ಗಾಂಜಾ ಮತ್ತಿನಲ್ಲಿ ಮೂವರು ಯುವಕರ ಪುಂಡಾಟ: ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯ

ಕೋಲಾರ ತಾಲೂಕಿನ ಕೊಂಡರಾಜನಹಳ್ಳಿಯಲ್ಲಿ ತಡರಾತ್ರಿಯಲ್ಲಿ ಗಾಂಜಾ ಮತ್ತಿನಲ್ಲಿ ಮೂವರು ಯುವಕರು ಪುಂಡಾಟ ಮಾಡಿದ್ದು, ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯಗೊಳಿಸಿರುವಂತಹ ಘಟನೆ ನಡೆದಿದೆ. ಪುಂಡ ಯುವಕರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಪರಾರಿ ಆಗಿದ್ದಾನೆ. 

ಗಾಂಜಾ ಮತ್ತಿನಲ್ಲಿ ಮೂವರು ಯುವಕರ ಪುಂಡಾಟ: ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯ
ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 21, 2024 | 8:07 AM

ಕೋಲಾರ, ಜನವರಿ 21: ಗಾಂಜಾ (ganja) ಮತ್ತಿನಲ್ಲಿ ಮೂವರು ಯುವಕರು ಪುಂಡಾಟ ಮಾಡಿದ್ದು, ಪ್ರಶ್ನೆ ಮಾಡಿದ ಗ್ರಾಮಸ್ಥನ ಕೈ ಕಚ್ಚಿ ಗಾಯಗೊಳಿಸಿರುವಂತಹ ಘಟನೆ ಕೋಲಾರ ತಾಲೂಕಿನ ಕೊಂಡರಾಜನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಕೊಂಡರಾಜನಹಳ್ಳಿ ನಿವಾಸಿ ನಾಗರಾಜ್​ ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಪುಂಡ ಯುವಕರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಪರಾರಿ ಆಗಿದ್ದಾನೆ.

ಲಕ್ಷಾಂತರ ರೂ ಮೌಲ್ಯದ ಕುರಿ, ಮೇಕೆಗಳ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳರ ಭಯಾನಕ ದೃಶ್ಯ

ಬೆಂಗಳೂರು ಗ್ರಾಮಾಂತರ: ಮಧ್ಯರಾತ್ರಿ ರಾಡ್ ಮತ್ತು ದೊಣ್ಣೆಗಳನ್ನು ಹಿಡಿದು ಎಂಟ್ರಿಕೊಟ್ಟ ಖದೀಮರು ಕ್ಷಣ ಮಾತ್ರದಲ್ಲೆ ಲಕ್ಷ ಲಕ್ಷ ರೂ. ಮೌಲ್ಯದ ಕುರಿ ಮತ್ತು ಮೇಕೆಗಳನ್ನು ಕದ್ದು ಎಸ್ಕೇಪ್ ಆಗಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಾಲದಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಕಂಡ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಲಸ್ಸಿ ಕೆಫೆಗೆ ನುಗ್ಗಿ ಮ್ಯಾನೇಜರ್​​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ

ಹನುಮಕ್ಕ ಎನ್ನುವವರು ತನ್ನ ಹೊಟ್ಟೆಗೆ ಸರಿಯಾಗಿ ಊಟ ಮಾಡಿಲ್ಲ ಅಂದ್ದರು ಕುರಿ ಮೇಕೆಗಳ ಹೊಟ್ಟೆ ತುಂಬಿಸೋಕ್ಕೆ ನಿತ್ಯ ಕುರಿ ಕಾಯಲು ಹೋಗುತ್ತಿದ್ದರು. ಜೊತೆಗೆ ಕಳೆದ ಎರಡು ವರ್ಷದಿಂದ ಕಷ್ಟಪಟ್ಟು ಹಗಲು ರಾತ್ರಿ ಮೇಕೆಗಳನ್ನ ಮೇಯಿಸಿದ್ದು 40ಕ್ಕೂ ಅಧಿಕ ಕುರಿಗಳನ್ನ ಸಾಕಿಕೊಂಡಿದ್ದರು. ಅದೇ ರೀತಿ ನಿನ್ನೆ ಸಹ ಕುರಿಗಳನ್ನ ಕೊಟ್ಟಿಗೆಯಲ್ಲಿ ಹಾಕಿ ಮನೆಯಲ್ಲಿದ್ದರೆ, ಇತ್ತ ಗ್ರಾಮಕ್ಕೆ ಸೈಲೆಂಟ್ ಆಗಿ ಬಂದ ಖದೀಮರು ನೇರವಾಗಿ ಕುರಿ ಕೊಟ್ಟಿಗೆಗೆ ನುಗ್ಗಿದ್ದಾರೆ.

ಜೊತೆಗೆ ಕೈನಲ್ಲಿ ರಾಡ್ ಮತ್ತು ದೊಣ್ಣೆಗಳನ್ನಿಡಿದು ಬೊಲೆರೋ ಗೂಡ್ಸ್ ವಾಹನದಲ್ಲಿ ಬಂದ ಖದೀಮರು ಕ್ಷಣ ಮಾತ್ರದಲ್ಲೆ ಉತ್ತಮವಾಗಿ ಬೆಲೆ ಬಾಳುವ ಕೊಬ್ಬಿದ ಕುರಿ ಮತ್ತು ಮೇಕೆಗಳನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಕೋಲಾರ: ಮಾಧವ ಗುರ್ಜೇನಹಳ್ಳಿಯಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ: ಅರಶಿನ ಶಾಸ್ತ್ರದ ವೇಳೆ ಅಧಿಕಾರಿಗಳಿಂದ ದಾಳಿ

ಜೊತೆಗೆ ಒಂದು ಮನೆಯಲ್ಲಿ ಕಳ್ಳತನ ಮಾಡಿ, ಮತ್ತೊಂದು ಮನೆಗೆ ಹೋಗುತ್ತಿದ್ದ ವೇಳೆ ಕುರಿಗಳು ಕಿರುಚಿದ್ದು ಗ್ರಾಮಸ್ಥರು ಒಟ್ಟಾಗಿ ರಸ್ತೆಗೆ ಬಂದು ಕಳ್ಳರನ್ನ ನೋಡಿದ್ದಾರೆ. ಈ ವೇಳೆ ಗ್ರಾಮಸ್ಥರನ್ನ ಕಾಣ್ತಿದ್ದಂತೆ ಖದೀಮರು ಸ್ಥಳದಿಂದ ಕುರಿಗಳ ಸಮೇತ ಬಂದಿದ್ದ ಗಾಡಿಯಲ್ಲಿ ಎಸ್ಕೇಪ್ ಆಗಿದ್ದಾರೆ. ಇದೇ ರೀತಿ ಕಳೆದೊಂದು ತಿಂಗಳಿನಿಂದ ದೇವನಹಳ್ಳಿ ಸುತ್ತಾಮುತ್ತಲಿನ ಹತ್ತಾರು ಗ್ರಾಮಗಲ್ಲಿ ಕಳ್ಳರು ಜಾನುವಾರುಗಳನ್ನ ಕಳ್ಳತನ ಮಾಡಿಕೊಂಡು ಹೋಗ್ತಿದ್ದು ಪೊಲೀಸರು ಮಾತ್ರ ಕ್ರಮ ಕೈಗೊಳ್ತಿಲ್ಲ ಅಂತ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:36 am, Sun, 21 January 24

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?