Crime: ಹೀಗೊಬ್ಬ ಕಮರ್ಷಿಯಲ್ ಕಳ್ಳ; ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿ

Bangalore: ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿಯೊಬ್ಬ ಕಮರ್ಷಿಯಲ್ ಕಾಂಪ್ಲೆಕ್ಸ್​ಗಳಿಗೆ ನುಗ್ಗಿ ತನ್ನ ಕೈಚಳಕವನ್ನು ತೋರಿಸಿ ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

Crime: ಹೀಗೊಬ್ಬ ಕಮರ್ಷಿಯಲ್ ಕಳ್ಳ; ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿ
ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಚೇತನ್ ಮತ್ತು ಕಮರ್ಷಿಯಲ್ ಕಳ್ಳ ಗೊಲ್ಲರಂಗಪ್ಪ
Follow us
TV9 Web
| Updated By: Rakesh Nayak Manchi

Updated on:Oct 02, 2022 | 1:53 PM

ಬೆಂಗಳೂರು: ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿಯೊಬ್ಬ ಕಳ್ಳತನದ ಚಾಳಿ ಬಿಡದೆ ಅದರಲ್ಲಿ ತೊಡಗಿಕೊಂಡು ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಗೊಲ್ಲರಂಗಪ್ಪ (40) ಎಂಬ ಆರೋಪಿ ಈ ಮೊದಲು ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿ ಮರಾಟದಲ್ಲಿ ತೊಡಗಿದ್ದನು. ಅದರಂತೆ 5 ವರ್ಷ ಸಜೆ ಅನುಭವಿಸಿದ್ದ ಈತ ಜೈಲಿನಿಂದ ಬಿಡುಗಡೆಯಾದ ನಂತರ ಬೇರೊಂದು ರೂಪದಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾನೆ. ಶ್ರೀಗಂಧದ ಮರಗಳ ಕಳ್ಳತನ ಬಿಟ್ಟು ಕಮರ್ಷಿಯಲ್ ಕಾಂಪ್ಲೆಕ್ಸ್​ಗಳಿಗೆ ನುಗ್ಗಿ ತನ್ನ ಕೈಚಳಕವನ್ನು ತೋರಿಸಲು ಪ್ರಾರಂಭಿಸಿದನು. ಹೀಗೆ ಅನೇಕ ಪ್ರಕರಣಗಳಲ್ಲಿ ತೊಡಗಿದ್ದ ಗೊಲ್ಲರಂಗಪ್ಪನನ್ನು ಇದೀಗ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನದಿಂದ 8 ಪ್ರಕರಣಗಳು ಬೆಳಕಿಗೆ ಬಂದಿದ್ದು, ಆರೋಪಿಯ ಬಳಿಯಿಂದ 10 ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದಾರೆ.

ಹುಕ್ಕಾ ಬಾರ್​​ ಮೇಲೆ ಸಿಸಿಬಿ ಪೊಲೀಸರ ದಾಳಿ

ಇಂದಿರಾನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್​​ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅದರಂತೆ ಹುಕ್ಕಾ ಬಾರ್ ಮಾಲೀಕ‌, ಮ್ಯಾನೇಜರ್ ಹಾಗೂ ಕ್ಯಾಶಿಯರ್ ವಿರುದ್ಧ ಪ್ರಕರಣವನ್ನು ದಾಖಲಿಸಿದ ಸಿಸಿಬಿ ಪೊಲೀಸರು, ಸುಮಾರು 70 ಸಾವಿರ ಮೌಲ್ಯದ ಹುಕ್ಕಾ ತಯಾರಿಸುವ ಪರಿಕರಗಳು, ಹುಕ್ಕಾ ಫ್ಲೇವರ್​​ಗಳು ಸೇರಿದಂತೆ ಎರಡೂವರೆ ಸಾವಿರ ನಗದು ಜಪ್ತಿ ಮಾಡಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೊಬೈಲ್ ಕಳವು ಮಾಡಿ ಮಾರಾಟ

ಮೊಬೈಲ್ ಫೋನ್‌ಗಳನ್ನ ಕಳವು ಮಾಡಿದ ನಂತರ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ  ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದ್ದು, ಶೇಷಾದ್ರಿಪುರಂ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ರಹೀಂ ಪಾಶಾ (29) ಬಂಧಿತ ಆರೋಪಿಯಾಗಿದ್ದಾನೆ. ಸ್ಲಂ ಬೋರ್ಡ್ ಬಳಿ ಅನುಮಾಸ್ಪದವಾಗಿ ಮೊಬೈಲ್ ಮಾರಾಟದಲ್ಲಿ ತೊಡಗಿದ್ದ ರಹೀಂನನ್ನು ತಡೆದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಕಳ್ಳತನ ಬಗ್ಗೆ ತಿಳಿದುಬಂದಿದೆ. ಹೀಗಾಗಿ ರಹೀಂನನ್ನು ವಶಕ್ಕೆ ಪಡೆದ ಪೊಲೀಸರು, ಬಂಧಿತನಿಂದ 40 ಸಾವಿರ ಮೌಲ್ಯದ 8 ಮೊಬೈಲ್ ಫೋನ್‌ಗಳು ವಶಕ್ಕೆ ಪಡೆದಿದ್ದಾರೆ.

ಕನ್ನ ಕಳವು ಆರೋಪಿಯ ಬಂಧನ

ಹಾಡುಹಗಲೇ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಆಸಾಮಿಯನ್ನು ಮಹದೇವಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ. ಚೇತನ್ ಕುಮಾರ್(23) ಬಂಧಿತ ಆರೋಪಿ. ಮಹದೇವಪುರ ಠಾಣಾ ವ್ಯಾಪ್ತಿಯ ಅಬ್ಬಯ್ಯ ಲೇಔಟ್​ನಲ್ಲಿ ಕೈಚಳಕ ತೋರಿಸಿದ್ದ ಆರೋಪಿ, ಮನೆಯ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ದೋಚಿದ್ದನು. ಈ ಹಿಂದೆ ಸಹಚರನ ಜೊತೆ ಸೇರಿ ಬಸ್​ನಲ್ಲಿ ಚಿನ್ನದ ಸರ ಎಗರಿಸಿದ್ದನು. ಸದ್ಯ ಈತನ ಬಂಧನದಿಂದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಂಟು ಲಕ್ಷ ಮೌಲ್ಯದ 164 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Sun, 2 October 22

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ