಿದ್ದಾನೆ. ಈ ಹಿನ್ನಲೆ ಸಿಮೆಂಟ್ ಹಾಲೊ ಬ್ಲಾಕ್ನ ತಲೆ ಮೇಲೆ ಎತ್ತಿ ಹಾಕಿ ಆರೋಪಿಗಳು ಕೊಲೆಗೈದಿದ್ದಾರೆ. ಸದ್ಯ ಆರೋಪಿಯನ್ನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂಜು ಅಡ್ಡೆ ಮೇಲೆ ಪೋಲಿಸರ ದಾಳಿ; ನಾಲ್ವರ ಬಂಧನ:
ತುಮಕೂರು: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ನಾಲ್ವರನ್ನ ಸೆರೆ ಹಿಡಿದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗುಬ್ಬಿ ಸಿಪಿಐ ನದಾಪ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ನಾಲ್ವರ ಬಂಧನ ಮಾಡಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದು, ಬಂಧಿತರಿಂದ 10.580 ರೂ ಹಾಗೂ 4 ಮೊಬೈಲ್ 5 ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: