ಬೆಂಗಳೂರು, ಫೆ.21: ಮನೆಯ ಆಚೆ ಕಾಸ್ಟಿ ಶೂಗಳನ್ನು ಬಿಡುವ ಮಂದಿ ಎಚ್ಚರ (Shoe Thief). ಏಕೆಂದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೂ ಕಳ್ಳನೋರ್ವ ಆ್ಯಕ್ಟಿವ್ ಆಗಿದ್ದಾನೆ. ಈತ ಮಹಿಳೆಯರಂತೆ ನೈಟಿ (Nighty) ಹಾಕಿಕೊಂಡು ಬಂದು ಅಪಾರ್ಟ್ಮೆಂಟ್ಗೆ ನುಗ್ಗಿ ಶೂ ಕದಿಯುತ್ತಾನೆ. ಸದ್ಯ ಖತರ್ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅನಿಲ್ ಎಂಬುವವರು ಎಕ್ಸ್ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮಾಡಿ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ತನ್ನ ಗುರುತು ಸಿಗಬಾರದು ಎಂದು ಮಹಿಳೆಯರಂತೆ ನೈಟಿ ಧರಿಸಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳ, ಬೆಂಗಳೂರಿನ ಅಪಾರ್ಟ್ಮೆಂಟ್ಗೆ ನುಗ್ಗಿ ಶೂ ಕದಿಯುತ್ತಾನೆ. ಬೆಳೆಬಾಳುವ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಕಳ್ಳ ಪರಾರಿಯಾಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅನಿಲ್ ಕುಮಾರ್ ಎಂಬಾತ ಕಳ್ಳನ ಕೃತ್ಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಇಂತಹ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಪೋಸ್ಟ್ ಮಾಡಿದ್ದಾರೆ.
@publictvnews, @AsianetNewsSN, @BlrCityPolice Bengaluru be safe and alert, pic.twitter.com/tilBx5rShQ
— anil kumar (@anilbulla) February 20, 2024
ಇದನ್ನೂ ಓದಿ: ಟಿವಿ9 ಹೆಸರು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್, ಆರೋಪಿ ಸೀದಾ ಜೈಲಿಗೆ
ಆಂಧ್ರ ಸಾರಿಗೆ ಬಸ್ ಹರಿದು ಮಗು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿ ರಸ್ತೆ ದಾಟುತ್ತಿದ್ದ ತಾಯಿ, ಇಬ್ಬರು ಮಕ್ಕಳಿಗೆ ಬೈಕ್ ಡಿಕ್ಕಿಯಾಗಿತ್ತು. ರಸ್ತೆಗೆ ಬಿದ್ದವರ ಮೇಲೆ ಆಂಧ್ರ ಸಾರಿಗೆ ಬಸ್ ಹರಿದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮತ್ತೊಂದು ಮಗು, ತಾಯಿ ಸ್ಥಿತಿ ಗಂಭೀರ ಗಾಯಳಾಗಿವೆ.
ಕಾರು ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ 8 ಜನರಿಗೆ ಗಂಭೀರ ಗಾಯಗಳಾಗಿವೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಾರು ಚಾಲಕನ ಅತಿಯಾದ ವೇಗ, ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಅಪಘಾತ ನಂತರ ಪ್ರಜ್ಞಾಹೀನರಾಗಿ ಬಿದ್ದಿದ್ದ ಆಟೋ ಪ್ರಯಾಣಿಕರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ