
ಬೆಂಗಳೂರು, ಜೂನ್ 23: ಸಾಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ (Friends) ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ (Bengaluru) ತಲಘಟ್ಟಪುರದಲ್ಲಿ ರವಿವಾರ ತಡರಾತ್ರಿ ಘಟನೆ ನಡೆದಿದೆ. ನೇಪಾಳ ಮೂಲದ ಬಹದ್ದೂರ್ ಕೊಲೆಯಾದ ವ್ಯಕ್ತಿ. ಮಹೇಂದ್ರ ಕೊಲೆ ಮಾಡಿದ ಆರೋಪಿ. ಬಹದ್ದೂರ್ ಮತ್ತು ಮಹೇಂದ್ರ ನಡುವೆ ರವಿವಾರ (ಜೂ.22) ರಾತ್ರಿ ಸಾಂಬಾರ್ ಮಾಡುವ ವಿಚಾರಕ್ಕೆ ರೂಂನಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು ಬಹದ್ದೂರ್ ಮೇಲೆ ಮಹೇಂದ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಹದ್ದೂರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದನು. ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ: ಮೈಕ್ ಸೆಟ್ಬಾಕ್ಸ್ನಿಂದ ಹೊಡೆದು ಭಿಕ್ಷುಕನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ವಿಕಲಚೇತನ ಮಿತೇಶ್ (36) ಕೊಲೆಯಾದ ಭಿಕ್ಷುಕ. ರಾಜೇಶ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿ ರಾಜೇಶ್ ಕುಮಾರ್ ಸಹ ಬಿಹಾರ ಮೂಲದವನು. ಮಿತೇಶ್ ಮತ್ತು ರಾಜೇಶ್ ಒಂದೇ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಪ್ರೀತಿಸಿದ ಯುವತಿಯಿಂದ ಕಿರುಕುಳ: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣು
ಇಬ್ಬರೂ ವಿಶೇಷಚೇತನರಾಗಿದ್ದು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ರವಿವಾರ (ಜೂ.22) ಮಿತೇಶ್ ಮದ್ಯ ಸೇವಿಸಿ ಬಂದು ರಾಜೇಶ್ ತಾಯಿಗೆ ಬೈದಿದ್ದನು. ಇದರಿಂದ ಕೋಪಗೊಂಡ ರಾಜೇಶ್ ಮೈಕ್ ಸೆಟ್ಅಪ್ ಬಾಕ್ಸ್ನಿಂದ ಮಿತೇಶ್ ತಲೆಗೆ ಹೊಡೆದಿದ್ದಾನೆ. ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಿತೇಶ್ ಮೃತಪಟ್ಟಿದ್ದಾನೆ. ಆರೋಪಿ ರಾಜೇಶ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗೊದೆ.