ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದ ಪ್ರಕರಣ: ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಯಲಿಗೆ
ವ್ಯಕ್ತಿಯೊಬ್ಬರನ್ನು ಅವರ ಮನೆ ಟರೇಸ್ ಮೇಲೆಯೇ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಚಂದ್ರಶೇಖರ್ ಎಂಬವರನ್ನು ಅವರ ಮನೆಯ ಟರೇಸ್ ಮೇಲೆಯೇ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಸಂದರ್ಭದಲ್ಲಿ ಚಂದ್ರಶೇಖರ್ ಪತ್ನಿ ಮತ್ತು ಆಕೆಯ ಸ್ನೇಹಿತನ ಮೇಲೆ ಶಂಕೆ ವ್ಯಕ್ತವಾಗಿತ್ತು. ಅದರಂತೆ ಮಹಿಳೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆಯ ಅಕ್ರಮ ಸಂಬಂಧದ ವಿಚಾರ ತಿಳಿದುಬಂದಿದೆ. ಪತಿ ತನ್ನ ಅಕ್ರಮ ಸಂಭಂದಕ್ಕೆ ಅಡ್ಡಿಯಾಗುತ್ತಿದ್ದ ಎಂದು ಸ್ನೇಹಿತನ ಮಾತು ಕೇಳಿ ಮನೆಯ ಟರೇಸ್ ಮೇಲೆ ಇಬ್ಬರು ಕೂಡಿ ಕೊಲೆ ಮಾಡಿದ್ದಾಗಿ ಪೊಲೀಸರು ವಿಚಾರಣೆ ವೇಳೆ ಮಹಿಳೆ ಬಾಯಿಬಿಟ್ಟಿದ್ದಾಳೆ.
ಚಂದ್ರಶೇಖರ್ ಮತ್ತು ಶ್ವೇತ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ನಡುವೆ 16 ವರ್ಷ ಅಂತರವಿದ್ದರೂ ಅಕ್ಕನ ಮಗಳು ಎಂಬ ಕಾರಣಕ್ಕೆ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು. ಮದುವೆಯ ಬಳಿಕ ನೆಮ್ಮದಿಯ ಜೀವನ ಇಬ್ಬರಿಗೂ ಇರಲಿಲ್ಲ. ಶ್ವೇತಾಳಿಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರು ಇರುವುದರಿಂದ ಈ ವಿಚಾರದಲ್ಲಿ ದಂಪತಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಈ ನಡುವೆ ಹಿಂದುಪುರದ ಸುರೇಶ್ ಎಂಬಾತನೊಂದಿಗೆ ಶ್ವೇತಾ ಸಂಪರ್ಕದಲ್ಲಿದ್ದಳು. ಪತಿ ಇಲ್ಲದ ಸಮಯದಲ್ಲಿ ಇಬ್ಬರೂ ಒಟ್ಟು ಸೇರುತ್ತಿದ್ದರು. ಈ ನಡುವೆ ಪತಿ ಇದ್ದಾರೆ, ಇದೆಲ್ಲಾ ಕಷ್ಟಾ ಎಂದು ಶ್ವೇತಾ ಸುರೇಶ್ ಬಳಿ ಹೇಳಿದ್ದಾಳೆ. ಇದಕ್ಕೆ ಸುರೇಶ್ ಕೊಟ್ಟ ಪ್ಲಾನ್ ಕೊಲೆ.
ತಮ್ಮ ಸಂಬಂಧಕ್ಕೆ ಅಡ್ಡಿ ಬರುವ ನಿನ್ನ ಪತಿಯನ್ನು ಕೊಂದು ಬಿಡು ಎಂದು ಸುರೇಶ್ ಶ್ವೇತಾಗೆ ಹೇಳಿದ್ದಾನೆ. ಈತನ ಮಾತು ಕೇಳಿದ ಶ್ವೇತ ಪತಿಯ ಕೊಲೆಗೆ ಮುಂದಾಗಿದ್ದಾಳೆ. ಅದರಂತೆ ಪೂರ್ವ ತಯಾರಿ ನಡೆಸಿಕೊಂಡು ಸುರೇಶ್ ಶ್ವೇತಾಳ ಮನೆಗೆ ಬಂದಿದ್ದು, ಚಂದ್ರಶೇಖರ್ ಟರೇಸ್ ಮೇಲೆ ಇದ್ದಾಗ ಹಲ್ಲೆ ನಡೆಸಿ ಕೊಂದು ಹಾಕಿದ್ದರು.
ಈ ಕೊಲೆ ಪ್ರಕರಣ ಅಕ್ಟೋಬರ್ 22ರಂದು ನಡೆದಿತ್ತು. ಆರಂಭದಲ್ಲಿ ಶ್ವೇತಾಳನ್ನು ಪ್ರಾಥಮಿಕ ತನಿಖೆ ನಡೆಸಿದಾಗ ಆಕೆ ಪೊಲೀಸರ ಮುಂದೆ, ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಳು. ಅದಾಗ್ಯೂ ಪೊಲೀಸರಿಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶ್ವೇತಾ ತನ್ನ ಮತ್ತು ಸುರೇಶ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಸದ್ಯ ಕೊಲೆ ಆರೋಪಿ ಸುರೇಶ್ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Wed, 26 October 22