ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಗಳ ಬಂಧನ!

ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್​ಗೆ ನುಗ್ಗಿ ಹೋಟೆಲ್ ಮಾಲೀಕ ಸೇರಿದಂತೆ ಸಿಬ್ಬಂದಿಗಳ ಮೇಲೆ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಇದೇ ಹೋಟೆಲ್​ನಲ್ಲಿ ಗಲಾಟೆ ಮಾಡಿದ್ದರು ಎಂದು ಹೋಟೆಲ್ ಮಾಲೀಕ ಹೇಳಿದ್ದಾರೆ.

ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಗಳ ಬಂಧನ!
ಸಾಂದರ್ಭಿಕ ಚಿತ್ರ
Edited By:

Updated on: Aug 02, 2022 | 1:45 PM

ಬೆಳಗಾವಿ: ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪುಡಿ ರೌಡಿಗಳನ್ನು ಇಂದು ಬಂಧನ ಮಾಡಲಾಗಿದೆ. ಕಳೆದ ರಾತ್ರಿ ಬೈಲಹೊಂಗಲ ಪಟ್ಟಣದ ಗ್ರೀನ್ ಗಾರ್ಡನ್ ಹೋಟೆಲ್​ನ​ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರಾಜು ಕಡಕೋಳ, ರಾಜು ತಟ್ಟಿಮನಿ, ಶಶಿಕುಮಾರ್ ಇಳಿಗೇರ, ವೆಂಕಟೇಶ ದಾಸೋಗ, ಬಸವರಾಜ ಅಂಬಾಜಿ ರೌಡಿಗಳನ್ನು ಬೈಲಹೊಂಗಲ ಪೊಲೀಸರು ಬಂಧನ ಮಾಡಿದ್ದಾರೆ.

ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್​ಗೆ ನುಗ್ಗಿ ಹೋಟೆಲ್ ಮಾಲೀಕ ಸೇರಿದಂತೆ ಸಿಬ್ಬಂದಿಗಳ ಮೇಲೆ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಇದೇ ಹೋಟೆಲ್​ನಲ್ಲಿ ಗಲಾಟೆ ಮಾಡಿದ್ದರು ಎಂದು ಹೋಟೆಲ್ ಮಾಲೀಕ ಹೇಳಿದ್ದಾರೆ. ಇದೀಗ ದುಷ್ಕರ್ಮಿಗಳ ವಿರುದ್ಧ ಕೇಸ್ ಕೊಟ್ಟಿದ್ದಕ್ಕೆ ಮತ್ತೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ
Fake Recruitment: ಪಶುಸಂಗೋಪನೆ ಇಲಾಖೆ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ ಕಿಡಿಗೇಡಿಗಳು
Bengaluru: ನಿರುದ್ಯೋಗಿ ಯುವಕರನ್ನು ಬಳಸಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್​ನ ಬಂಧನ
Mohammad Fazil: ಫಾಜಿಲ್ ಹತ್ಯೆ ಪ್ರಕರಣ; ತಡರಾತ್ರಿ ಪೊಲೀಸರ ಕಾರ್ಯಾಚರಣೆ, ನಾಲ್ವರ ಬಂಧನ
ಸೂರತ್ಕಲ್​​ ಬೀಚ್ ನಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕಾಮುಕ ಮುನಾಜ್ ಅರೆಸ್ಟ್

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಘಟನೆ ನಡೆದ ಎರಡೇ ಗಂಟೆಯಲ್ಲಿ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ.

Published On - 1:43 pm, Tue, 2 August 22

TV9 Web

TV9 Kannada

Read More
Loading...
Unable to load recommendations.
Follow Us